ನಿಸ್ವನ - ಒಂದು ಸಂಜೆ

ನಿಸ್ವನದ ಭಾಗವಾಗಿ...

ಗೋಪಾಲಕೃಷ್ಣ ಅಡಿಗರ "ಒಂದು ಸಂಜೆ" ಎಂಬ ಈ ಕವನ, ಅವರ "ಕಟ್ಟುವೆವು ನಾವು" ಸಂಕಲನದಲ್ಲಿದೆ.

ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಶ್ಯಾಮ್ ಕಲ್ಯಾಣ್ ರಾಗದಲ್ಲಿರುವ (ತುಸುವಾಗಿ ಯಮನ್ ಕಲ್ಯಾಣ್ ಕೂಡ) ಈ ಹಾಡಿನಲ್ಲಿ, ಸಾರಂಗಿ, ಬಾನ್ಸುರೀ, ಸಿತಾರ್-ಗಳು ಕೇಳುಗರನ್ನು ಸಂಜೆಗೆ ಕರೆದೊಯ್ಯುತ್ತವೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು.

ಇಡೀ ಕವನ ಹೀಗಿದೆ.

ಒಂದು ಸಂಜೆ

ಮೌನ ತಬ್ಬಿತು ನೆಲವ; ಜುಮ್ಮನೆ ಪುಳಕಗೊಂಡಿತು ಧಾರಿಣಿ;

ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ.

ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು;

ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು.

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;

ನೆಲವು ತಣಿಯಿತು, ಬೆವರು ಹನಿಯಿತು, ಬಾಷ್ಪ ನನೆಸಿತು ಹುಲ್ಲನು.

ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,

ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು.

- ಎಂ ಗೋಪಾಲಕೃಷ್ಣ ಅಡಿಗ

ಕಟ್ಟುವೆವು ನಾವು: 115

ಪ್ರಕಾಶನ: 1948

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಜ್ಞಾನಸೂತಕ

ನಿಸ್ವನ - ಮಳೆ

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ