ನಿಸ್ವನ - ನಸುಕು ಬಂತು ನಸುಕು ೨

ನಿಸ್ವನದ ಭಾಗವಾಗಿ...

ಅಂಬಿಕಾತನಯದತ್ತರ "ನಸುಕು ಬಂತು ನಸುಕು" ಎಂಬ ಈ ಕವನ, ಅವರ "ಗಂಗಾವತರಣ" ಸಂಕಲನದಲ್ಲಿದೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ ಈಗಾಗಲೇ ಹಾಡಿದ್ದೇನೆ. ಅಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ ರಾಗವಾದರೆ, ಇಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ ನಂದ್ ಆಧಾರವಾಗಿದ್ದು, ಸಾರಂಗಿ, ಸಿತಾರ್, ತಬಲಾಗಳ ಆಹ್ಲಾದಕರ ಹಿಮ್ಮೇಳವಿದೆ.

ಇಡೀ ಕವನ ಹೀಗಿದೆ.

ನಸುಕು ಬಂತು ನಸುಕು

ಬೆಳಗು ಗಾಳಿ ತಾಕಿ ಚಳಿತು

ಇರುಳ ಮರವು ಒಡೆದು ತಳಿತು

ಅರುಣ ಗಂಧ ಹರುಹಿ ಒಳಿತು

ನಸುಕು ಬಂತು

ಬೆಳಕು ಬಳ್ಳಿ ಬಿಟ್ಟು ಕುಡಿ

ಬಯಲಲೆತ್ತಿ ಹಗಲಗುಡಿ

ಅಡಗಿಸಿಟ್ಟು ರವಿಯ ಮಿಡಿ

ನಸುಕು ಬಂತು.

ಬೆಳಗು ಸೂಸುತಿರಲು ಸುಸಿಲು

ಅದನು ಮೂಸುತಿರಲು ಉಸಿಲು

ಬೆಳಕು ಹೂತು ಆತು ಬಿಸಿಲು

ನಸುಕು ಬಂತು.

- ಅಂಬಿಕಾತನಯದತ್ತ

ಗಂಗಾವತರಣ: 40

ಪ್ರಕಾಶನ: 1951


Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಜ್ಞಾನಸೂತಕ

ನಿಸ್ವನ - ಮಳೆ

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ