Posts

ನಿಸ್ವನ - ಮಳೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಗಾಯನ: ಅಂಶುಮಾನ್ ಕೆ ಆರ್, ಮಾನಸ ಹೊಳ್ಳ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ಸಿತಾರ್: ಅರ್ಜುನ್ ಆನಂದ್ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಧ್ಯಮಾವತಿ  ರಾಗವನ್ನು ತುಸು ಜಾನಪದ ಶೈಲಿಯಲ್ಲಿ, vocal harmonyಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಮಳೆ ೧ ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ ನೋಡೋಣ. ೨ ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ೩ ಕೋಲ್ಮಿಂಚು ಇಣುಕಿಣುಕಿ ಕಣ್ಕುಣಿಸಿ ಕೆಣಕೆಣಕಿ ಬಾ ಗೆಣೆಯ ಹೊರಗೆ ಎನುವಾಗ ಒಳಸೇರಿ ಹರೆ ಮೀರಿದ್ಹಾಂಗ ಕುಳಿತೇವೊ - ಅಂಬಿಕಾತನಯದತ್ತ ಉಯ್ಯಾಲೆ: 66 ಪ್ರಕಾಶನ: 1938 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾ...

ನಿಸ್ವನ - ಜ್ಞಾನಸೂತಕ

Image
ನಿಸ್ವನದ ಭಾಗವಾಗಿ... ಕವನ/ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ: ಪಿ ಜನಾರ್ದನ್ ರಾವ್ ಕೀಬೋರ್ಡ್/ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡು ಕರ್ನಾಟಕ ಶಾಸ್ತ್ರೀಯ ಸಂಗೀತದ ಸುರುಟಿ , ಕೇದಾರಗೌಳ , ಶಹನ , ಯದುಕುಲಕಾಂಭೋಜಿ ಹಾಗೂ ಕಾಂಭೋಜಿ  ರಾಗಗಳಿಂದ ಕೂಡಿದೆ. ಇಡೀ ಕವನ ಹೀಗಿದೆ. ಜ್ಞಾನಸೂತಕ ೧ ನೀರಗೆರೆಯ ತಳಸ್ಪರ್ಶದಂತೆ, ಕರಿಮೋಡ ತಂದ ಲಘುವರ್ಷದಂತೆ, ಬಸಿರೊಳಗಿನಿಂದ ಎಳೆ ಹರ್ಷದಂತೆ, ಒಳಹೊರಗು ಹರಿಯಿತಲ್ಲ! ೨ ಭಿತ್ತಿಯನ್ನೆ ಕಳೆ. ಬಿತ್ತಿಲ್ಲದೆ ಬೆಳೆ. ನೆತ್ತಿಯಲ್ಲಿ ನೆಲೆನಿಂತ ನೀರಹೊಳೆ. ತಲೆಬಾಗಿಸಿದರೆ ಅಲ್ಲೆ ಹರಿವ ತೊರೆ, ನೆರೆಯೆ ಬಂದಿತಲ್ಲ! ೩ ಬೇರಿನಲ್ಲೆ ಫಲ. ಬೇಲಿಯಲ್ಲೆ ಹೊಲ. ಇಂಗಿತವೇ ಹರಿವಂಥ ಜೀವಜಲ! ಮಿಂಚಿನಹುಳದೊಳಬೆಳಕಿನಂತೆ ಬೇರೇನೊ ಹೊಳೆಯಿತಲ್ಲ! ೪ ಮಂಜು ಮಸುಕು ಮುಂಜಾವದಲ್ಲಿ ಚಳಿಗಾಲ ಮಾಗಿ ನಿಟ್ಟುಸಿರು ಬಿಟ್ಟ ನಸುಕಾದ ಎದೆಯೆ ಇಬ್ಬನಿಯ ಹಾರ ವರವಾಗಿ ಪಡೆಯಿತಲ್ಲ! - ಅಂಶುಮಾನ್ ಕೆ ಆರ್ ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 International License  ಹಾಗೂ  standard YouTube license  ಮೂಲಕ ಲಭ್ಯವಿವೆ. These songs are licensed under a  Creative Commons Attribution-NonCommercial-NoDeriv...

ಸ್ಥಳಾಂತರದ ಸೂಚನೆ

ಈ ತಾಣದ ಕವನ ಗಳನ್ನು ಹಾಗೂ ಅವುಗಳ ತಾತ್ಪರ್ಯ ದ ಕುರಿತಾದ ಲೇಖನಗಳನ್ನು GitHub ಇನಲ್ಲಿರುವ jnaanasootaka ಎಂಬಲ್ಲಿಗೂ, ಕನ್ನಡದ ಭಕ್ತಿ ಯ ಕುರಿತಾದ ಲೇಖನಗಳನ್ನು ಅದೇ GitHub ಇನಲ್ಲಿರುವ kannadada-bhakti  ಎಂಬಲ್ಲಿಗೂ,   ಪ್ರವೇಶ, ಪ್ರಕಾಶನ, ಸಹಯೋಗ, ತಿದ್ದುಪಡಿಗಳ ಅನುಕ್ರಮಗಳ ಸೌಲಭ್ಯಕ್ಕಾಗಿ ಸ್ಥಳಾಂತರಿಸಿದ್ದೇನೆ. ಸ್ಥಳಾಂತರಿಸಿದ ಎಲ್ಲ ಲೇಖನಗಳಲ್ಲೂ ಹಿಂದಿದ್ದ, ಮುಂದುವರೆಯುವ ಕೊಂಡಿಗಳನ್ನು ಸೂಕ್ತವಾಗಿ ಕೊಟ್ಟಿದ್ದೇನೆ. ಆ ಲೇಖನಗಳ ಮುಂದಿನ ತಿದ್ದುಪಡಿಗಳೂ, ಅದೇ ವಿಷಯಕ್ಕೆ ಸಂಬಂಧಿಸಿದ ಹೊಸ ಲೇಖನಗಳೂ ಆಯಾ GitHub ತಾಣಗಳಲ್ಲೇ ನಡೆಯಲಿವೆ. ನಿಸ್ವನ ಶೀರ್ಷಿಕೆಯಡಿಯ ಭಾವಗೀತೆಗಳ ಮಾಹಿತಿ ನೀಡುವ ಲೇಖನಗಳು ಈ ತಾಣದಲ್ಲೇ ಮುಂದುವರಿಯಲಿವೆ. ಹಾಗೆಯೇ, ಆಸಕ್ತರ ಅನುಕೂಲಕ್ಕಾಗಿ,  ಕವನ ಗಳ ಮತ್ತು  ಕನ್ನಡದ ಭಕ್ತಿ ಯ ಕುರಿತಾದ ಹೊಸ ಲೇಖನಗಳನ್ನು ಪ್ರಕಾಶಿಸಿದಾಗ ಅವುಗಳ GitHub ಕೊಂಡಿಯನ್ನೂ ಇಲ್ಲಿ ಪ್ರಕಾಶಿಸುತ್ತೇನೆ. ಈ ಬದಲಾವಣೆಯಿಂದ ತೊಂದರೆಯಾಗಿದ್ದರೆ ಕ್ಷಮೆಯಿರಲಿ .

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಕನ್ನಡದ ಪ್ರಥಮಪುರುಷ ದ (third-person) ಎಲ್ಲ ಲಿಂಗ, ವಚನಗಳ (ಅವನು, ಅವಳು, ಅದು, ಅವರು, ಅವು, ಇವನು, ಇವಳು, ಇದು, ಇವರು, ಇವು ಇತ್ಯಾದಿ) ಸರ್ವನಾಮಗಳೆಲ್ಲವೂ ಸ್ವರಾದಿಯಾಗಿದ್ದು, ಅವುಗಳಲ್ಲಿ ಒಂದು ರೀತಿಯ ವ್ಯವಸ್ಥಿತತೆ ಕಂಡುಬರುತ್ತದೆ. ದೂರವಾಚಕವಾದ ಅ (ದೂರ), ಇ (ಸಮೀಪ) ಎನ್ನುವ ಸ್ವರಗಳಿಗೆ ಲಿಂಗ, ವಚನವಾಚಕ (ಅನ್, ಅಳ್, ದ್, ಅರ್, ಮ್/ವ್ ಇತ್ಯಾದಿ)  ಪ್ರತ್ಯಯಗಳು ಸೇರಿ, ಈ ಸರ್ವನಾಮಗಳು ರೂಪುಗೊಂಡಿವೆ ಎನ್ನುವುದು ಸುಲಭವಾಗಿ ತಿಳಿಯುತ್ತದೆ ಮಾತ್ರವಲ್ಲ, ಹೆಚ್ಚಿನೆಲ್ಲ ವೈಯಾಕರಣರೂ ಒಪ್ಪಿರುವ ಮತವೇ ಆಗಿದೆ. ಆದರೆ, ಮಧ್ಯಮಪುರುಷ ಸರ್ವನಾಮಗಳು (second-person) ನಕಾರಾದಿಯಾಗಿದ್ದರೆ (ನೀನು, ನೀವು), ಉತ್ತಮಪುರುಷ ಸರ್ವನಾಮಗಳಲ್ಲಿ (first-person) ನಕಾರಾದಿಯಾದ (ನಾನು, ನಾವು) ಹಾಗೂ ಸ್ವರಾದಿಯಾದ (ಆನು, ಆಮ್/ಆವು) ಎರಡು ಬಗೆಯ ರೂಪಗಳು ಕಾಣಿಸುತ್ತವೆ. ಹಾಗೆಯೇ, ಪ್ರಶ್ನಾರ್ಥಕ ಸರ್ವನಾಮಗಳಲ್ಲೂ, ಸ್ವರಾದಿಯಾದ (ಏನು, ಏಕೆ), ಯಕಾರಾದಿಯಾದ (ಯಾವುದು, ಯಾರು, ಯಾಕೆ ಇತ್ಯಾದಿ) ಎರಡು ಬಗೆಯ ರೂಪಗಳು ಕಾಣಿಸುತ್ತವೆ. ಪ್ರಥಮಪುರುಷದ ಸರ್ವನಾಮಗಳಲ್ಲಿ ಕಾಣುವ ಈ ಸುವ್ಯವಸ್ಥೆ ಹಾಗೂ ಉತ್ತಮಪುರುಷ, ಮಧ್ಯಮಪುರುಷ ಹಾಗೂ ಪ್ರಶ್ನಾರ್ಥಕ ಸರ್ವನಾಮಗಳಲ್ಲಿ ಕಾಣುವ ಭಿನ್ನ...