ಜ್ಞಾನಸೂತಕ

ಈ ಕವನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---

ನೀರಗೆರೆಯ ತಳಸ್ಪರ್ಶದಂತೆ,
ಕರಿಮೋಡ ತಂದ ಲಘುವರ್ಷದಂತೆ,
ಬಸಿರೊಳಗಿನಿಂದ ಎಳೆ ಹರ್ಷದಂತೆ,
ಒಳಹೊರಗು ಹರಿಯಿತಲ್ಲ!

ಭಿತ್ತಿಯನ್ನೆ ಕಳೆ. ಬಿತ್ತಿಲ್ಲದೆ ಬೆಳೆ.
ನೆತ್ತಿಯಲ್ಲಿ ನೆಲೆನಿಂತ ನೀರಹೊಳೆ.
ತಲೆಬಾಗಿಸಿದರೆ ಅಲ್ಲೆ ಹರಿವ ತೊರೆ,
ನೆರೆಯೆ ಬಂದಿತಲ್ಲ!

ಬೇರಿನಲ್ಲೆ ಫಲ. ಬೇಲಿಯಲ್ಲೆ ಹೊಲ.
ಇಂಗಿತವೇ ಹರಿವಂಥ ಜೀವಜಲ!
ಮಿಂಚಿನಹುಳದೊಳಬೆಳಕಿನಂತೆ
ಬೇರೇನೊ ಹೊಳೆಯಿತಲ್ಲ!

ಮಂಜು ಮಸುಕು ಮುಂಜಾವದಲ್ಲಿ
ಚಳಿಗಾಲ ಮಾಗಿ ನಿಟ್ಟುಸಿರು ಬಿಟ್ಟ
ನಸುಕಾದ ಎದೆಯೆ ಇಬ್ಬನಿಯ ಹಾರ
ವರವಾಗಿ ಪಡೆಯಿತಲ್ಲ!

Creative Commons License
ಈ ಕವನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ.

Comments

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ