ನಿಸ್ವನ - ಮಳೆ

ನಿಸ್ವನದ ಭಾಗವಾಗಿ...

ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಧ್ಯಮಾವತಿ ರಾಗವನ್ನು ತುಸು ಜಾನಪದ ಶೈಲಿಯಲ್ಲಿ, vocal harmonyಯೊಂದಿಗೆ ಕಾಣಬಹುದು.

ಇಡೀ ಕವನ ಹೀಗಿದೆ.

ಮಳೆ

೧

ಮಳೆ ಬರುವ ಕಾಲಕ್ಕ

ಒಳಗ್ಯಾಕ ಕೂತೇವೊ

ಇಳೆಯೊಡನೆ ಜಳಕ ಮಾಡೋಣ

ನಾವೂನು, ಮೋಡಗಳ ಆಟ ನೋಡೋಣ.

೨

ಮರಿಗುಡುಗು ಕೆಲೆವಾಗ

ಮಳೆಗಾಳಿ ಸೆಳೆವಾಗ

ಮರಗಿಡಗಳನ್ನು ಎಳೆವಾಗ

ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ.

೩

ಕೋಲ್ಮಿಂಚು ಇಣುಕಿಣುಕಿ

ಕಣ್ಕುಣಿಸಿ ಕೆಣಕೆಣಕಿ

ಬಾ ಗೆಣೆಯ ಹೊರಗೆ ಎನುವಾಗ

ಒಳಸೇರಿ ಹರೆ ಮೀರಿದ್ಹಾಂಗ ಕುಳಿತೇವೊ

- ಅಂಬಿಕಾತನಯದತ್ತ

ಉಯ್ಯಾಲೆ: 66

ಪ್ರಕಾಶನ: 1938

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

Nisvana - Playlists

ನಿಸ್ವನ - ಸಂಧ್ಯಾವಂದನೆ

ನಿಸ್ವನ - Playlistಗಳು