ನಿಸ್ವನ - ನಸುಕು ಬಂತು ನಸುಕು ೧
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ಬಾನ್ಸುರೀ: ಆನಂದ ಪ್ರಸನ್ನ ಪಟ್ಟನಾಯಕ್ (Flute Butto)
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ ಈಗಾಗಲೇ ಹಾಡಿದ್ದೇನೆ. ಅಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ನಂದ್ ಕಲ್ಯಾಣ್ ರಾಗವಾದರೆ, ಇಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ ರಾಗ ಆಧಾರವಾಗಿದ್ದು, ಕೇವಲ Jazz ಶೈಲಿಯಿಂದ ಪ್ರೇರಿತವಾದ ಗಿಟಾರಿನ ಹಿನ್ನೆಲೆಯಿದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂರ ಇದಕ್ಕೆ ಹತ್ತಿರವಾದ ರಾಗ.
ಇಡೀ ಕವನ ಹೀಗಿದೆ.
ನಸುಕು ಬಂತು ನಸುಕು
೧
ಬೆಳಗು ಗಾಳಿ ತಾಕಿ ಚಳಿತು
ಇರುಳ ಮರವು ಒಡೆದು ತಳಿತು
ಅರುಣ ಗಂಧ ಹರುಹಿ ಒಳಿತು
ನಸುಕು ಬಂತು
೨
ಬೆಳಕು ಬಳ್ಳಿ ಬಿಟ್ಟು ಕುಡಿ
ಬಯಲಲೆತ್ತಿ ಹಗಲಗುಡಿ
ಅಡಗಿಸಿಟ್ಟು ರವಿಯ ಮಿಡಿ
ನಸುಕು ಬಂತು.
೩
ಬೆಳಗು ಸೂಸುತಿರಲು ಸುಸಿಲು
ಅದನು ಮೂಸುತಿರಲು ಉಸಿಲು
ಬೆಳಕು ಹೂತು ಆತು ಬಿಸಿಲು
ನಸುಕು ಬಂತು.
- ಅಂಬಿಕಾತನಯದತ್ತ
ಗಂಗಾವತರಣ: 40
ಪ್ರಕಾಶನ: 1951
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment