ನಿಸ್ವನ - ನನ್ನ ನಿನ್ನ ನಡುವೆ

ನಿಸ್ವನದ ಭಾಗವಾಗಿ...

  • ಕವನ: ಎಂ ಗೋಪಾಲಕೃಷ್ಣ ಅಡಿಗ
  • ಕವನದ ಕಾಪೀರೈಟ್ ಕೃಪೆ: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು
  • ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ: ಹೇಮಂತ್ ಕುಮಾರ್
  • ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
  • ಕೀಬೋರ್ಡ್: ಟೋನಿ ಮ್ಯಾಥ್ಯೂ
  • ರಿದಮ್ ಪ್ಯಾಡ್: ವರದರಾಜ್
  • ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಗೋಪಾಲಕೃಷ್ಣ ಅಡಿಗರ "ನನ್ನ ನಿನ್ನ ನಡುವೆ" ಎಂಬ ಈ ಕವನ, ಅವರ "ನಡೆದು ಬಂದ ದಾರಿ" ಸಂಕಲನದಲ್ಲಿದೆ.

ಮನಮುಟ್ಟುವ ಗಿಟಾರ್ ಹಾಗೂ ವಯೊಲಿನ್-ಗಳಿಂದ ಕೂಡಿದ ಈ ಹಾಡಿನ ಪಲ್ಲವಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ C major scale (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಚಾರುಕೇಶಿ ರಾಗಗಳು ಒಂದರ ಹಿಂದೆ ಇನ್ನೊಂದರಂತೆ, ಮತ್ತೆ ಮತ್ತೆ ಬಂದರೆ, ಚರಣದಲ್ಲಿ C major-ಇನ relative minorA minor-ಅನ್ನು (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ಹಾಗೂ ಕೀರವಾಣಿ ರಾಗಗಳ ಸ್ವರಗಳು) ಕಾಣಬಹುದು. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು.

ಇಡೀ ಕವನ ಹೀಗಿದೆ.

ನನ್ನ ನಿನ್ನ ನಡುವೆ

ಇಲ್ಲಿ ನನ್ನ ನಿನ್ನ ನಡುವೆ ಎಂಥ ಕಡಲು ನಿಂತಿದೆ,

ಅದೆಂಥ ಕಡಲು ನಿಂತಿದೆ;

ಅಂತವಿಲ್ಲ ಪಾರವಿಲ್ಲದಂತೆ ನಿಡಿದು ನಿಂತಿದೆ,

ಅಯ್ಯೋ, ನಿಡಿದು ನಿಂತಿದೆ!

ಅದನು ದಾಟಿ ಬರಲು ಬಂದ ಬಾಳು ಸಾಲದಂತಿದೆ,

ಅಯ್ಯೋ, ಸಾಲದಂತಿದೆ!

ನನ್ನದಿಲ್ಲಿ ಈ ತೀರ, ನಿನ್ನದದೋ ಆ ತೀರ;

ಅದರ ನಡುವೆ ಮೊರೆವ ತೆರೆಗಳೋಳಿ ಎನಿತು ಘೋರ ಘೋರ

ಭೋರೆಂದು ಕೂಗಿ ರೇಗಿ ಕಿವಿಯ ಕೊರೆಯುವೀ ಸಮೀರ

ನನ್ನ ಕೂಗು ನಿನ್ನ ಕಿವಿಗೆ ಬೀಳದಂತೆ ಮಾಡಿದೆ -

ಅಯ್ಯೋ, ನನ್ನ ನಿನ್ನ ನಡುವೆ ಎಂಥ ಕಡಲು ಮೂಡಿದೆ,

ಅದೆಂಥ ಕಡಲು ಮೂಡಿದೆ!

- ಎಂ ಗೋಪಾಲಕೃಷ್ಣ ಅಡಿಗ

ನಡೆದು ಬಂದ ದಾರಿ: 185

ಪ್ರಕಾಶನ: 1952

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಜ್ಞಾನಸೂತಕ

ನಿಸ್ವನ - ಮಳೆ

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ