ಸರಸ್ವತೀ

ಈ ಕವನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---

ಕಡಿದಾದ ಕಣಿವೆಯ ಬೆಣ್ಣೆಯೇ? ಕೆನೆಯೇ!
ಸಿಡಿಲಿನ ಕುಡಿಯ ಒಳನಂಜಿನ ಹನಿಯೇ!
ಕೊಡದಲ್ಲಿ ತುಳುಕಿದೆ.
ಬುಡದಲ್ಲಿ ಬಳುಕಿದೆ.
ನೋಡದ ಶಿಖರದ ಮಂಜಿನ ಖನಿಯೇ!

ಕರೆಯೊಂದೇ ಸಾಕಲ್ಲ, ಬೇರೇನೂ ಬೇಡ.
ಎರೆಯುವ ಹೊತ್ತಿಗೆ ಕರದಲ್ಲೂ ಕೂಡ,
ನೆರೆಯಲ್ಲಿ ನೊರೆಯಾಗಿ,
ಕೆರೆಯಲ್ಲಿ ಸೆರೆಯಾಗಿ,
ಮರುಭೂಮಿಯೊಳಗೇನೇ ಅಡಗಿದೆ ನೋಡ!

ಬಾನೆಲ್ಲಾ ಹರಡಿ ಕೋಲ್ಮಿಂಚಿನ ಮಾಲೆ,
ಆನೆಗೆ ಅಂಕುಶ, ಟಂಕದ ಸಾಲೆ.
ಮಾನವ ಕಾಡಿದ
ದಾನವ ಮಾಡಿದ
ತಾನವನಡಗಿಸುವಂಥಾ ಕರೆಯೋಲೆ!

ಹಸಿರಿನ ಹಂದರಕೆ ಹೂವಿನ ಮೋಡಿ.
ಕೆಸರಿನ ಕೆರೆಯಲ್ಲೂ ಸೆಲೆಗಳು ಮೂಡಿ,
ಉಸಿರಾಗಿ ಕಡಲಿಂದ,
ಬಸಿರಿನ ಒಳಗಿಂದ,
ಪಿಸುಗುಟ್ಟಿದಂತಿದೆ ಅಸರಂತವು ಹಾಡಿ.

ಛಂದಸ್ಸು: ಲಿಮರಿಕ್ಕಿನ (limerick) ಛದ್ಮವೇಷದಲ್ಲಿ ಛಂದೋವತಂಸ. ೬ ಮಾತ್ರೆಯ ಜಾನಪದಗತಿ.

Creative Commons License
ಈ ಕವನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ.

Comments

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ