Posts

Showing posts from September, 2023

ನಿಸ್ವನ - ಮನದ ಮಲ್ಲಿಗೆ

Image
ನಿಸ್ವನದ ಭಾಗವಾಗಿ... ಕವನ: ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನ, ಅವರ "ಮನದ ಮಲ್ಲಿಗೆ" ಕವನಸಂಕಲನಕ್ಕೆ ಶೀರ್ಷಿಕೆಯನ್ನೊದಗಿಸಿದೆ.  ಈ ಹಾಡು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ Aeolian mode ಅಥವಾ natural minor scale ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದಲ್ಲಿದೆ. ಇಡೀ ಕವನ ಹೀಗಿದೆ. ಮನದ ಮಲ್ಲಿಗೆ ೧ ಬದುಕು ಸಂಪದ ಮಮತೆ ಮೈಸಿರಿ      ನಾಳಿನಾಸೆಯ ಸಂಪುಟ! ಜಾರುನೆಲವಿದು ಏಳುಬೀಳುಗಳೆಲ್ಲ      ಕಾಣದ ಸಂಕಟ ೨ ಒಲವು ಒಗೆತನ ಸಿರಿಯು ಬಡತನ      ಕನಸಿನರಮನೆ ಬಾವುಟ! ಮನದ ಮಲ್ಲಿಗೆ ಬಾಡದಂತಿರೆ      ನೆಲದ ಸಂಪದದಾವುಟ! ೩ ಒಲಿದ ಮನಗಳ ಕುಸಿದ ಗೋಪುರ      ಹರಕು ಭೂಪಟರೇಖೆಯೋ? ಬಿರಿದ ಒಮ್ಮತವಿರದ ಬಳಗದ      ಕಳೆದ ದುಗುಡದ ಛಾಯೆಯೋ? ೪ ನುಡಿದ ಮಾತಿನ ಸೊಲ್ಲು ಸರಿಗಮ,      ಎಲ್ಲೊ ಕೇಳಿದ ಗಾಯನ! ಆತ್ಮಚೇತನ-ಸೇವೆ-ಹಿರಿತನ,      ಸ್ವಾರ್ಥಲೇಪದ ಚಿಂತನ! ೫ ನೊಂದ ನೋವಿನ, ಮರೆದ ಮುಗಿಲಿನ     

ನಿಸ್ವನ - ಕಣ್ಣನೀರ ಹನಿ - ಇಂದ್ರನೀಲಮಣಿ

Image
ನಿಸ್ವನದ ಭಾಗವಾಗಿ... ಕವನ/ಕವನದ ಕಾಪೀರೈಟ್: ಲಕ್ಷ್ಮೀಶ ತೋಳ್ಪಾಡಿ ರಾಗಸಂಯೋಜನೆ/ಗಾಯನ/ವೀಣೆ/ಗಿಟಾರ್:  ಅಂಶುಮಾನ್ ಕೆ ಆರ್ ಸ್ಟೂಡಿಯೋ:  ಹೇಮಂತ್ ಕುಮಾರ್ ಕೀಬೋರ್ಡ್/ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಲಕ್ಷ್ಮೀಶ ತೋಳ್ಪಾಡಿಯವರ 'ಅಹಲ್ಯೆ' ಗೀತರೂಪಕದ ನಾಂದೀ ಪದ್ಯದ ವಿಸ್ತೃತರೂಪವಾದ ಈ ಹಾಡು, ಭಾವಗೀತೆಯಾಚೆಗಿನ ಹೂವು. ಇಲ್ಲಿ, ಗ್ರಹಭೇದ ದಿಂದ ಸಿಗುವ ಮೇಳಕರ್ತ ಗಳ ಜನ್ಯ ರಾಗಗಳನ್ನು ಬಳಸಿ, ಷಡ್ಜ ಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಳಿನಕಾಂತಿ , ಪಂಚಮ ಶ್ರುತಿಯಲ್ಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ರಾಗೇಶ್ರೀ  ಹಾಗೂ ಗೋರಖ್ ಕಲ್ಯಾಣ್  ರಾಗಗಳ ಗಾಯನವನ್ನು, Jazz-ಶೈಲಿಯ ಗಿಟಾರ್ ಸ್ವರಮಂಡಲದಂತೆ ಹಾಗೂ ವೀಣೆ, ಹದವಾಗಿ ಅನುಸರಿಸುತ್ತವೆ. ಇಡೀ ಕವನ ಹೀಗಿದೆ. ಕಣ್ಣನೀರ ಹನಿ - ಇಂದ್ರನೀಲಮಣಿ ೧ ಕಣ್ಣನೀರ ಹನಿ ಇಂದ್ರನೀಲಮಣಿ ತಾವರೆಯ ಕಂಗಳಲ್ಲಿ ಆರ್ತಗದ್ಗದವೆ ಗಮಕವಾದೀತು ಶ್ರುತಿಶುದ್ಧ ಕಂಠದಲ್ಲಿ ೨ ಶಿವವ್ಯೋಮಕೇಶ ಅದು ಎಂಥ ಪಾಶ ಆ ವ್ಯೋಮದಲ್ಲಿ ಚಂದ್ರ ರುದ್ರ ನೆತ್ತಿಯಲಿ ಕ್ಷುದ್ರನಾಗುವನೆ ಸುರಿಸುವನು ನಿತ್ಯ ಜೊನ್ನ. ೩ ಮೊಲೆಹಾಲು ಹನಿಯ ಹನಿಹನಿಗೆ ತಣಿಯ ಗೋಕುಲದ ಪುಟ್ಟಕಂದ ಕಟವಾಯಿಯಲ್ಲಿ ವಿಷವಿಳಿದು ಹೋಗೆ ಪೂತನಿಗೆ ತಾಯ್ತನವ ತಂದ. ೪ ಹೆಣ್ಣುಜಿಂಕೆಯ ಕಣ್ಣ ತಣ್ಣನೆಯ ಬಟ್ಟಲಲಿ ಭಯವೆ ಅಚ್ಚರಿಯಾಗಿ ಬೆಳೆದು ಹುಲ್ಲೆಸಳ ತುದಿಯ ಇಬ್ಬನಿಯ ಧ್ಯಾನದಲಿ ಆಗಸವೆ ಇಳಿದು ಬಂದು ೫ ನಮ್ಮ ಸಮಯಕ್ಕೆ ಕವಿಸಮಯ ಬರಲಿ ವಿಸ್ಮಯ