Posts

Nisvana - Playlists

All the songs produced and released as part of the  Nisvana  project are available in the " Nisvana - Bhavageethe " YouTube channel.  For the benefit of listeners, various playlists of these songs are also available as listed below. All songs are  here . Poets  The poems of  Ambikatanayadatta  are  here . The poems of  M Gopalakrishna Adiga  are  here . The poems of  K S Narasimhaswamy  are  here . The poems of Chennaveera Kanavi  are  here . The poems of  Amrutha Someshwar  are  here . The poems of  Lakshmisha Tolpadi  are  here . The poems of P K Parameshwara Bhat  are  here . The poems of  Amshuman K R  are  here . Vocals The songs sung by  Ustad Faiyaz Khan  are  here . The songs sung by  Varijashree  are  here . The songs  sung by  Manasa Holla  are  here . The songs  sung by  Amshuman K R  are  here . Musicians The songs where  D Srinivas Achar (Guitar Srinivas)  has played the guitar are  here . The songs where B S Venugopal Raju (Tabla Venu)  has played the tabla and

ನಿಸ್ವನ - Playlistಗಳು

ನಿಸ್ವನ ದ ಕಲ್ಪನೆಯಲ್ಲಿ ಹೊರಬಂದಿರುವ ಹಾಡುಗಳೆಲ್ಲವೂ " ನಿಸ್ವನ - ಭಾವಗೀತೆಯ ಅನುಭಾವ " YouTube ಚ್ಯಾನಲ್ಲಿನಲ್ಲಿ ಲಭ್ಯವಿವೆ.  ಕೇಳುಗರ ಅನುಕೂಲಕ್ಕಾಗಿ ಹಾಡುಗಳ ಹಲವು ಬಗೆಯ playlistಗಳೂ ಕೂಡ ಇವೆ. ಅವು ಈ ಕೆಳಗಿನಂತಿವೆ. ಎಲ್ಲ ಹಾಡುಗಳು ಇಲ್ಲಿವೆ . ಕವಿಗಳು  ಅಂಬಿಕಾತನಯದತ್ತ ರ ಕವನಗಳು ಇಲ್ಲಿವೆ . ಗೋಪಾಲಕೃಷ್ಣ ಅಡಿಗ ರ ಕವನಗಳು ಇಲ್ಲಿವೆ . ಕೆ ಎಸ್ ನರಸಿಂಹಸ್ವಾಮಿ ಗಳ ಕವನಗಳು ಇಲ್ಲಿವೆ . ಚನ್ನವೀರ ಕಣವಿ ಯವರ ಕವನಗಳು ಇಲ್ಲಿವೆ . ಅಮೃತ ಸೋಮೇಶ್ವರ ರ ಕವನಗಳು  ಇಲ್ಲಿವೆ . ಲಕ್ಷ್ಮೀಶ ತೋಳ್ಪಾಡಿ ಯವರ ಕವನಗಳು  ಇಲ್ಲಿವೆ . ಪಿ ಕೆ ಪರಮೇಶ್ವರ ಭಟ್ಟ ರ ಕವನಗಳು  ಇಲ್ಲಿವೆ . ಅಂಶುಮಾನ್ ಕೆ ಆರ್ ಅವರ ಕವನಗಳು  ಇಲ್ಲಿವೆ . ಗಾಯನ ಉಸ್ತಾದ್ ಫ಼ಯಾಜ಼್ ಖಾನ್ ಅವರು ಹಾಡಿರುವ ಭಾವಗೀತೆಗಳು ಇಲ್ಲಿವೆ . ವಾರಿಜಾಶ್ರೀ ಅವರು ಹಾಡಿರುವ ಭಾವಗೀತೆಗಳು  ಇಲ್ಲಿವೆ . ಮಾನಸ ಹೊಳ್ಳ ಅವರು ಹಾಡಿರುವ ಭಾವಗೀತೆಗಳು  ಇಲ್ಲಿವೆ . ಅಂಶುಮಾನ್ ಕೆ ಆರ್  ಹಾಡಿರುವ ಭಾವಗೀತೆಗಳು   ಇಲ್ಲಿವೆ . ಸಂಗೀತಗಾರರು ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಅವರು ಗಿಟಾರ್ ನುಡಿಸಿರುವ ಭಾವಗೀತೆಗಳು ಇಲ್ಲಿವೆ . ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು) ಅವರು ತಬಲಾ ಮತ್ತಿತರ ತಾಳವಾದ್ಯಗಳನ್ನು ನುಡಿಸಿರುವ ಭಾವಗೀತೆಗಳು ಇಲ್ಲಿವೆ . ರಘುನಂದನ್ ರಾಮಕೃಷ್ಣ ಅವರು ಕೊಳಲು/ಬಾನ್ಸುರೀ ನುಡಿಸಿರುವ ಭಾವಗೀತೆಗಳು  ಇಲ್ಲಿವೆ . ಹೇಮಂತ್ ಕ

ನಿಸ್ವನ - ಸಂಧ್ಯಾವಂದನೆ

Image
ನಿಸ್ವನದ ಭಾಗವಾಗಿ... ಕವನ/ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ/ಕೀಬೋರ್ಡ್:  ಬಾಲಕೃಷ್ಣ ರಾವ್ "ನಿಸ್ವನ"ದ ಕಲ್ಪನೆ , ನನ್ನದೇ ಕವನವಾದ "ಸಂಧ್ಯಾವಂದನೆ"ಯೊಂದಿಗೆ ಸದ್ಯಕ್ಕೆ ಕೊನೆಗೊಳ್ಳುತ್ತದೆ. ಇದು ಹಲವು ಸಂಗೀತಶೈಲಿಗಳ (ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಹಾಗೂ Jazz), ಜ್ಞಾನಮೀಮಾಂಸೆಯ ಹಲವು ಮುಖಗಳ, ಅವೆಲ್ಲಕ್ಕೂ ಮಿಗಿಲಾಗಿ, ತೆರೆಯ, ಮರೆಯ, ಕೊನೆಯಿರದ ಸಂಜೆಯ ಧ್ಯಾನ. ಇಲ್ಲಿ, ಗ್ರಹಭೇದ ದಿಂದ ಪ್ರೇರಿತವಾಗಿ, ಷಡ್ಜ ಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹೈಮವತಿ , ರಿಷಭಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಸಂತ್ ಮುಖಾರಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ವಕುಳಾಭರಣ ಹಾಗೂ ಪಂಚಮಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ natural minor scale ( aeolean mode  in G or G minor ) ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗಗಳನ್ನೂ, ಕರ್ನಾಟಕ ಶಾಸ್ತ್ರೀಯ ಶೈಲ

ನಿಸ್ವನ - ಒಂದು ಸಂಜೆ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಒಂದು ಸಂಜೆ " ಎಂಬ ಈ ಕವನ, ಅವರ " ಕಟ್ಟುವೆವು ನಾವು " ಸಂಕಲನದಲ್ಲಿದೆ. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ  ಶ್ಯಾಮ್ ಕಲ್ಯಾಣ್  ರಾಗದಲ್ಲಿರುವ (ತುಸುವಾಗಿ ಯಮನ್ ಕಲ್ಯಾಣ್ ಕೂಡ) ಈ ಹಾಡಿನಲ್ಲಿ, ಸಾರಂಗಿ, ಬಾನ್ಸುರೀ, ಸಿತಾರ್-ಗಳು ಕೇಳುಗರನ್ನು ಸಂಜೆಗೆ ಕರೆದೊಯ್ಯುತ್ತವೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ಒಂದು ಸಂಜೆ ೧ ಮೌನ ತಬ್ಬಿತು ನೆಲವ; ಜುಮ್ಮನೆ ಪುಳಕಗೊಂಡಿತು ಧಾರಿಣಿ; ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ. ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು; ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು. ೨ ಇರುಳ ಸೆರ

ನಿಸ್ವನ - ಮುಗಿದಿತ್ತು ಬೀದಿಮಾತು

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಮುಗಿದಿತ್ತು ಬೀದಿಮಾತು " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ.  ಈ ಹಾಡಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಹಾಗೂ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಹೇಮಂತ್ ರಾಗಗಳಿಂದ ಪ್ರೇರಿತವಾದ ರಾಗಸಂಯೋಜನೆಗೆ, ಹಿತವಾದ ಗಿಟಾರ್ ಹಾಗೂ ತಾಳವಾದ್ಯಗಳ ಹಿನ್ನೆಲೆಯಿದೆ. ಇಡೀ ಕವನ ಹೀಗಿದೆ. ಮುಗಿದಿತ್ತು ಬೀದಿಮಾತು ೧ ನೆಲ ಹೊರಳುತಿತ್ತು ನೀರುರುಳುತಿತ್ತು ಬೆಳಕರಳುತಿತ್ತು ಆಗ. ೨ ಬಿರುಗಾಳಿ ಧೂಳಿ ಆಕಾಶ ಕಾಳಿ ಎತ್ತಿತ್ತು ಅಷ್ಟರಾಗ. ೩ ಅಬ್ಬಬ್ಬ ಚುಕ್ಕೆ ಏನೊಂದು ದಿಕ್ಕೆ ಬಾನೆಲ್ಲ ತೂತು ತೂತು. ೪ ಬೆಂಕೆಲ್ಲ ಹೂತು ಮೌನಕ್ಕೆ ಸೋತು ಮುಗಿದಿತ್ತು ಬೀದಿಮಾತು. - ಅಂಬಿಕಾತನಯದತ್ತ ಹೃದಯ ಸಮುದ್ರ: 54 ಪ್ರಕಾಶನ: 1956 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTube

ನಿಸ್ವನ - ನನ್ನ ನಿನ್ನ ಲೋಕ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ/ಕೀಬೋರ್ಡ್:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ನನ್ನ ನಿನ್ನ ಲೋಕ " ಎಂಬ ಈ ಕವನ, ಅವರ " ನಡೆದು ಬಂದ ದಾರಿ " ಸಂಕಲನದಲ್ಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ನಾಟಕುರುಂಜಿ ರಾಗದಲ್ಲಿರುವ ಈ ಹಾಡಿನಲ್ಲಿ, ಶಾಸ್ತ್ರೀಯ ಶೈಲಿಯ ವೀಣೆ ಹಾಗೂ Jazz ಶೈಲಿಯ ಗಿಟಾರ್-ಗಳು ಕೇಳುಗರನ್ನು ಕವನದ ಕನಸಿನ ಲೋಕಕ್ಕೆ ಕೊಂಡೊಯ್ಯುತ್ತವೆ. ಕವನದ ವಿಷಯದಂತೆಯೇ, ಕರ್ನಾಟಕ ಶಾಸ್ತ್ರೀಯ ಹಾಗೂ Jazz ಶೈಲಿಗಳೂ ಹದವಾಗುವ ಕನಸಿನ ಲೋಕವೂ ಇಲ್ಲಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ನನ್ನ ನಿನ್ನ ಲೋಕ ೧ ನನ್ನ ನಿನ್ನ ಲೋಕವೊಂದು ಬೇರೆಯೊಂದು ಇದ್ದರೆ ನನ್ನ ನಿನ್ನ ಜೀವವೆರಡು ಈ ಭವವ ಗೆದ್ದರೆ ತನುವ ತೆರೆಯು ಕರಗಿ ಶುದ್ಧಮನವು ಮೇಲಕೆದ್ದರೆ ಏನು ಗಾಡಿ ಏನು ಮೋಡಿಯಿಂದ ಬಾಳುತಿದ್ದೆವೆ! ಒಲವೊಂದನೆ ಬಿತ್ತಿ ಬೆಳೆದು ನಲವೊಂದ

ನಿಸ್ವನ - ಅಗೋ ಅಲ್ಲಿ ದೂರದಲ್ಲಿ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ಗಾಯನ: ವಾರಿಜಾಶ್ರೀ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಕೀಬೋರ್ಡ್ /ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗಣರಾಜ್ಯೊತ್ಸವದ ಶುಭಾಶಯಗಳೊಂದಿಗೆ,   ವಾರಿಜಾಶ್ರೀ ಯವರ ಮಧುರಕಂಠದಲ್ಲಿ  ಅಂಬಿಕಾತನಯದತ್ತ ರ " ಅಗೋ ಅಲ್ಲಿ ದೂರದಲ್ಲಿ " (ಅವರ " ನಾದಲೀಲೆ " ಸಂಕಲನದಲ್ಲಿದೆ). ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಾಂಡ್ ರಾಗದಲ್ಲಿರುವ ಈ ಹಾಡಿನ ಹಿನ್ನೆಲೆಯಲ್ಲಿ ಗಿಟಾರ್, ಸಂತೂರ್ (ಕೀಬೋರ್ಡಿನಲ್ಲಿ ಹೇಮಂತ್ ಕುಮಾರ್ ಅವರು ನುಡಿಸಿರುವುದು)-ಗಳು ಶ್ರಾವಣದ ಮಳೆ ಹನಿಗಳಂತೆ ಎಡೆಬಿಡದೆ ಸುರಿಯುತ್ತವೆ. ಇಡೀ ಕವನ ಹೀಗಿದೆ. ಅಗೋ ಅಲ್ಲಿ ದೂರದಲ್ಲಿ ೧ ಅಗೋ ಅಲ್ಲಿ ದೂರದಲ್ಲಿ ನೆಲದ ಮುಗಿಲ ಮಗ್ಗುಲಲ್ಲಿ ಹಸಿರಿನ ಹಸುಗೂಸದೊಂದು ಆಗ ಈಗ ಹೊರಳುತಿಹುದು ಏನೋ ಎಂತೊ ಒರಲುತಿಹುದು ಆಽ ಹಸಿರ ಒಳಗೆ ಹೊರಗೆ ನೀರ ಬೆಳಕ ತುಣುಕು ಮಿಣುಕು, ಅಲ್ಲಿನಿಂದ ಬಂದೆಯಾ! ಕುಣಿವ ಮಣಿವ ಹೆಡೆಯ ಹಾವು- ಗಳನು ಹಿಡಿದು ತಂದೆಯಾ? ೨ ಏಕೆ ಬಂದೆ? ಏನು ತಂದೆ? ಹೇಳೊ ಹೇಳು ಶ್ರಾವಣಾ ನೀ

ನಿಸ್ವನ - ಮತ್ತೆ ನೆನಪಾಗುತಿದೆ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ನಳಿನಕಾಂತಿ ಯಲ್ಲಿದೆ. ಇಲ್ಲಿ ವೀಣೆ ಹಾಗೂ ಗಿಟಾರ್-ಗಳು ಹದವಾದ ನೆನಪಿನ ಲೋಕದ ಚಿತ್ರ ಬರೆಯುತ್ತವೆ. ಇಡೀ ಕವನ ಹೀಗಿದೆ. ಮತ್ತೆ ನೆನಪಾಗುತಿದೆ ೧ ಕಣ್ಣೀರ ಬಟ್ಟಲಲಿ ಹೊಳೆವ ಮುತ್ತಿನ ಮಾಲೆ, ಬಣ್ಣಗಳ ಮಿಂಚು, ಬೆಳಕು! ಪನ್ನೀರ ಪರಿಮಳದ ಹವಳ ಹಲ್ಲಿನ ಸಾಲು, ಮೊಗದಗಲ ನಗೆಯ ಥಳಕು! ೨ ಬರಡು ಬದುಕಿನ ಬಯಲಲೆತ್ತರದ ನುಡಿಬೆಟ್ಟ, ಬಿತ್ತರದ ಹನಿನೀರ ಕೊಳವು. ಹರಿವ ಕಣ್ಣೋಟದಾ ಸೀಮೆಯಿಲ್ಲದ ತೋಟ ಹತ್ತಿರದ ಸುಮನಸರ ಸುಳಿವು. ೩ ಮತ್ತೆ ನೆನಪಾಗುತಿದೆ, ಮೆತ್ತಗಿನ ಮನದಲ್ಲಿ, ಕೃತ್ತಿಕೆಯ ಮಾಲೆಯಂತೆ. ನಿಂತ ಗಡಿಯಾರದಾ ಹಳೆಯ ಮುಳ್ಳುಗಳಂತೆ ಮಲೆನಾಡ ಮಾವಿನಂತೆ… - ಪಿ ಕೆ ಪರಮೇಶ್ವರ ಭಟ್ ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTube license  ಮೂಲಕ ಲಭ್

ನಿಸ್ವನ - ನಸುಕು ಬಂತು ನಸುಕು ೨

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಸಾರಂಗಿ:  ಸರ್ಫ಼ರಾಜ಼್ ಖಾನ್ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ನಸುಕು ಬಂತು ನಸುಕು " ಎಂಬ ಈ ಕವನ, ಅವರ " ಗಂಗಾವತರಣ " ಸಂಕಲನದಲ್ಲಿದೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ  ಈಗಾಗಲೇ ಹಾಡಿದ್ದೇನೆ . ಅಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ ರಾಗವಾದರೆ, ಇಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ  ನಂದ್  ಆಧಾರವಾಗಿದ್ದು, ಸಾರಂಗಿ, ಸಿತಾರ್, ತಬಲಾಗಳ ಆಹ್ಲಾದಕರ ಹಿಮ್ಮೇಳವಿದೆ. ಇಡೀ ಕವನ ಹೀಗಿದೆ. ನಸುಕು ಬಂತು ನಸುಕು ೧ ಬೆಳಗು ಗಾಳಿ ತಾಕಿ ಚಳಿತು ಇರುಳ ಮರವು ಒಡೆದು ತಳಿತು ಅರುಣ ಗಂಧ ಹರುಹಿ ಒಳಿತು ನಸುಕು ಬಂತು ೨ ಬೆಳಕು ಬಳ್ಳಿ ಬಿಟ್ಟು ಕುಡಿ ಬಯಲಲೆತ್ತಿ ಹಗಲಗುಡಿ ಅಡಗಿಸಿಟ್ಟು ರವಿಯ ಮಿಡಿ ನಸುಕು ಬಂತು. ೩ ಬೆಳಗು ಸೂಸುತಿರಲು ಸುಸಿಲು ಅದನು ಮೂಸುತಿರಲು ಉಸಿಲು ಬೆಳಕು ಹೂತು ಆತು ಬಿಸಿಲು ನಸುಕು ಬಂತು. - ಅಂಬಿಕಾ

ನಿಸ್ವನ - ನನ್ನ ನಿನ್ನ ನಡುವೆ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ನನ್ನ ನಿನ್ನ ನಡುವೆ " ಎಂಬ ಈ ಕವನ, ಅವರ " ನಡೆದು ಬಂದ ದಾರಿ " ಸಂಕಲನದಲ್ಲಿದೆ. ಮನಮುಟ್ಟುವ ಗಿಟಾರ್ ಹಾಗೂ ವಯೊಲಿನ್-ಗಳಿಂದ ಕೂಡಿದ ಈ ಹಾಡಿನ ಪಲ್ಲವಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ C major scale  (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಚಾರುಕೇಶಿ  ರಾಗಗಳು ಒಂದರ ಹಿಂದೆ ಇನ್ನೊಂದರಂತೆ, ಮತ್ತೆ ಮತ್ತೆ ಬಂದರೆ, ಚರಣದಲ್ಲಿ  C major -ಇನ relative minor ,  A minor -ಅನ್ನು (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ಹಾಗೂ ಕೀರವಾಣಿ ರಾಗಗಳ ಸ್ವರಗಳು) ಕಾಣಬಹುದು. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ