Posts

Showing posts with the label ಭಾವಗೀತೆ

Nisvana - Playlists

All the songs produced and released as part of the  Nisvana  project are available in the " Nisvana - Bhavageethe " YouTube channel.  For the benefit of listeners, various playlists of these songs are also available as listed below. All songs are  here . Poets  The poems of  Ambikatanayadatta  are  here . The poems of  M Gopalakrishna Adiga  are  here . The poems of  K S Narasimhaswamy  are  here . The poems of Chennaveera Kanavi  are  here . The poems of  Amrutha Someshwar  are  here . The poems of  Lakshmisha Tolpadi  are  here . The poems of P K Parameshwara Bhat  are  here . The poems of  Amshuman K R  are  here . Vocals The songs sung by  Ustad Faiyaz Khan  are  here . The songs sung by  Varijashree  are  here . The songs  sung by  Manasa Holla  are  here . The song...

ನಿಸ್ವನ - ಸಂಧ್ಯಾವಂದನೆ

Image
ನಿಸ್ವನದ ಭಾಗವಾಗಿ... ಕವನ/ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ/ಕೀಬೋರ್ಡ್:  ಬಾಲಕೃಷ್ಣ ರಾವ್ "ನಿಸ್ವನ"ದ ಕಲ್ಪನೆ , ನನ್ನದೇ ಕವನವಾದ "ಸಂಧ್ಯಾವಂದನೆ"ಯೊಂದಿಗೆ ಸದ್ಯಕ್ಕೆ ಕೊನೆಗೊಳ್ಳುತ್ತದೆ. ಇದು ಹಲವು ಸಂಗೀತಶೈಲಿಗಳ (ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಹಾಗೂ Jazz), ಜ್ಞಾನಮೀಮಾಂಸೆಯ ಹಲವು ಮುಖಗಳ, ಅವೆಲ್ಲಕ್ಕೂ ಮಿಗಿಲಾಗಿ, ತೆರೆಯ, ಮರೆಯ, ಕೊನೆಯಿರದ ಸಂಜೆಯ ಧ್ಯಾನ. ಇಲ್ಲಿ, ಗ್ರಹಭೇದ ದಿಂದ ಪ್ರೇರಿತವಾಗಿ, ಷಡ್ಜ ಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹೈಮವತಿ , ರಿಷಭಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಸಂತ್ ಮುಖಾರಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ವಕುಳಾಭರಣ ಹಾಗೂ ಪಂಚಮಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ natural minor scale ( aeolean mode  in G or G minor ) ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗ...

ನಿಸ್ವನ - ಒಂದು ಸಂಜೆ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಒಂದು ಸಂಜೆ " ಎಂಬ ಈ ಕವನ, ಅವರ " ಕಟ್ಟುವೆವು ನಾವು " ಸಂಕಲನದಲ್ಲಿದೆ. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ  ಶ್ಯಾಮ್ ಕಲ್ಯಾಣ್  ರಾಗದಲ್ಲಿರುವ (ತುಸುವಾಗಿ ಯಮನ್ ಕಲ್ಯಾಣ್ ಕೂಡ) ಈ ಹಾಡಿನಲ್ಲಿ, ಸಾರಂಗಿ, ಬಾನ್ಸುರೀ, ಸಿತಾರ್-ಗಳು ಕೇಳುಗರನ್ನು ಸಂಜೆಗೆ ಕರೆದೊಯ್ಯುತ್ತವೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ಒಂದು ಸಂಜೆ ೧ ಮೌನ ತಬ್ಬಿತು ನೆಲವ; ಜುಮ್ಮನೆ ಪುಳಕಗೊಂಡಿತು ಧಾರಿಣಿ; ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ. ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸ...

ನಿಸ್ವನ - ಮುಗಿದಿತ್ತು ಬೀದಿಮಾತು

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಮುಗಿದಿತ್ತು ಬೀದಿಮಾತು " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ.  ಈ ಹಾಡಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಹಾಗೂ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಹೇಮಂತ್ ರಾಗಗಳಿಂದ ಪ್ರೇರಿತವಾದ ರಾಗಸಂಯೋಜನೆಗೆ, ಹಿತವಾದ ಗಿಟಾರ್ ಹಾಗೂ ತಾಳವಾದ್ಯಗಳ ಹಿನ್ನೆಲೆಯಿದೆ. ಇಡೀ ಕವನ ಹೀಗಿದೆ. ಮುಗಿದಿತ್ತು ಬೀದಿಮಾತು ೧ ನೆಲ ಹೊರಳುತಿತ್ತು ನೀರುರುಳುತಿತ್ತು ಬೆಳಕರಳುತಿತ್ತು ಆಗ. ೨ ಬಿರುಗಾಳಿ ಧೂಳಿ ಆಕಾಶ ಕಾಳಿ ಎತ್ತಿತ್ತು ಅಷ್ಟರಾಗ. ೩ ಅಬ್ಬಬ್ಬ ಚುಕ್ಕೆ ಏನೊಂದು ದಿಕ್ಕೆ ಬಾನೆಲ್ಲ ತೂತು ತೂತು. ೪ ಬೆಂಕೆಲ್ಲ ಹೂತು ಮೌನಕ್ಕೆ ಸೋತು ಮುಗಿದಿತ್ತು ಬೀದಿಮಾತು. - ಅಂಬಿಕಾತನಯದತ್ತ ಹೃದಯ ಸಮುದ್ರ: 54 ಪ್ರಕಾಶನ: 1956 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 Interna...

ನಿಸ್ವನ - ನನ್ನ ನಿನ್ನ ಲೋಕ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ/ಕೀಬೋರ್ಡ್:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ನನ್ನ ನಿನ್ನ ಲೋಕ " ಎಂಬ ಈ ಕವನ, ಅವರ " ನಡೆದು ಬಂದ ದಾರಿ " ಸಂಕಲನದಲ್ಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ನಾಟಕುರುಂಜಿ ರಾಗದಲ್ಲಿರುವ ಈ ಹಾಡಿನಲ್ಲಿ, ಶಾಸ್ತ್ರೀಯ ಶೈಲಿಯ ವೀಣೆ ಹಾಗೂ Jazz ಶೈಲಿಯ ಗಿಟಾರ್-ಗಳು ಕೇಳುಗರನ್ನು ಕವನದ ಕನಸಿನ ಲೋಕಕ್ಕೆ ಕೊಂಡೊಯ್ಯುತ್ತವೆ. ಕವನದ ವಿಷಯದಂತೆಯೇ, ಕರ್ನಾಟಕ ಶಾಸ್ತ್ರೀಯ ಹಾಗೂ Jazz ಶೈಲಿಗಳೂ ಹದವಾಗುವ ಕನಸಿನ ಲೋಕವೂ ಇಲ್ಲಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ನನ್ನ ನಿನ್ನ ಲೋಕ ೧ ನನ್ನ ನಿನ್ನ ಲೋಕವೊಂದು ಬೇರೆಯೊಂದು ಇದ್ದರೆ ನನ್ನ ನಿನ್ನ ಜೀವವೆರಡು ಈ ಭವವ ಗೆದ್ದರೆ ತನುವ ತೆರೆಯು ಕರಗಿ ಶುದ್ಧಮನವು ಮೇಲಕೆದ್ದರೆ ಏನು ಗಾಡಿ ಏನು ಮೋಡಿಯಿಂದ ಬಾಳು...

ನಿಸ್ವನ - ಅಗೋ ಅಲ್ಲಿ ದೂರದಲ್ಲಿ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ಗಾಯನ: ವಾರಿಜಾಶ್ರೀ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಕೀಬೋರ್ಡ್ /ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗಣರಾಜ್ಯೊತ್ಸವದ ಶುಭಾಶಯಗಳೊಂದಿಗೆ,   ವಾರಿಜಾಶ್ರೀ ಯವರ ಮಧುರಕಂಠದಲ್ಲಿ  ಅಂಬಿಕಾತನಯದತ್ತ ರ " ಅಗೋ ಅಲ್ಲಿ ದೂರದಲ್ಲಿ " (ಅವರ " ನಾದಲೀಲೆ " ಸಂಕಲನದಲ್ಲಿದೆ). ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಾಂಡ್ ರಾಗದಲ್ಲಿರುವ ಈ ಹಾಡಿನ ಹಿನ್ನೆಲೆಯಲ್ಲಿ ಗಿಟಾರ್, ಸಂತೂರ್ (ಕೀಬೋರ್ಡಿನಲ್ಲಿ ಹೇಮಂತ್ ಕುಮಾರ್ ಅವರು ನುಡಿಸಿರುವುದು)-ಗಳು ಶ್ರಾವಣದ ಮಳೆ ಹನಿಗಳಂತೆ ಎಡೆಬಿಡದೆ ಸುರಿಯುತ್ತವೆ. ಇಡೀ ಕವನ ಹೀಗಿದೆ. ಅಗೋ ಅಲ್ಲಿ ದೂರದಲ್ಲಿ ೧ ಅಗೋ ಅಲ್ಲಿ ದೂರದಲ್ಲಿ ನೆಲದ ಮುಗಿಲ ಮಗ್ಗುಲಲ್ಲಿ ಹಸಿರಿನ ಹಸುಗೂಸದೊಂದು ಆಗ ಈಗ ಹೊರಳುತಿಹುದು ಏನೋ ಎಂತೊ ಒರಲುತಿಹುದು ಆಽ ಹಸಿರ ಒಳಗೆ ಹೊರಗೆ ನೀರ ಬೆಳಕ ತುಣುಕು ಮಿಣುಕು, ಅಲ್ಲಿನಿಂದ ಬಂದೆಯಾ! ಕುಣಿವ ಮಣಿವ ಹೆಡೆಯ ಹಾವು- ಗಳನು ಹಿಡಿದು ತಂ...

ನಿಸ್ವನ - ಮತ್ತೆ ನೆನಪಾಗುತಿದೆ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ನಳಿನಕಾಂತಿ ಯಲ್ಲಿದೆ. ಇಲ್ಲಿ ವೀಣೆ ಹಾಗೂ ಗಿಟಾರ್-ಗಳು ಹದವಾದ ನೆನಪಿನ ಲೋಕದ ಚಿತ್ರ ಬರೆಯುತ್ತವೆ. ಇಡೀ ಕವನ ಹೀಗಿದೆ. ಮತ್ತೆ ನೆನಪಾಗುತಿದೆ ೧ ಕಣ್ಣೀರ ಬಟ್ಟಲಲಿ ಹೊಳೆವ ಮುತ್ತಿನ ಮಾಲೆ, ಬಣ್ಣಗಳ ಮಿಂಚು, ಬೆಳಕು! ಪನ್ನೀರ ಪರಿಮಳದ ಹವಳ ಹಲ್ಲಿನ ಸಾಲು, ಮೊಗದಗಲ ನಗೆಯ ಥಳಕು! ೨ ಬರಡು ಬದುಕಿನ ಬಯಲಲೆತ್ತರದ ನುಡಿಬೆಟ್ಟ, ಬಿತ್ತರದ ಹನಿನೀರ ಕೊಳವು. ಹರಿವ ಕಣ್ಣೋಟದಾ ಸೀಮೆಯಿಲ್ಲದ ತೋಟ ಹತ್ತಿರದ ಸುಮನಸರ ಸುಳಿವು. ೩ ಮತ್ತೆ ನೆನಪಾಗುತಿದೆ, ಮೆತ್ತಗಿನ ಮನದಲ್ಲಿ, ಕೃತ್ತಿಕೆಯ ಮಾಲೆಯಂತೆ. ನಿಂತ ಗಡಿಯಾರದಾ ಹಳೆಯ ಮುಳ್ಳುಗಳಂತೆ ಮಲೆನಾಡ ಮಾವಿನಂತೆ… - ಪಿ ಕೆ ಪರಮೇಶ್ವರ ಭಟ್ ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0...

ನಿಸ್ವನ - ನಸುಕು ಬಂತು ನಸುಕು ೨

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಸಾರಂಗಿ:  ಸರ್ಫ಼ರಾಜ಼್ ಖಾನ್ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ನಸುಕು ಬಂತು ನಸುಕು " ಎಂಬ ಈ ಕವನ, ಅವರ " ಗಂಗಾವತರಣ " ಸಂಕಲನದಲ್ಲಿದೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ  ಈಗಾಗಲೇ ಹಾಡಿದ್ದೇನೆ . ಅಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ ರಾಗವಾದರೆ, ಇಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ  ನಂದ್  ಆಧಾರವಾಗಿದ್ದು, ಸಾರಂಗಿ, ಸಿತಾರ್, ತಬಲಾಗಳ ಆಹ್ಲಾದಕರ ಹಿಮ್ಮೇಳವಿದೆ. ಇಡೀ ಕವನ ಹೀಗಿದೆ. ನಸುಕು ಬಂತು ನಸುಕು ೧ ಬೆಳಗು ಗಾಳಿ ತಾಕಿ ಚಳಿತು ಇರುಳ ಮರವು ಒಡೆದು ತಳಿತು ಅರುಣ ಗಂಧ ಹರುಹಿ ಒಳಿತು ನಸುಕು ಬಂತು ೨ ಬೆಳಕು ಬಳ್ಳಿ ಬಿಟ್ಟು ಕುಡಿ ಬಯಲಲೆತ್ತಿ ಹಗಲಗುಡಿ ಅಡಗಿಸಿಟ್ಟು ರವಿಯ ಮಿಡಿ ನಸುಕು ಬಂತು. ೩ ಬೆಳಗು ಸೂಸುತಿರಲು ಸುಸಿಲು...

ನಿಸ್ವನ - ನನ್ನ ನಿನ್ನ ನಡುವೆ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ನನ್ನ ನಿನ್ನ ನಡುವೆ " ಎಂಬ ಈ ಕವನ, ಅವರ " ನಡೆದು ಬಂದ ದಾರಿ " ಸಂಕಲನದಲ್ಲಿದೆ. ಮನಮುಟ್ಟುವ ಗಿಟಾರ್ ಹಾಗೂ ವಯೊಲಿನ್-ಗಳಿಂದ ಕೂಡಿದ ಈ ಹಾಡಿನ ಪಲ್ಲವಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ C major scale  (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಚಾರುಕೇಶಿ  ರಾಗಗಳು ಒಂದರ ಹಿಂದೆ ಇನ್ನೊಂದರಂತೆ, ಮತ್ತೆ ಮತ್ತೆ ಬಂದರೆ, ಚರಣದಲ್ಲಿ  C major -ಇನ relative minor ,  A minor -ಅನ್ನು (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ಹಾಗೂ ಕೀರವಾಣಿ ರಾಗಗಳ ಸ್ವರಗಳು) ಕಾಣಬಹುದು. ಹೆಚ್ಚ...

ನಿಸ್ವನ - ಭಾವಗೀತ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಿಲಹರಿ ರಾಗವನ್ನು ಕಾಣಬಹುದು. ಇಡೀ ಕವನ ಹೀಗಿದೆ. ಭಾವಗೀತ ೧ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ” ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ಭೃಂಗದ ಬೆನ್ನೇರಿ ಬಂತು ………. ೨ ಏನು ಏನು? ಜೇನು ಜೇನು? ಎನೆ ಗಂಗುಂ ಗಾನಾ ಓಂಕಾರದ ಶಂಖನಾದಕಿಂತ ಕಿಂಚಿದೂನಾ ಕವಿಯ ಏಕತಾನ ಕವನದಂತೆ ನಾದಲೀನಾ ಭೃಂಗದ ಬೆನ್ನೇರಿ ಬಂತು ………. ೩ ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ ಭೃಂಗದ ಬೆನ್ನೇರಿ ಬಂತು ………. ೪ ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ ಮೂಡಿ ಮೂಡಿ ...

ನಿಸ್ವನ - ಹಾಡು

Image
ನಿಸ್ವನದ ಭಾಗವಾಗಿ... ಕವನ:  ಚನ್ನವೀರ ಕಣವಿ ಕವನದ ಕಾಪೀರೈಟ್ ಕೃಪೆ:  ಪ್ರಿಯದರ್ಶಿ ಕಣವಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಚನ್ನವೀರ ಕಣವಿ ಯವರ ಈ "ಹಾಡಿ"ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ , ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಜಂಜೂಟಿ  (ಹಾಗೂ ತುಸುವಾಗಿ ಗಾವತಿ ) ರಾಗಗಳನ್ನು ಕಾಣಬಹುದು. ಇಡೀ ಕವನ ಹೀಗಿದೆ. ಹಾಡು ೧ ಮುಗಿಲ ಬಸಿರ ಬಯಲಿನಿಂದ ಹಗಲಿರುಳಿನ ಕೊಯಿಲಿನಿಂದ ಹೊಸಗಾಳಿಯ ಸುಯ್ಲಿನಿಂದ ದಶ ದಿಸೆಗಳು ಮೊರೆದಿವೆ. ೨ ಎಲೆಎಲೆಗಳ ನಲುಗಿನಲ್ಲಿ ಬದುಕಿನ ಕೂರಲಗಿನಲ್ಲಿ ಹೊಂಗಿರಣದ ಗಲಗಿನಲ್ಲಿ ಸುಖ-ದುಃಖವ ಬರೆದಿವೆ. ೩ ಒಳಬಾಳಿನ ತೆರೆಗಳಲ್ಲಿ ಎದೆಯಾಳದ ಕರೆಗಳಲ್ಲಿ ದುಡಿವೆಯ ಹಿರಿ ಹೊರೆಗಳಲ್ಲಿ ಸಂಕಲ್ಪದ ಹದವಿದೆ. ೪ ಮನಮನಗಳ ಅರುಹಿನಲ್ಲಿ ಮಾಂಗಲ್ಯದ ಕುರುಹಿನಲ್ಲಿ ಕರುಣೆಯ ಕಂದೆರವಿನಲ್ಲಿ ಜೀವದ ಸಂಮುದವಿದೆ. - ಚನ್ನವೀರ ಕಣವಿ ಕಣವಿ ಸಮಗ್ರ ಕಾವ್ಯ: ಪುಟ 397 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDeriva...

ನಿಸ್ವನ - ಪೆರುಮಾಳನ ಕೆಂದಾವರೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಪೆರುಮಾಳನ ಕೆಂದಾವರೆ " ಇಹದಾಚೆಯ ಹಾಡು. ಅವರ " ಚೈತ್ಯಾಲಯ " ಸಂಕಲನದಲ್ಲಿರುವ ಇದು,  ಶ್ರೀ ಅರವಿಂದ ರ " Rose of God " ಎಂಬ ಕವನದ ಭಾವಾನುವಾದ. ಇಲ್ಲಿ ವಯೊಲಿನ್, ವೀಣೆಗಳೊಂದಿಗೆ, ಮಾಂತ್ರಿಕ ಕೊಳಲು, ಗಿಟಾರ್‍ಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಲತಾಂಗಿ ರಾಗದಲ್ಲಿ ಮಾಟ ಮಾಡಿವೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ಪೆರುಮಾಳನ ಕೆಂದಾವರೆ ೧ ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಬಣ್ಣದ ಕಿಚ್ಚೇ. ೨ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮ...

ನಿಸ್ವನ - ಸೆಳವು ೧

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್   ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ " ಸೆಳವು " ಎಂಬ ಈ ಕವನ, ಅವರ " ಸಂಜೆ ಹಾಡು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ ಈಗಾಗಲೇ ಹಾಡಿದ್ದೇನೆ . ಅಲ್ಲಿ ಒಂದೇ ರಾಗದ (ಖಮಾಚ್) ಮಂದ್ರ, ತಾರ ಸ್ಥಾಯಿಗಳ ಲೋಕಗಳಾದರೆ, ಇಲ್ಲಿ ಷಡ್ಜಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್  (notes from the Lydian mode in C ) ಹಾಗೂ ನಿಷಾದಶ್ರುತಿಯಲ್ಲಿ ಭೈರವೀ (ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ಸಿಂಧುಭೈರವಿ , notes from the Phrygian mode in B ) ರಾಗಗಳ ಲೋಕಗಳಿವೆ.  ಹೆಚ್ಚಿನ ವಿವರಗಳನ್ನು ...

ನಿಸ್ವನ - ಗಿರಿಶಿಖರ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್   ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಗಿರಿಶಿಖರ " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳನ್ನು ಬೇರೆ ಬೇರೆ ಶ್ರುತಿಗಳಲ್ಲಿ ಪೋಣಿಸಲಾಗಿದೆ. ಷಡ್ಜಶ್ರುತಿಯಲ್ಲಿ ಬಿಲಾಸ್‍ಖಾನೀ ತೋಡೀ  (notes from the  Phrygian mode in B ), ತುಸುವಾಗಿ ಭೈರವೀ ಕೂಡ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧುಭೈರವಿ ), ಗಾಂಧಾರಶ್ರುತಿಯಲ್ಲಿ ರಾಗೇಶ್ರೀ  (notes from the Mixolydian mode in D ) ಹಾಗೂ ದೈವತಶ್ರುತಿಯಲ್ಲಿ ಮಾಂಡ್  ರಾಗಗಳಿಗೆ (roughly, notes from G major scale ) ಹಿತವಾದ ಗಿಟಾರ್, ಬಾನ್ಸುರೀಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, ch...

ನಿಸ್ವನ - ಕನಸುಗಳ ಮುಗಿಲೇರಿ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ದೇಶ್ ರಾಗವನ್ನು ಸಿತಾರ್, ಬಾನ್ಸುರೀ, ವಯೊಲಿನ್ ಹಾಗೂ ಶಾಸ್ತ್ರೀಯ ಲಯಗಾರಿಕೆಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಕನಸುಗಳ ಮುಗಿಲೇರಿ ೧ ಕನಸುಗಳ ಮುಗಿಲೇರಿ, ಸಂಚರಿಸಿ ಬಾನಗಲ, ಸವಿಬುತ್ತಿ ಮೆಲ್ಲುವೆಳೆವಕ್ಕಿಗಳಿರಾ, ಕಟ್ಟಿ ಕೆಡವಿದ ರುಚಿರಗೋಪುರಗಳೆನಿತಿಹವೊ, ಮತ್ತೆ ಕಟ್ಟುವ ತವಕವೆನಿತು ಮಧುರ! ೨ ನಿಮ್ಮ ಕಾಣ್ಕೆಗಳೆಲ್ಲ ಸ್ವಚ್ಛಂದಗತಿವಡೆದು ಪೆರರೇರದೆತ್ತರಕೆ ಏರಿ ನಿಲಲಿ. ಕನಸು ತಾ ಸಾಕಾರವಾಗಿ ಭುವನಾಕಾರ ಪಡೆದು ತಮ್ಮನು ತಾವೆ ಕಟ್ಟಿಕೊಳಲಿ ೩ ಸ್ವಪ್ನಲೋಕದ ಕನಕಪಕ್ಷಿಸಂಪುಟದಿಂದ ಮೆಲ್ಲುಲಿಯ ಸವಿಗಾನ ಹೊಮ್ಮಿ ಬರಲಿ. ಪಕ್ಷವಿಕ್ಷೇಪದಲಿ ವಿಶ್ವಚೇತನವಿರಲಿ ಸತ್ವಯುತ ಸವಿಬಾಳ ತ...

ನಿಸ್ವನ - ಇದು ಬಾಳು

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಇದು ಬಾಳು! " ಎಂಬ ಈ ಕವನ, ಅವರ " ಭಾವತರಂಗ " ಸಂಕಲನದಲ್ಲಿದೆ. ವಯೊಲಿನ್, ಚೆಲ್ಲೋ  ಹಾಗೂ Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವೀಣೆಗಳಿಂದ ತುಂಬಿಕೊಂಡಿರುವ ಈ ಹಾಡಿನಲ್ಲಿ, ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ B natural minor scale (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದ ಸ್ವರಗಳು), ಗಾಂಧಾರಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಛಾಯಾನಟ್  (B minorಇನ relative major scale , D major scaleಇನ ಸ್ವರಗಳು) ಹಾಗೂ ನಿಷಾದಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗೇಶ್ರೀ ( mixolydian mode  in A ) ರಾಗಗಳನ್ನು ಪೋಣಿಸಿರುವುದನ್ನು ಕ...

ನಿಸ್ವನ - ನಾನಲೆಯುತಿದ್ದೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ನೆನಲೆಯುತಿದ್ದೆ " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳ ಛಾಯೆಯನ್ನು ಕಾಣಬಹುದು. ಷಡ್ಜಶ್ರುತಿಯಲ್ಲಿ ಮಿಶ್ರ  ತಿಲಕ್ ಕಾಮೋದ್ , ಯಮನ್ ಕಲ್ಯಾಣ್ ,  ಪಂಚಮಶ್ರುತಿಯಲ್ಲಿ ಮಿಶ್ರ  ಮಾಂಝ್ ಖಮಾಜ್  ಹಾಗೂ ಮತ್ತೆ ಷಡ್ಜಶ್ರುತಿಯಲ್ಲಿ ಛಾಯಾನಟ್  ರಾಗಗಳಿಗೆ ವಿಭಿನ್ನ ರೀತಿಯ ಲಯಗಾರಿಕೆಯೊಂದಿಗೆ ಸಾರಂಗಿ, ಸಿತಾರ್, ಬಾನ್ಸುರೀ, ವೀಣೆ, ಗಿಟಾರ್‍ಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ನಾನಲೆಯುತಿದ್ದೆ ೧ ನಾನಲೆಯುತಿದ್ದ...

ನಿಸ್ವನ - ಎದೆಯು ಮರಳಿ ತೊಳಲುತಿದೆ

Image
ನಿಸ್ವನದ ಭಾಗವಾಗಿ... ಕವನ: ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಎದೆಯು ಮರಳಿ ತೊಳಲುತಿದೆ " ಎಂಬ ಈ ಕವನ, ಅವರ " ಕಟ್ಟುವೆವು ನಾವು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ  G major scale , ಗಾಂಧಾರಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಿಂಧುಭೈರವಿ  ರಾಗ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಭೈರವಿ  ರಾಗ ಅಥವಾ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ   phrygian mode  in B ಹಾಗೂ ಪಂಚಮಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಿಶ್ರ ಕಲಾವತಿ  ರಾಗಗಳನ್ನು Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಹೆಚ್ಚಿನ ವಿವರಗಳನ್ನು vi...

ನಿಸ್ವನ - ಸೆಳವು ೨

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ " ಸೆಳವು " ಎಂಬ ಈ ಕವನ, ಅವರ " ಸಂಜೆ ಹಾಡು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿಯೂ ರಾಗಸಂಯೋಜಿಸಿ ಹಾಡಿದ್ದೇನೆ . ಅಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್ ಹಾಗೂ ಭೈರವಿ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂಭೈರವಿ) ರಾಗಗಳ ಲೋಕಗಳಿವೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ (ಅನ್ಯಸ್ವರವಿರದ)  ಖಮಾಚ್  ರಾಗದ ಮಧ್ಯ, ತಾರ ಸ್ಥಾಯಿ ಹಾಗೂ ವೀಣೆ, ಕೊಳಲುಗಳ ಲೋಕ ಮೊದಲನೆಯದಾದರೆ, ಎರಡೂ ನಿಷಾದಗಳಿರುವ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಖಮಾಜ್ ರಾಗದಲ್ಲಿ ಕೊನೆ...

ನಿಸ್ವನ - ಹೃದಯದಾಕಾಶ

Image
ನಿಸ್ವನದ ಭಾಗವಾಗಿ... ಕವನ/ಕವನದ ಕಾಪೀರೈಟ್ ಕೃಪೆ:  ಅಮೃತ ಸೋಮೇಶ್ವರ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಮೃತ ಸೋಮೇಶ್ವರರ "ಹೃದಯದಾಕಾಶ" ಎಂಬ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ major scale  (ಅಥವಾ ionian mode ) (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ , ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ತುಸುವಾಗಿ mixolydian mode  (ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ ರಾಗದ ಸ್ವರಗಳು) ಕಾಣಬಹುದು. ಇಡೀ ಕವನ ಹೀಗಿದೆ. ಹೃದಯದಾಕಾಶ ೧ ಹೃದಯದಾಕಾಶದೊಳು ಉದಿಸಿ ಬಾ ಹೊಂಬೆಳಕೇ, ಸದಯದಲಿ ಮುನ್ನಡೆಸು ಅರಿವು ಬೆಳಕೇ. ಮಧುರವಾಗಲಿ ಬದುಕು, ಹಿಂಗಿ ಹೋಗಲಿ ಅಳುಕು, ಮುದವರಳಿ ಬರಲೆಂದೇ ಎದೆಯ ಬಯಕೆ. ೨ ಎದೆಯುಳುದಿಸಿದ ಬೆಳಕು ವದನದಲಿ ಬೆಳಗಿರಲಿ ಹದವಾಗಿ ಹಸನಿರಲಿ ಜೀವಲತೆಯು. ಸದಮಲ ವಿವೇಕಸುಮ ಮಘಮಘಿಸಿ ಆನಂದ- ಸುಧೆಯ ಸುಮನಸರಾಗಲೆಲ್ಲ ನರರ...