ನಿಸ್ವನ - ಜ್ಞಾನಸೂತಕ

ನಿಸ್ವನದ ಭಾಗವಾಗಿ...

  • ಕವನ/ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
  • ತಾಳವಾದ್ಯ: ಪಿ ಜನಾರ್ದನ್ ರಾವ್
  • ಕೀಬೋರ್ಡ್/ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಈ ಹಾಡು ಕರ್ನಾಟಕ ಶಾಸ್ತ್ರೀಯ ಸಂಗೀತದ ಸುರುಟಿ, ಕೇದಾರಗೌಳ, ಶಹನ, ಯದುಕುಲಕಾಂಭೋಜಿ ಹಾಗೂ ಕಾಂಭೋಜಿ ರಾಗಗಳಿಂದ ಕೂಡಿದೆ.

ಇಡೀ ಕವನ ಹೀಗಿದೆ.

ಜ್ಞಾನಸೂತಕ

ನೀರಗೆರೆಯ ತಳಸ್ಪರ್ಶದಂತೆ,

ಕರಿಮೋಡ ತಂದ ಲಘುವರ್ಷದಂತೆ,

ಬಸಿರೊಳಗಿನಿಂದ ಎಳೆ ಹರ್ಷದಂತೆ,

ಒಳಹೊರಗು ಹರಿಯಿತಲ್ಲ!

ಭಿತ್ತಿಯನ್ನೆ ಕಳೆ. ಬಿತ್ತಿಲ್ಲದೆ ಬೆಳೆ.

ನೆತ್ತಿಯಲ್ಲಿ ನೆಲೆನಿಂತ ನೀರಹೊಳೆ.

ತಲೆಬಾಗಿಸಿದರೆ ಅಲ್ಲೆ ಹರಿವ ತೊರೆ,

ನೆರೆಯೆ ಬಂದಿತಲ್ಲ!

ಬೇರಿನಲ್ಲೆ ಫಲ. ಬೇಲಿಯಲ್ಲೆ ಹೊಲ.

ಇಂಗಿತವೇ ಹರಿವಂಥ ಜೀವಜಲ!

ಮಿಂಚಿನಹುಳದೊಳಬೆಳಕಿನಂತೆ

ಬೇರೇನೊ ಹೊಳೆಯಿತಲ್ಲ!

ಮಂಜು ಮಸುಕು ಮುಂಜಾವದಲ್ಲಿ

ಚಳಿಗಾಲ ಮಾಗಿ ನಿಟ್ಟುಸಿರು ಬಿಟ್ಟ

ನಸುಕಾದ ಎದೆಯೆ ಇಬ್ಬನಿಯ ಹಾರ

ವರವಾಗಿ ಪಡೆಯಿತಲ್ಲ!

- ಅಂಶುಮಾನ್ ಕೆ ಆರ್



Comments

  1. Wonderful.. Great Mr Amshuman. May God Bless you and wish you great success

    ReplyDelete
  2. Very nice poem.Meaningful lyrics and melodious music..soothing..👌

    ReplyDelete

Post a Comment

Popular posts from this blog

ನಿಸ್ವನ - ಮಳೆ

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ