Posts

Showing posts from May, 2022

ಕನ್ನಡದ ಭಕ್ತಿ - ಎಕಾರದ ಆವೇಶ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಪ್ರಸ್ತಾವನೆ ಕೇಶಿರಾಜ ನ ಶಬ್ದಮಣಿದರ್ಪಣ ದ ಸೂತ್ರ ೧೧೭ ರಲ್ಲಿ ಹಾಗೂ ಸೂತ್ರ ೧೨೯ ರಲ್ಲಿ, ಹಳಗನ್ನಡದಲ್ಲಿ  ಎಕಾರವು ಕ್ರಮವಾಗಿ ತೃತೀಯಾ ವಿಭಕ್ತಿಯ ಹಾಗೂ ಸಪ್ತಮೀ ವಿಭಕ್ತಿಯ ಅರ್ಥದಲ್ಲಿ ಕಾಣಿಸುತ್ತದೆ  ಎಂದು ನಿರೂಪಿಸಲಾಗಿದೆ.  ಇದು ಅಷ್ಟು ಸಮಂಜಸವಲ್ಲ ವೆಂದೆನಿಸಿದ ಕಾರಣ, ಕೇಶಿರಾಜ ಹೇಳಿದ ಎಕಾರದ ಬಳಕೆ, ಅರ್ಥಸಂದರ್ಭಗಳನ್ನು ಇನ್ನಷ್ಟು ಸ್ಫುಟಗೊಳಿಸುವ ಪ್ರಯತ್ನ ಇಲ್ಲಿದೆ. ಕನ್ನಡದಲ್ಲಿ ಕಾಣುವ ಕೆಲವು ವೈಚಿತ್ರ್ಯಗಳು ಆಗಾಗ ನನ್ನನ್ನು ಕಾಡುತ್ತಲೇ ಬಂದಿವೆ. ಉದಾಹರಣೆಗೆ, ಒಂದೇ ವಿಭಕ್ತಿಪ್ರತ್ಯಯದ ವಿಭಿನ್ನ ರೂಪಗಳು (ದ್ವಿತೀಯಾ - ಅಂ/ಅನು/ಅನ್ನು, ತೃತೀಯಾ - ಇಂ/ಇಂದ, ಚತುರ್ಥೀ - ಕೆ/ಗೆ/ಇಗೆ/ಅಕ್ಕೆ/ಇಕ್ಕೆ, ಸಪ್ತಮೀ - ಒಳ್/ಒಳಗೆ/ಅಲ್/ಅಲಿ/ಅಲ್ಲಿ, ಇತ್ಯಾದಿ). ಷಷ್ಠೀರೂಪದ (ಕೆಲವೊಮ್ಮೆ ಅದಕ್ಕೆ ಸಮೀಪರೂಪದ) ದ್ವಿತೀಯಾ (ಉದಾಹರಣೆಗೆ, ಕಂಡು ಕಂಡು ನೀ ಎನ್ನ ಕೈಬಿಡುವರೇ ಎಂಬ ಪುರಂದರದಾಸರ ಪ್ರಸಿದ್ಧವಾದ ಸಾಲಿನಲ್ಲಿ ಎನ್ನ ಎಂಬುದು ಷಷ್ಠೀ ವಿಭಕ್ತಿಯಂತೆ ಕಂಡರೂ, ಅದು ನಿಜವಾಗಿ ಎನ್ನನ್ನು ಎಂಬ ದ್ವಿತೀಯಾ ವಿಭಕ್ತಿರೂಪವೇ ಆಗಿದೆ). ಇಂತಹ ವಿಚಾರಗಳ ಸ್ವರೂಪ ಮನಸ್ಸಿನಲ್ಲಿ ತಿಳಿಗೊಳ್ಳತೊಡಗಿದಾಗ, ತಿಳುವಳಿಕೆ ಇನ್ನೂ ಸ್ಫುಟವಾಗಬೇಕಾದರೆ ಹಳಗನ್ನಡದ, ಅದರಲ್ಲೂ, ಹಳಗನ್ನಡವ್ಯಾಕರಣದ ಪರಿಚಯ ಅಗತ್ಯವೆನಿಸಿತು. ಅದರೆ ನನಗೆ ಹಳಗನ್ನಡದ