ನಿಸ್ವನ - ಜೊಂಪಿಸಿತ್ತು ಮಣ್ಣು
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
- ಬಾನ್ಸುರೀ: ಆನಂದ ಪ್ರಸನ್ನ ಪಟ್ಟನಾಯಕ್ (ಫ಼್ಲೂಟ್ ಬುಟ್ಟೋ)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ಸಿತಾರ್: ಸುಬ್ರಹ್ಮಣ್ಯ ಹೆಗಡೆ
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಈ ಹಾಡಿನ ಪಲ್ಲವಿ ಹಾಗೂ ಮೊದಲ ಚರಣಕ್ಕೆ ಕರ್ನಾಟಕ ಸಂಗೀತದ ಮೋಹನ ಕಲ್ಯಾಣಿ ರಾಗದ ಹಾಗೂ ಕೊನೆಯ ಚರಣಕ್ಕೆ ಕೇದಾರಗೌಳ ರಾಗದ ಆಧಾರವಿದೆ. ಕೊನೆಯ ಚರಣದಲ್ಲಿ ಕೇದಾರಗೌಳವನ್ನು, ಮೋಹನಕಲ್ಯಾಣಿಯ ರಿಷಭವನ್ನು ಷಡ್ಜವಾಗಿಸಿ, ಗ್ರಹಭೇದದೊಂದಿಗೆ ಬಳಸಲಾಗಿದೆ.
ಇಡೀ ಕವನ ಹೀಗಿದೆ.
ಜೊಂಪಿಸಿತ್ತು ಮಣ್ಣು
೧
ಜೊಂಪಿಸಿತ್ತು ಮಣ್ಣು ಮಣ್ಣು
ಎವೆ ತೆರೆಯದ ಕೂಸು-ಕಣ್ಣು
ಮೊಳಕೆ ಬರದೆ ಗಣಿಕೆಗಣ್ಣು
ಎಲ್ಲೊ ಇತ್ತು ಚಿಗುರುಬಣ್ಣ
ಹೂಹೂವಿನ ಚಿತ್ರವರ್ಣ
೨
ನಿದ್ರಿಸುತಿದೆ ಕಂಪಕಂಪ
ಅಡಗಿದೆ ಎಲೆ ಪಸರ ಜೊಂಪ
ಸವಿ ನುಂಗಿದೆ ತನ್ನ ಹಂಪ
ಬಸಿರು ಬಯಲು ಪೊಳ್ಳುಗುಂಭ
೩
ಬಂಜೆಗಾಳಿ ಅದರ ತುಂಬ
ಜಪಿಸುತಿರೋ ಶಪಿಸದಿರು
ಕುಪಿಸದಿರೋ ತಪಿಸುತಿರು
ಉಸಿರು ಮಸೆದ ಉರಿಯು ಆಗ
ಬೇಗೆ ಹತ್ತಿದಂತೆ ಬೇಗ.
೪
ತಲೆಮೊಳೆವುದು ಬಿದ್ದ ಬಿತ್ತು;
ಸಿಂಪಿ ತೆರೆದು ಬಹುದು ಮುತ್ತು.
ಅಲ್ಲಿವರೆಗು ಮೌನ ಗುರು.
ಅದರ ಶಿಷ್ಯ ನೀನಾಗಿರು.
- ಅಂಬಿಕಾತನಯದತ್ತ
ಹೃದಯ ಸಮುದ್ರ: 50
ಪ್ರಕಾಶನ: 1956
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment