Posts

Showing posts from 2023

ನಿಸ್ವನ - ಗಿರಿಶಿಖರ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್   ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಗಿರಿಶಿಖರ " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳನ್ನು ಬೇರೆ ಬೇರೆ ಶ್ರುತಿಗಳಲ್ಲಿ ಪೋಣಿಸಲಾಗಿದೆ. ಷಡ್ಜಶ್ರುತಿಯಲ್ಲಿ ಬಿಲಾಸ್‍ಖಾನೀ ತೋಡೀ  (notes from the  Phrygian mode in B ), ತುಸುವಾಗಿ ಭೈರವೀ ಕೂಡ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧುಭೈರವಿ ), ಗಾಂಧಾರಶ್ರುತಿಯಲ್ಲಿ ರಾಗೇಶ್ರೀ  (notes from the Mixolydian mode in D ) ಹಾಗೂ ದೈವತಶ್ರುತಿಯಲ್ಲಿ ಮಾಂಡ್  ರಾಗಗಳಿಗೆ (roughly, notes from G major scale ) ಹಿತವಾದ ಗಿಟಾರ್, ಬಾನ್ಸುರೀಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ಗಿರಿಶಿಖರ ೧ ಅಗೊ ಭೂಮಿಹೃ

ನಿಸ್ವನ - ಕನಸುಗಳ ಮುಗಿಲೇರಿ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ದೇಶ್ ರಾಗವನ್ನು ಸಿತಾರ್, ಬಾನ್ಸುರೀ, ವಯೊಲಿನ್ ಹಾಗೂ ಶಾಸ್ತ್ರೀಯ ಲಯಗಾರಿಕೆಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಕನಸುಗಳ ಮುಗಿಲೇರಿ ೧ ಕನಸುಗಳ ಮುಗಿಲೇರಿ, ಸಂಚರಿಸಿ ಬಾನಗಲ, ಸವಿಬುತ್ತಿ ಮೆಲ್ಲುವೆಳೆವಕ್ಕಿಗಳಿರಾ, ಕಟ್ಟಿ ಕೆಡವಿದ ರುಚಿರಗೋಪುರಗಳೆನಿತಿಹವೊ, ಮತ್ತೆ ಕಟ್ಟುವ ತವಕವೆನಿತು ಮಧುರ! ೨ ನಿಮ್ಮ ಕಾಣ್ಕೆಗಳೆಲ್ಲ ಸ್ವಚ್ಛಂದಗತಿವಡೆದು ಪೆರರೇರದೆತ್ತರಕೆ ಏರಿ ನಿಲಲಿ. ಕನಸು ತಾ ಸಾಕಾರವಾಗಿ ಭುವನಾಕಾರ ಪಡೆದು ತಮ್ಮನು ತಾವೆ ಕಟ್ಟಿಕೊಳಲಿ ೩ ಸ್ವಪ್ನಲೋಕದ ಕನಕಪಕ್ಷಿಸಂಪುಟದಿಂದ ಮೆಲ್ಲುಲಿಯ ಸವಿಗಾನ ಹೊಮ್ಮಿ ಬರಲಿ. ಪಕ್ಷವಿಕ್ಷೇಪದಲಿ ವಿಶ್ವಚೇತನವಿರಲಿ ಸತ್ವಯುತ ಸವಿಬಾಳ ತವಕವಿರಲಿ. - ಪಿ ಕೆ ಪರಮೇಶ್ವರ ಭಟ್ ಈ ಹಾಡುಗಳೆಲ್ಲವೂ  Creative Commons A

ನಿಸ್ವನ - ಇದು ಬಾಳು

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಇದು ಬಾಳು! " ಎಂಬ ಈ ಕವನ, ಅವರ " ಭಾವತರಂಗ " ಸಂಕಲನದಲ್ಲಿದೆ. ವಯೊಲಿನ್, ಚೆಲ್ಲೋ  ಹಾಗೂ Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವೀಣೆಗಳಿಂದ ತುಂಬಿಕೊಂಡಿರುವ ಈ ಹಾಡಿನಲ್ಲಿ, ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ B natural minor scale (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದ ಸ್ವರಗಳು), ಗಾಂಧಾರಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಛಾಯಾನಟ್  (B minorಇನ relative major scale , D major scaleಇನ ಸ್ವರಗಳು) ಹಾಗೂ ನಿಷಾದಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗೇಶ್ರೀ ( mixolydian mode  in A ) ರಾಗಗಳನ್ನು ಪೋಣಿಸಿರುವುದನ್ನು ಕಾಣಬಹುದು. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ

ನಿಸ್ವನ - ನಾನಲೆಯುತಿದ್ದೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ನೆನಲೆಯುತಿದ್ದೆ " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳ ಛಾಯೆಯನ್ನು ಕಾಣಬಹುದು. ಷಡ್ಜಶ್ರುತಿಯಲ್ಲಿ ಮಿಶ್ರ  ತಿಲಕ್ ಕಾಮೋದ್ , ಯಮನ್ ಕಲ್ಯಾಣ್ ,  ಪಂಚಮಶ್ರುತಿಯಲ್ಲಿ ಮಿಶ್ರ  ಮಾಂಝ್ ಖಮಾಜ್  ಹಾಗೂ ಮತ್ತೆ ಷಡ್ಜಶ್ರುತಿಯಲ್ಲಿ ಛಾಯಾನಟ್  ರಾಗಗಳಿಗೆ ವಿಭಿನ್ನ ರೀತಿಯ ಲಯಗಾರಿಕೆಯೊಂದಿಗೆ ಸಾರಂಗಿ, ಸಿತಾರ್, ಬಾನ್ಸುರೀ, ವೀಣೆ, ಗಿಟಾರ್‍ಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ನಾನಲೆಯುತಿದ್ದೆ ೧ ನಾನಲೆಯುತಿದ್ದೆನೋ ಬಗೆಯ ಬಾನ ಕೆಂಬೆಳಕು-ನಸುಕಿನಲ್ಲಿ ಕಿರಿಮರೆವು ನೆನೆವು ಅರೆಬೆರೆತು ತೆರೆದ ಹೊಸಬಾಳ ಮ

ನಿಸ್ವನ - ಎದೆಯು ಮರಳಿ ತೊಳಲುತಿದೆ

Image
ನಿಸ್ವನದ ಭಾಗವಾಗಿ... ಕವನ: ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಎದೆಯು ಮರಳಿ ತೊಳಲುತಿದೆ " ಎಂಬ ಈ ಕವನ, ಅವರ " ಕಟ್ಟುವೆವು ನಾವು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ  G major scale , ಗಾಂಧಾರಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಿಂಧುಭೈರವಿ  ರಾಗ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಭೈರವಿ  ರಾಗ ಅಥವಾ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ   phrygian mode  in B ಹಾಗೂ ಪಂಚಮಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಿಶ್ರ ಕಲಾವತಿ  ರಾಗಗಳನ್ನು Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀ

ನಿಸ್ವನ - ಸೆಳವು ೨

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ " ಸೆಳವು " ಎಂಬ ಈ ಕವನ, ಅವರ " ಸಂಜೆ ಹಾಡು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿಯೂ ರಾಗಸಂಯೋಜಿಸಿ ಹಾಡಿದ್ದೇನೆ . ಅಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್ ಹಾಗೂ ಭೈರವಿ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂಭೈರವಿ) ರಾಗಗಳ ಲೋಕಗಳಿವೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ (ಅನ್ಯಸ್ವರವಿರದ)  ಖಮಾಚ್  ರಾಗದ ಮಧ್ಯ, ತಾರ ಸ್ಥಾಯಿ ಹಾಗೂ ವೀಣೆ, ಕೊಳಲುಗಳ ಲೋಕ ಮೊದಲನೆಯದಾದರೆ, ಎರಡೂ ನಿಷಾದಗಳಿರುವ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಖಮಾಜ್ ರಾಗದಲ್ಲಿ ಕೊನೆಗೊಳ್ಳುವ ಮಂದ್ರ ಸ್ಥಾಯಿ ಹಾಗೂ ಸಾರಂಗಿಗಳ ಲೋಕ ಎರಡನೆಯದು. ಎರಡೂ ರಾಗಗಳು ಒಂದ

ನಿಸ್ವನ - ಹೃದಯದಾಕಾಶ

Image
ನಿಸ್ವನದ ಭಾಗವಾಗಿ... ಕವನ/ಕವನದ ಕಾಪೀರೈಟ್ ಕೃಪೆ:  ಅಮೃತ ಸೋಮೇಶ್ವರ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಮೃತ ಸೋಮೇಶ್ವರರ "ಹೃದಯದಾಕಾಶ" ಎಂಬ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ major scale  (ಅಥವಾ ionian mode ) (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ , ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ತುಸುವಾಗಿ mixolydian mode  (ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ ರಾಗದ ಸ್ವರಗಳು) ಕಾಣಬಹುದು. ಇಡೀ ಕವನ ಹೀಗಿದೆ. ಹೃದಯದಾಕಾಶ ೧ ಹೃದಯದಾಕಾಶದೊಳು ಉದಿಸಿ ಬಾ ಹೊಂಬೆಳಕೇ, ಸದಯದಲಿ ಮುನ್ನಡೆಸು ಅರಿವು ಬೆಳಕೇ. ಮಧುರವಾಗಲಿ ಬದುಕು, ಹಿಂಗಿ ಹೋಗಲಿ ಅಳುಕು, ಮುದವರಳಿ ಬರಲೆಂದೇ ಎದೆಯ ಬಯಕೆ. ೨ ಎದೆಯುಳುದಿಸಿದ ಬೆಳಕು ವದನದಲಿ ಬೆಳಗಿರಲಿ ಹದವಾಗಿ ಹಸನಿರಲಿ ಜೀವಲತೆಯು. ಸದಮಲ ವಿವೇಕಸುಮ ಮಘಮಘಿಸಿ ಆನಂದ- ಸುಧೆಯ ಸುಮನಸರಾಗಲೆಲ್ಲ ನರರು. ೩ ಸತ್ಯಚೇತನವಾಗಿ, ಸತ್ಯದೀಪವಾಗಿ, ಕತ್ತಲೆಯ ಕೊತ್ತಳವ ಕಳೆದೊಗೆಯ ಬಾ. ಬಿತ

ನಿಸ್ವನ - ಜೋ-ಅರಿವು

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ಗಾಯನ: ಉಸ್ತಾದ್ ಫ಼ಯಾಜ಼್ ಖಾನ್ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕನ್ನಡ ರಾಜ್ಯೋತ್ಸವದಂದು  ಉಸ್ತಾದ್ ಫ಼ಯಾಜ಼್ ಖಾನ ರ ದನಿಯಲ್ಲಿ  ಅಂಬಿಕಾತನಯದತ್ತ ರ "ಜೋ-ಅರಿವು" ಕನ್ನಡಿಗರಿಗೂ, ಸಂಗೀತಾಸಕ್ತರಿಗೂ ಸಮರ್ಪಿತ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ  ಭಟಿಯಾರ್ ಹಾಗೂ ಮಧ್ಯಮಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ವಸಂತಿ (ಇದು ಷಡ್ಜಶ್ರುತಿಯಲ್ಲಿ ವಿಠ್ಠಲಪ್ರಿಯಾ ಅಥವಾ ಗುಣಾವತಿ ಹಾಗೂ ಹಿಂದೂಸ್ಥಾನಿಯ ಮಂಗಲ್ ಭೈರವ್ ರಾಗಗಳಂತಾಗುತ್ತದೆ), ಇವುಗಳಿಗೆ Jass-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಿದೆ. ಇಡೀ ಕವನ ಹೀಗಿದೆ. ಜೋ-ಅರಿವು ೧ ಮಾಟ, ಮಾಟ, ಇದು ಯಾವ ಆಟ ಈ ಬಟಾ ಬಯಲಿನಲ್ಲಿ. ಅಚ್ಚ ಅರಿವು ಬರಿ ಬಚ್ಚ ಅರಿವು ಹೊಸ ಹೊಚ್ಚ ಅರಿವಿನಲ್ಲಿ. ೨ ಅರೆ ಅರಿವಿನಲ್ಲಿ ಮರೆ ಅರಿವಿನಲ್ಲಿ ಹೊರ ಅರಿವಿನಲ್ಲಿ ನೀನು ತೆರೆ ಅರಿವಿನಲ್

ನಿಸ್ವನ - ಎಲ್ಲ ಮಲಗಿರುವಾಗ

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ "ಎಲ್ಲ ಮಲಗಿರುವಾಗ" ಎಂಬ ಈ ಕವನ, ಅವರ "ನವಿಲ ದನಿ" ಸಂಕಲನದಲ್ಲಿದೆ. ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ , ಹಂಸಧ್ವನಿ , ಸುರನಂದಿನಿ , ತುಸುವಾಗಿ  ಯಮನ್ ಕಲ್ಯಾಣಿ , ಮೋಹನ ಕಲ್ಯಾಣಿ  ರಾಗಗಳು ಹಾಸುಹೊಕ್ಕಾಗಿವೆ. ಇಡೀ ಕವನ ಹೀಗಿದೆ. ಎಲ್ಲ ಮಲಗಿರುವಾಗ ೧ ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ, ಕಣ್ತುಂಬ ಹೊಂಗನಸು ಬೆಳಗಿನಲ್ಲಿ; ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ. ೨ ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ ಸತ್ತ ಹೂಗಳ ರಾಶಿ ಲತೆಯ ಕೆಳಗೆ; ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ ನಾ ಕಂಡೆ ಹರುಷವನು ಮುಗಿಲ ಕೆಳಗೆ. ೩ ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ, ಬೀಸುತ್

ನಿಸ್ವನ - ಮನದ ಮಲ್ಲಿಗೆ

Image
ನಿಸ್ವನದ ಭಾಗವಾಗಿ... ಕವನ: ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನ, ಅವರ "ಮನದ ಮಲ್ಲಿಗೆ" ಕವನಸಂಕಲನಕ್ಕೆ ಶೀರ್ಷಿಕೆಯನ್ನೊದಗಿಸಿದೆ.  ಈ ಹಾಡು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ Aeolian mode ಅಥವಾ natural minor scale ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದಲ್ಲಿದೆ. ಇಡೀ ಕವನ ಹೀಗಿದೆ. ಮನದ ಮಲ್ಲಿಗೆ ೧ ಬದುಕು ಸಂಪದ ಮಮತೆ ಮೈಸಿರಿ      ನಾಳಿನಾಸೆಯ ಸಂಪುಟ! ಜಾರುನೆಲವಿದು ಏಳುಬೀಳುಗಳೆಲ್ಲ      ಕಾಣದ ಸಂಕಟ ೨ ಒಲವು ಒಗೆತನ ಸಿರಿಯು ಬಡತನ      ಕನಸಿನರಮನೆ ಬಾವುಟ! ಮನದ ಮಲ್ಲಿಗೆ ಬಾಡದಂತಿರೆ      ನೆಲದ ಸಂಪದದಾವುಟ! ೩ ಒಲಿದ ಮನಗಳ ಕುಸಿದ ಗೋಪುರ      ಹರಕು ಭೂಪಟರೇಖೆಯೋ? ಬಿರಿದ ಒಮ್ಮತವಿರದ ಬಳಗದ      ಕಳೆದ ದುಗುಡದ ಛಾಯೆಯೋ? ೪ ನುಡಿದ ಮಾತಿನ ಸೊಲ್ಲು ಸರಿಗಮ,      ಎಲ್ಲೊ ಕೇಳಿದ ಗಾಯನ! ಆತ್ಮಚೇತನ-ಸೇವೆ-ಹಿರಿತನ,      ಸ್ವಾರ್ಥಲೇಪದ ಚಿಂತನ! ೫ ನೊಂದ ನೋವಿನ, ಮರೆದ ಮುಗಿಲಿನ     

ನಿಸ್ವನ - ಕಣ್ಣನೀರ ಹನಿ - ಇಂದ್ರನೀಲಮಣಿ

Image
ನಿಸ್ವನದ ಭಾಗವಾಗಿ... ಕವನ/ಕವನದ ಕಾಪೀರೈಟ್: ಲಕ್ಷ್ಮೀಶ ತೋಳ್ಪಾಡಿ ರಾಗಸಂಯೋಜನೆ/ಗಾಯನ/ವೀಣೆ/ಗಿಟಾರ್:  ಅಂಶುಮಾನ್ ಕೆ ಆರ್ ಸ್ಟೂಡಿಯೋ:  ಹೇಮಂತ್ ಕುಮಾರ್ ಕೀಬೋರ್ಡ್/ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಲಕ್ಷ್ಮೀಶ ತೋಳ್ಪಾಡಿಯವರ 'ಅಹಲ್ಯೆ' ಗೀತರೂಪಕದ ನಾಂದೀ ಪದ್ಯದ ವಿಸ್ತೃತರೂಪವಾದ ಈ ಹಾಡು, ಭಾವಗೀತೆಯಾಚೆಗಿನ ಹೂವು. ಇಲ್ಲಿ, ಗ್ರಹಭೇದ ದಿಂದ ಸಿಗುವ ಮೇಳಕರ್ತ ಗಳ ಜನ್ಯ ರಾಗಗಳನ್ನು ಬಳಸಿ, ಷಡ್ಜ ಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಳಿನಕಾಂತಿ , ಪಂಚಮ ಶ್ರುತಿಯಲ್ಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ರಾಗೇಶ್ರೀ  ಹಾಗೂ ಗೋರಖ್ ಕಲ್ಯಾಣ್  ರಾಗಗಳ ಗಾಯನವನ್ನು, Jazz-ಶೈಲಿಯ ಗಿಟಾರ್ ಸ್ವರಮಂಡಲದಂತೆ ಹಾಗೂ ವೀಣೆ, ಹದವಾಗಿ ಅನುಸರಿಸುತ್ತವೆ. ಇಡೀ ಕವನ ಹೀಗಿದೆ. ಕಣ್ಣನೀರ ಹನಿ - ಇಂದ್ರನೀಲಮಣಿ ೧ ಕಣ್ಣನೀರ ಹನಿ ಇಂದ್ರನೀಲಮಣಿ ತಾವರೆಯ ಕಂಗಳಲ್ಲಿ ಆರ್ತಗದ್ಗದವೆ ಗಮಕವಾದೀತು ಶ್ರುತಿಶುದ್ಧ ಕಂಠದಲ್ಲಿ ೨ ಶಿವವ್ಯೋಮಕೇಶ ಅದು ಎಂಥ ಪಾಶ ಆ ವ್ಯೋಮದಲ್ಲಿ ಚಂದ್ರ ರುದ್ರ ನೆತ್ತಿಯಲಿ ಕ್ಷುದ್ರನಾಗುವನೆ ಸುರಿಸುವನು ನಿತ್ಯ ಜೊನ್ನ. ೩ ಮೊಲೆಹಾಲು ಹನಿಯ ಹನಿಹನಿಗೆ ತಣಿಯ ಗೋಕುಲದ ಪುಟ್ಟಕಂದ ಕಟವಾಯಿಯಲ್ಲಿ ವಿಷವಿಳಿದು ಹೋಗೆ ಪೂತನಿಗೆ ತಾಯ್ತನವ ತಂದ. ೪ ಹೆಣ್ಣುಜಿಂಕೆಯ ಕಣ್ಣ ತಣ್ಣನೆಯ ಬಟ್ಟಲಲಿ ಭಯವೆ ಅಚ್ಚರಿಯಾಗಿ ಬೆಳೆದು ಹುಲ್ಲೆಸಳ ತುದಿಯ ಇಬ್ಬನಿಯ ಧ್ಯಾನದಲಿ ಆಗಸವೆ ಇಳಿದು ಬಂದು ೫ ನಮ್ಮ ಸಮಯಕ್ಕೆ ಕವಿಸಮಯ ಬರಲಿ ವಿಸ್ಮಯ

ನಿಸ್ವನ - ಅವ್ವಾ! ನಾನು ಎಲ್ಲಿಂದ ಬಂದೆ?

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಇಡೀ ಕವನ ಹೀಗಿದೆ. ಅವ್ವಾ! ನಾನು ಎಲ್ಲಿಂದ ಬಂದೆ? ೧ ಅವ್ವಾ! ನಾನು ಎಲ್ಲಿಂದ ಬಂದೆ? ಅವ್ವಾ! ನನ್ನ ಎಲ್ಲಿಂದ ತಂದೆ? ೨ ನೀ ನನ್ನ ಆಟದಾ ಗೊಂಬಿಯಾಗಿದ್ದೀ-ಕಂದಾ ಮೂರ್ತಿ ಮಾಡಿದೆ ನಿನ್ನ ಅರಲು ಮಿದ್ದಿಽ|| ೩ ಮನೆ ದೇವರ ಬೇಡಿ ಮಾಡಿದೆ ನಿದ್ದಿಽ-ಕಂದಾ ನನ್ನಾ ಉಡಿಯಲ್ಲಿ ನೀ ಬಂದು ಬಿದ್ದೀ|| ೪ ನನ್ನಜ್ಜಿಯಾ ಗೆಜ್ಜಿವಸ್ತ್ರವಾಗಿದ್ದಿಽ-ಕಂದಾ ಕುಲದೇವಿಯಾ ಕೈಯಾ ಶಸ್ತ್ರವಾಗಿದ್ದಿ!|| ೫ ದೊಡ್ಡವಳು ನಾನಾದೆ ನೀನಾದೆ ಸಿದ್ಧಿಽ-ಕಂದಾ ಎದೆಹಾಲು ತೊರೆಸುತ್ತ ತೊಡೆಗೆ ಬಂದಿದ್ದಿಽ|| ೬ ಮಿಂಚಿನೊಲು ನೀ ಬಂದಿ ಸಂಚಿತದೊಳಿದ್ದಿ-ಕಂದಾ ಹೋದಿ-ಗೀದೀ ಎಂದು ಹೌಹಾರಿ ಬುದ್ಧಿ|| ೭ ಎದೆಗೆದೆಯನವಿಚುತ್ತ ಮಾಡುವೆನು ಮುದ್ದಿ-ಕಂದಾ ನಿನ್ನ ಹೃದಯಕೆ ವೇದ್ಯ ಹೃದಯದೀ ಸುದ್ದಿ!|| - ಅಂಬಿಕಾತನಯದತ್ತ ಶತಮಾನ: ಅಪ್ರಕಟಿತ ಈ ಹಾಡುಗಳೆಲ್ಲವೂ  Creative Commons Attribution-NonCo

ನಿಸ್ವನ - ಮೋಡಗಳು ನಾವು

Image
ನಿಸ್ವನದ ಭಾಗವಾಗಿ... ಕವನ: ಚನ್ನವೀರ ಕಣವಿ ಕವನದ ಕಾಪೀರೈಟ್:  ಪ್ರಿಯದರ್ಶಿ ಕಣವಿ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗೆ ಒಗ್ಗುವಂಥ, ಕರ್ನಾಟಕ ಶಾಸ್ತ್ರೀಯ ಸಂಗೀತದ ಗರುಡಧ್ವನಿ  ರಾಗವನ್ನು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ ಕೊಳಲು, ವಯೊಲಿನ್/ಚೆಲ್ಲೋ ಹಿನ್ನೆಲೆಯಲ್ಲಿ ಕಾಣಬಹುದು. ಇಡೀ ಕವನ ಹೀಗಿದೆ. ಮೋಡಗಳು ನಾವು ೧ ಬಾನು ತನ್ನನವರತ ನೀಲಿಮೆಯ ದಿಟ್ಟಿಸುತ ಕನಸುಗಳ ಕಾಣುತಿಹುದು; ಮೋಡಗಳು ನಾವದರ ವಿಪರೀತ ಹುಚ್ಚುಗಳು ನಮಗಿಲ್ಲ ಮನೆಯಾವುದೂ. ೨ ನಿತ್ಯತೆಯ ಮುಕುಟದಲಿ ನಕ್ಷತ್ರ ಹೊಳೆಯುತಿವೆ ಸ್ಥಿರ ಲಿಖಿತ ರೂಪವಿಹುದು; ನಮ್ಮದೋ ಬರಿ ಸೀಸಕಡ್ಡಿ ಬರೆದಂತಿಹುದು- ಮರು ಚಣದಿ ಅಳಿಸಬಹುದು. ೩ ವಾಯುರಂಗದಿ ಬಂದು ಮದ್ದಲೆಯ ಬಡಿಯುವದು ನಗೆ ಮಿಂಚನೆಸೆವ ಪಾತ್ರ, ಅಲ್ಲದೆಯೆ ನಮ್ಮ ನಗೆ ಮಳೆ ಸುರಿಸುವದು ಸತ್ಯ ಹುಡುಗಾಟವಲ್ಲ ಗುಡುಗು. ೪ ಈಗಲೂ ಪ್ರತಿಫಲಕೆ ಕಾಲಪುರುಷನ ಕೂಡ ಹಕ್ಕು ಸಾಧಿಸುತಿಲ್ಲ ನಾವು. ಜೀವ ತುಂಬಿದ ಉಸಿರೆ ಊದಿಬಿಡುವದು ದೂರ ಹೆ

ನಿಸ್ವನ - ಬೆಳಗುಜಾವ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮುಖಾರಿ , ಹುಸೇನಿ  ರಾಗಗಳನ್ನೂ, ಭೈರವಿ  ರಾಗದ ಛಾಯೆಯನ್ನೂ, Jazz ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಿನ್ನೆಲೆಯಲ್ಲಿ ಕಾಣಬಹುದು. ಇಡೀ ಕವನ ಹೀಗಿದೆ. ಬೆಳಗುಜಾವ ೧ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಂ ಎಂದು ಬಿಟ್ಟ ಮಾರ. ಗುಡಿಗೋಪುರಕ್ಕು ಬಲೆ ಬೀಸಿ ಬಂದ ಅಗೊ ಬೆಳಕು-ಬೇಟೆಗಾರ. ೨ ನಿಶೆಯಳಿದ ಉಷೆಯ ಎಳನಗೆಯ ಬಗೆಗೆ ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ; ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು. ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು. ೩ ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ. ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ.

ನಿಸ್ವನ - ಮಳೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಗಾಯನ: ಅಂಶುಮಾನ್ ಕೆ ಆರ್, ಮಾನಸ ಹೊಳ್ಳ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ಸಿತಾರ್: ಅರ್ಜುನ್ ಆನಂದ್ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಧ್ಯಮಾವತಿ  ರಾಗವನ್ನು ತುಸು ಜಾನಪದ ಶೈಲಿಯಲ್ಲಿ, vocal harmonyಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಮಳೆ ೧ ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ ನೋಡೋಣ. ೨ ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ೩ ಕೋಲ್ಮಿಂಚು ಇಣುಕಿಣುಕಿ ಕಣ್ಕುಣಿಸಿ ಕೆಣಕೆಣಕಿ ಬಾ ಗೆಣೆಯ ಹೊರಗೆ ಎನುವಾಗ ಒಳಸೇರಿ ಹರೆ ಮೀರಿದ್ಹಾಂಗ ಕುಳಿತೇವೊ - ಅಂಬಿಕಾತನಯದತ್ತ ಉಯ್ಯಾಲೆ: 66 ಪ್ರಕಾಶನ: 1938 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTube license  ಮೂಲಕ ಲಭ್ಯವಿವೆ. ಕವನದ Copyright ಇದರಲ

ನಿಸ್ವನ - ಜ್ಞಾನಸೂತಕ

Image
ನಿಸ್ವನದ ಭಾಗವಾಗಿ... ಕವನ/ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ: ಪಿ ಜನಾರ್ದನ್ ರಾವ್ ಕೀಬೋರ್ಡ್/ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡು ಕರ್ನಾಟಕ ಶಾಸ್ತ್ರೀಯ ಸಂಗೀತದ ಸುರುಟಿ , ಕೇದಾರಗೌಳ , ಶಹನ , ಯದುಕುಲಕಾಂಭೋಜಿ ಹಾಗೂ ಕಾಂಭೋಜಿ  ರಾಗಗಳಿಂದ ಕೂಡಿದೆ. ಇಡೀ ಕವನ ಹೀಗಿದೆ. ಜ್ಞಾನಸೂತಕ ೧ ನೀರಗೆರೆಯ ತಳಸ್ಪರ್ಶದಂತೆ, ಕರಿಮೋಡ ತಂದ ಲಘುವರ್ಷದಂತೆ, ಬಸಿರೊಳಗಿನಿಂದ ಎಳೆ ಹರ್ಷದಂತೆ, ಒಳಹೊರಗು ಹರಿಯಿತಲ್ಲ! ೨ ಭಿತ್ತಿಯನ್ನೆ ಕಳೆ. ಬಿತ್ತಿಲ್ಲದೆ ಬೆಳೆ. ನೆತ್ತಿಯಲ್ಲಿ ನೆಲೆನಿಂತ ನೀರಹೊಳೆ. ತಲೆಬಾಗಿಸಿದರೆ ಅಲ್ಲೆ ಹರಿವ ತೊರೆ, ನೆರೆಯೆ ಬಂದಿತಲ್ಲ! ೩ ಬೇರಿನಲ್ಲೆ ಫಲ. ಬೇಲಿಯಲ್ಲೆ ಹೊಲ. ಇಂಗಿತವೇ ಹರಿವಂಥ ಜೀವಜಲ! ಮಿಂಚಿನಹುಳದೊಳಬೆಳಕಿನಂತೆ ಬೇರೇನೊ ಹೊಳೆಯಿತಲ್ಲ! ೪ ಮಂಜು ಮಸುಕು ಮುಂಜಾವದಲ್ಲಿ ಚಳಿಗಾಲ ಮಾಗಿ ನಿಟ್ಟುಸಿರು ಬಿಟ್ಟ ನಸುಕಾದ ಎದೆಯೆ ಇಬ್ಬನಿಯ ಹಾರ ವರವಾಗಿ ಪಡೆಯಿತಲ್ಲ! - ಅಂಶುಮಾನ್ ಕೆ ಆರ್ ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTube license  ಮೂಲಕ ಲಭ್ಯವಿವೆ. These songs are licensed under a  Creative Commons Attribution-NonCommercial-NoDerivatives 4.0 International License  and  stand