Posts

Showing posts from January, 2024

ನಿಸ್ವನ - ಅಗೋ ಅಲ್ಲಿ ದೂರದಲ್ಲಿ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ಗಾಯನ: ವಾರಿಜಾಶ್ರೀ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಕೀಬೋರ್ಡ್ /ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗಣರಾಜ್ಯೊತ್ಸವದ ಶುಭಾಶಯಗಳೊಂದಿಗೆ,   ವಾರಿಜಾಶ್ರೀ ಯವರ ಮಧುರಕಂಠದಲ್ಲಿ  ಅಂಬಿಕಾತನಯದತ್ತ ರ " ಅಗೋ ಅಲ್ಲಿ ದೂರದಲ್ಲಿ " (ಅವರ " ನಾದಲೀಲೆ " ಸಂಕಲನದಲ್ಲಿದೆ). ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಾಂಡ್ ರಾಗದಲ್ಲಿರುವ ಈ ಹಾಡಿನ ಹಿನ್ನೆಲೆಯಲ್ಲಿ ಗಿಟಾರ್, ಸಂತೂರ್ (ಕೀಬೋರ್ಡಿನಲ್ಲಿ ಹೇಮಂತ್ ಕುಮಾರ್ ಅವರು ನುಡಿಸಿರುವುದು)-ಗಳು ಶ್ರಾವಣದ ಮಳೆ ಹನಿಗಳಂತೆ ಎಡೆಬಿಡದೆ ಸುರಿಯುತ್ತವೆ. ಇಡೀ ಕವನ ಹೀಗಿದೆ. ಅಗೋ ಅಲ್ಲಿ ದೂರದಲ್ಲಿ ೧ ಅಗೋ ಅಲ್ಲಿ ದೂರದಲ್ಲಿ ನೆಲದ ಮುಗಿಲ ಮಗ್ಗುಲಲ್ಲಿ ಹಸಿರಿನ ಹಸುಗೂಸದೊಂದು ಆಗ ಈಗ ಹೊರಳುತಿಹುದು ಏನೋ ಎಂತೊ ಒರಲುತಿಹುದು ಆಽ ಹಸಿರ ಒಳಗೆ ಹೊರಗೆ ನೀರ ಬೆಳಕ ತುಣುಕು ಮಿಣುಕು, ಅಲ್ಲಿನಿಂದ ಬಂದೆಯಾ! ಕುಣಿವ ಮಣಿವ ಹೆಡೆಯ ಹಾವು- ಗಳನು ಹಿಡಿದು ತಂದೆಯಾ? ೨ ಏಕೆ ಬಂದೆ? ಏನು ತಂದೆ? ಹೇಳೊ ಹೇಳು ಶ್ರಾವಣಾ ನೀ

ನಿಸ್ವನ - ಮತ್ತೆ ನೆನಪಾಗುತಿದೆ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ನಳಿನಕಾಂತಿ ಯಲ್ಲಿದೆ. ಇಲ್ಲಿ ವೀಣೆ ಹಾಗೂ ಗಿಟಾರ್-ಗಳು ಹದವಾದ ನೆನಪಿನ ಲೋಕದ ಚಿತ್ರ ಬರೆಯುತ್ತವೆ. ಇಡೀ ಕವನ ಹೀಗಿದೆ. ಮತ್ತೆ ನೆನಪಾಗುತಿದೆ ೧ ಕಣ್ಣೀರ ಬಟ್ಟಲಲಿ ಹೊಳೆವ ಮುತ್ತಿನ ಮಾಲೆ, ಬಣ್ಣಗಳ ಮಿಂಚು, ಬೆಳಕು! ಪನ್ನೀರ ಪರಿಮಳದ ಹವಳ ಹಲ್ಲಿನ ಸಾಲು, ಮೊಗದಗಲ ನಗೆಯ ಥಳಕು! ೨ ಬರಡು ಬದುಕಿನ ಬಯಲಲೆತ್ತರದ ನುಡಿಬೆಟ್ಟ, ಬಿತ್ತರದ ಹನಿನೀರ ಕೊಳವು. ಹರಿವ ಕಣ್ಣೋಟದಾ ಸೀಮೆಯಿಲ್ಲದ ತೋಟ ಹತ್ತಿರದ ಸುಮನಸರ ಸುಳಿವು. ೩ ಮತ್ತೆ ನೆನಪಾಗುತಿದೆ, ಮೆತ್ತಗಿನ ಮನದಲ್ಲಿ, ಕೃತ್ತಿಕೆಯ ಮಾಲೆಯಂತೆ. ನಿಂತ ಗಡಿಯಾರದಾ ಹಳೆಯ ಮುಳ್ಳುಗಳಂತೆ ಮಲೆನಾಡ ಮಾವಿನಂತೆ… - ಪಿ ಕೆ ಪರಮೇಶ್ವರ ಭಟ್ ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTube license  ಮೂಲಕ ಲಭ್

ನಿಸ್ವನ - ನಸುಕು ಬಂತು ನಸುಕು ೨

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಸಾರಂಗಿ:  ಸರ್ಫ಼ರಾಜ಼್ ಖಾನ್ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ನಸುಕು ಬಂತು ನಸುಕು " ಎಂಬ ಈ ಕವನ, ಅವರ " ಗಂಗಾವತರಣ " ಸಂಕಲನದಲ್ಲಿದೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ  ಈಗಾಗಲೇ ಹಾಡಿದ್ದೇನೆ . ಅಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ ರಾಗವಾದರೆ, ಇಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ  ನಂದ್  ಆಧಾರವಾಗಿದ್ದು, ಸಾರಂಗಿ, ಸಿತಾರ್, ತಬಲಾಗಳ ಆಹ್ಲಾದಕರ ಹಿಮ್ಮೇಳವಿದೆ. ಇಡೀ ಕವನ ಹೀಗಿದೆ. ನಸುಕು ಬಂತು ನಸುಕು ೧ ಬೆಳಗು ಗಾಳಿ ತಾಕಿ ಚಳಿತು ಇರುಳ ಮರವು ಒಡೆದು ತಳಿತು ಅರುಣ ಗಂಧ ಹರುಹಿ ಒಳಿತು ನಸುಕು ಬಂತು ೨ ಬೆಳಕು ಬಳ್ಳಿ ಬಿಟ್ಟು ಕುಡಿ ಬಯಲಲೆತ್ತಿ ಹಗಲಗುಡಿ ಅಡಗಿಸಿಟ್ಟು ರವಿಯ ಮಿಡಿ ನಸುಕು ಬಂತು. ೩ ಬೆಳಗು ಸೂಸುತಿರಲು ಸುಸಿಲು ಅದನು ಮೂಸುತಿರಲು ಉಸಿಲು ಬೆಳಕು ಹೂತು ಆತು ಬಿಸಿಲು ನಸುಕು ಬಂತು. - ಅಂಬಿಕಾ

ನಿಸ್ವನ - ನನ್ನ ನಿನ್ನ ನಡುವೆ

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ನನ್ನ ನಿನ್ನ ನಡುವೆ " ಎಂಬ ಈ ಕವನ, ಅವರ " ನಡೆದು ಬಂದ ದಾರಿ " ಸಂಕಲನದಲ್ಲಿದೆ. ಮನಮುಟ್ಟುವ ಗಿಟಾರ್ ಹಾಗೂ ವಯೊಲಿನ್-ಗಳಿಂದ ಕೂಡಿದ ಈ ಹಾಡಿನ ಪಲ್ಲವಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ C major scale  (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಚಾರುಕೇಶಿ  ರಾಗಗಳು ಒಂದರ ಹಿಂದೆ ಇನ್ನೊಂದರಂತೆ, ಮತ್ತೆ ಮತ್ತೆ ಬಂದರೆ, ಚರಣದಲ್ಲಿ  C major -ಇನ relative minor ,  A minor -ಅನ್ನು (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ಹಾಗೂ ಕೀರವಾಣಿ ರಾಗಗಳ ಸ್ವರಗಳು) ಕಾಣಬಹುದು. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ

ನಿಸ್ವನ - ಭಾವಗೀತ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಿಲಹರಿ ರಾಗವನ್ನು ಕಾಣಬಹುದು. ಇಡೀ ಕವನ ಹೀಗಿದೆ. ಭಾವಗೀತ ೧ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ” ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ಭೃಂಗದ ಬೆನ್ನೇರಿ ಬಂತು ………. ೨ ಏನು ಏನು? ಜೇನು ಜೇನು? ಎನೆ ಗಂಗುಂ ಗಾನಾ ಓಂಕಾರದ ಶಂಖನಾದಕಿಂತ ಕಿಂಚಿದೂನಾ ಕವಿಯ ಏಕತಾನ ಕವನದಂತೆ ನಾದಲೀನಾ ಭೃಂಗದ ಬೆನ್ನೇರಿ ಬಂತು ………. ೩ ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಲಾ ಭೃಂಗದ ಬೆನ್ನೇರಿ ಬಂತು ………. ೪ ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ ಭೃಂಗದ ಬೆನ್ನೇರಿ ಬಂತು ………. ೫ ಎಲ್

ನಿಸ್ವನ - ಹಾಡು

Image
ನಿಸ್ವನದ ಭಾಗವಾಗಿ... ಕವನ:  ಚನ್ನವೀರ ಕಣವಿ ಕವನದ ಕಾಪೀರೈಟ್ ಕೃಪೆ:  ಪ್ರಿಯದರ್ಶಿ ಕಣವಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಚನ್ನವೀರ ಕಣವಿ ಯವರ ಈ "ಹಾಡಿ"ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ , ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಜಂಜೂಟಿ  (ಹಾಗೂ ತುಸುವಾಗಿ ಗಾವತಿ ) ರಾಗಗಳನ್ನು ಕಾಣಬಹುದು. ಇಡೀ ಕವನ ಹೀಗಿದೆ. ಹಾಡು ೧ ಮುಗಿಲ ಬಸಿರ ಬಯಲಿನಿಂದ ಹಗಲಿರುಳಿನ ಕೊಯಿಲಿನಿಂದ ಹೊಸಗಾಳಿಯ ಸುಯ್ಲಿನಿಂದ ದಶ ದಿಸೆಗಳು ಮೊರೆದಿವೆ. ೨ ಎಲೆಎಲೆಗಳ ನಲುಗಿನಲ್ಲಿ ಬದುಕಿನ ಕೂರಲಗಿನಲ್ಲಿ ಹೊಂಗಿರಣದ ಗಲಗಿನಲ್ಲಿ ಸುಖ-ದುಃಖವ ಬರೆದಿವೆ. ೩ ಒಳಬಾಳಿನ ತೆರೆಗಳಲ್ಲಿ ಎದೆಯಾಳದ ಕರೆಗಳಲ್ಲಿ ದುಡಿವೆಯ ಹಿರಿ ಹೊರೆಗಳಲ್ಲಿ ಸಂಕಲ್ಪದ ಹದವಿದೆ. ೪ ಮನಮನಗಳ ಅರುಹಿನಲ್ಲಿ ಮಾಂಗಲ್ಯದ ಕುರುಹಿನಲ್ಲಿ ಕರುಣೆಯ ಕಂದೆರವಿನಲ್ಲಿ ಜೀವದ ಸಂಮುದವಿದೆ. - ಚನ್ನವೀರ ಕಣವಿ ಕಣವಿ ಸಮಗ್ರ ಕಾವ್ಯ: ಪುಟ 397 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTub

ನಿಸ್ವನ - ಪೆರುಮಾಳನ ಕೆಂದಾವರೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಪೆರುಮಾಳನ ಕೆಂದಾವರೆ " ಇಹದಾಚೆಯ ಹಾಡು. ಅವರ " ಚೈತ್ಯಾಲಯ " ಸಂಕಲನದಲ್ಲಿರುವ ಇದು,  ಶ್ರೀ ಅರವಿಂದ ರ " Rose of God " ಎಂಬ ಕವನದ ಭಾವಾನುವಾದ. ಇಲ್ಲಿ ವಯೊಲಿನ್, ವೀಣೆಗಳೊಂದಿಗೆ, ಮಾಂತ್ರಿಕ ಕೊಳಲು, ಗಿಟಾರ್‍ಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಲತಾಂಗಿ ರಾಗದಲ್ಲಿ ಮಾಟ ಮಾಡಿವೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ಪೆರುಮಾಳನ ಕೆಂದಾವರೆ ೧ ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಬಣ್ಣದ ಕಿಚ್ಚೇ. ೨ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇಲಕ್ಕುರಿಯೇ ಹೆಸರಾಚೆಯ ಭಾವದ ಹೂ ಸುರಿಸಿದ ಹಿರ

ನಿಸ್ವನ - ಸೆಳವು ೧

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್   ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ " ಸೆಳವು " ಎಂಬ ಈ ಕವನ, ಅವರ " ಸಂಜೆ ಹಾಡು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ ಈಗಾಗಲೇ ಹಾಡಿದ್ದೇನೆ . ಅಲ್ಲಿ ಒಂದೇ ರಾಗದ (ಖಮಾಚ್) ಮಂದ್ರ, ತಾರ ಸ್ಥಾಯಿಗಳ ಲೋಕಗಳಾದರೆ, ಇಲ್ಲಿ ಷಡ್ಜಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್  (notes from the Lydian mode in C ) ಹಾಗೂ ನಿಷಾದಶ್ರುತಿಯಲ್ಲಿ ಭೈರವೀ (ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ಸಿಂಧುಭೈರವಿ , notes from the Phrygian mode in B ) ರಾಗಗಳ ಲೋಕಗಳಿವೆ.  ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ