Posts

ನಿಸ್ವನ - ಗಿರಿಶಿಖರ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್   ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ಗಿರಿಶಿಖರ " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳನ್ನು ಬೇರೆ ಬೇರೆ ಶ್ರುತಿಗಳಲ್ಲಿ ಪೋಣಿಸಲಾಗಿದೆ. ಷಡ್ಜಶ್ರುತಿಯಲ್ಲಿ ಬಿಲಾಸ್‍ಖಾನೀ ತೋಡೀ  (notes from the  Phrygian mode in B ), ತುಸುವಾಗಿ ಭೈರವೀ ಕೂಡ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧುಭೈರವಿ ), ಗಾಂಧಾರಶ್ರುತಿಯಲ್ಲಿ ರಾಗೇಶ್ರೀ  (notes from the Mixolydian mode in D ) ಹಾಗೂ ದೈವತಶ್ರುತಿಯಲ್ಲಿ ಮಾಂಡ್  ರಾಗಗಳಿಗೆ (roughly, notes from G major scale ) ಹಿತವಾದ ಗಿಟಾರ್, ಬಾನ್ಸುರೀಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, ch...

ನಿಸ್ವನ - ಕನಸುಗಳ ಮುಗಿಲೇರಿ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ದೇಶ್ ರಾಗವನ್ನು ಸಿತಾರ್, ಬಾನ್ಸುರೀ, ವಯೊಲಿನ್ ಹಾಗೂ ಶಾಸ್ತ್ರೀಯ ಲಯಗಾರಿಕೆಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಕನಸುಗಳ ಮುಗಿಲೇರಿ ೧ ಕನಸುಗಳ ಮುಗಿಲೇರಿ, ಸಂಚರಿಸಿ ಬಾನಗಲ, ಸವಿಬುತ್ತಿ ಮೆಲ್ಲುವೆಳೆವಕ್ಕಿಗಳಿರಾ, ಕಟ್ಟಿ ಕೆಡವಿದ ರುಚಿರಗೋಪುರಗಳೆನಿತಿಹವೊ, ಮತ್ತೆ ಕಟ್ಟುವ ತವಕವೆನಿತು ಮಧುರ! ೨ ನಿಮ್ಮ ಕಾಣ್ಕೆಗಳೆಲ್ಲ ಸ್ವಚ್ಛಂದಗತಿವಡೆದು ಪೆರರೇರದೆತ್ತರಕೆ ಏರಿ ನಿಲಲಿ. ಕನಸು ತಾ ಸಾಕಾರವಾಗಿ ಭುವನಾಕಾರ ಪಡೆದು ತಮ್ಮನು ತಾವೆ ಕಟ್ಟಿಕೊಳಲಿ ೩ ಸ್ವಪ್ನಲೋಕದ ಕನಕಪಕ್ಷಿಸಂಪುಟದಿಂದ ಮೆಲ್ಲುಲಿಯ ಸವಿಗಾನ ಹೊಮ್ಮಿ ಬರಲಿ. ಪಕ್ಷವಿಕ್ಷೇಪದಲಿ ವಿಶ್ವಚೇತನವಿರಲಿ ಸತ್ವಯುತ ಸವಿಬಾಳ ತ...

ನಿಸ್ವನ - ಇದು ಬಾಳು

Image
ನಿಸ್ವನದ ಭಾಗವಾಗಿ... ಕವನ:  ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್ ಕೃಪೆ:  ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಇದು ಬಾಳು! " ಎಂಬ ಈ ಕವನ, ಅವರ " ಭಾವತರಂಗ " ಸಂಕಲನದಲ್ಲಿದೆ. ವಯೊಲಿನ್, ಚೆಲ್ಲೋ  ಹಾಗೂ Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವೀಣೆಗಳಿಂದ ತುಂಬಿಕೊಂಡಿರುವ ಈ ಹಾಡಿನಲ್ಲಿ, ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ B natural minor scale (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದ ಸ್ವರಗಳು), ಗಾಂಧಾರಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಛಾಯಾನಟ್  (B minorಇನ relative major scale , D major scaleಇನ ಸ್ವರಗಳು) ಹಾಗೂ ನಿಷಾದಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗೇಶ್ರೀ ( mixolydian mode  in A ) ರಾಗಗಳನ್ನು ಪೋಣಿಸಿರುವುದನ್ನು ಕ...

ನಿಸ್ವನ - ನಾನಲೆಯುತಿದ್ದೆ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಂಬಿಕಾತನಯದತ್ತ ರ " ನೆನಲೆಯುತಿದ್ದೆ " ಎಂಬ ಈ ಕವನ, ಅವರ " ಹೃದಯ ಸಮುದ್ರ " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳ ಛಾಯೆಯನ್ನು ಕಾಣಬಹುದು. ಷಡ್ಜಶ್ರುತಿಯಲ್ಲಿ ಮಿಶ್ರ  ತಿಲಕ್ ಕಾಮೋದ್ , ಯಮನ್ ಕಲ್ಯಾಣ್ ,  ಪಂಚಮಶ್ರುತಿಯಲ್ಲಿ ಮಿಶ್ರ  ಮಾಂಝ್ ಖಮಾಜ್  ಹಾಗೂ ಮತ್ತೆ ಷಡ್ಜಶ್ರುತಿಯಲ್ಲಿ ಛಾಯಾನಟ್  ರಾಗಗಳಿಗೆ ವಿಭಿನ್ನ ರೀತಿಯ ಲಯಗಾರಿಕೆಯೊಂದಿಗೆ ಸಾರಂಗಿ, ಸಿತಾರ್, ಬಾನ್ಸುರೀ, ವೀಣೆ, ಗಿಟಾರ್‍ಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀಗಿದೆ. ನಾನಲೆಯುತಿದ್ದೆ ೧ ನಾನಲೆಯುತಿದ್ದ...

ನಿಸ್ವನ - ಎದೆಯು ಮರಳಿ ತೊಳಲುತಿದೆ

Image
ನಿಸ್ವನದ ಭಾಗವಾಗಿ... ಕವನ: ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಎದೆಯು ಮರಳಿ ತೊಳಲುತಿದೆ " ಎಂಬ ಈ ಕವನ, ಅವರ " ಕಟ್ಟುವೆವು ನಾವು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ  G major scale , ಗಾಂಧಾರಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಿಂಧುಭೈರವಿ  ರಾಗ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಭೈರವಿ  ರಾಗ ಅಥವಾ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ   phrygian mode  in B ಹಾಗೂ ಪಂಚಮಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಿಶ್ರ ಕಲಾವತಿ  ರಾಗಗಳನ್ನು Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಹೆಚ್ಚಿನ ವಿವರಗಳನ್ನು vi...

ನಿಸ್ವನ - ಸೆಳವು ೨

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ " ಸೆಳವು " ಎಂಬ ಈ ಕವನ, ಅವರ " ಸಂಜೆ ಹಾಡು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿಯೂ ರಾಗಸಂಯೋಜಿಸಿ ಹಾಡಿದ್ದೇನೆ . ಅಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್ ಹಾಗೂ ಭೈರವಿ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂಭೈರವಿ) ರಾಗಗಳ ಲೋಕಗಳಿವೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ (ಅನ್ಯಸ್ವರವಿರದ)  ಖಮಾಚ್  ರಾಗದ ಮಧ್ಯ, ತಾರ ಸ್ಥಾಯಿ ಹಾಗೂ ವೀಣೆ, ಕೊಳಲುಗಳ ಲೋಕ ಮೊದಲನೆಯದಾದರೆ, ಎರಡೂ ನಿಷಾದಗಳಿರುವ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಖಮಾಜ್ ರಾಗದಲ್ಲಿ ಕೊನೆ...

ನಿಸ್ವನ - ಹೃದಯದಾಕಾಶ

Image
ನಿಸ್ವನದ ಭಾಗವಾಗಿ... ಕವನ/ಕವನದ ಕಾಪೀರೈಟ್ ಕೃಪೆ:  ಅಮೃತ ಸೋಮೇಶ್ವರ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಮೃತ ಸೋಮೇಶ್ವರರ "ಹೃದಯದಾಕಾಶ" ಎಂಬ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ major scale  (ಅಥವಾ ionian mode ) (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ , ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ತುಸುವಾಗಿ mixolydian mode  (ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ ರಾಗದ ಸ್ವರಗಳು) ಕಾಣಬಹುದು. ಇಡೀ ಕವನ ಹೀಗಿದೆ. ಹೃದಯದಾಕಾಶ ೧ ಹೃದಯದಾಕಾಶದೊಳು ಉದಿಸಿ ಬಾ ಹೊಂಬೆಳಕೇ, ಸದಯದಲಿ ಮುನ್ನಡೆಸು ಅರಿವು ಬೆಳಕೇ. ಮಧುರವಾಗಲಿ ಬದುಕು, ಹಿಂಗಿ ಹೋಗಲಿ ಅಳುಕು, ಮುದವರಳಿ ಬರಲೆಂದೇ ಎದೆಯ ಬಯಕೆ. ೨ ಎದೆಯುಳುದಿಸಿದ ಬೆಳಕು ವದನದಲಿ ಬೆಳಗಿರಲಿ ಹದವಾಗಿ ಹಸನಿರಲಿ ಜೀವಲತೆಯು. ಸದಮಲ ವಿವೇಕಸುಮ ಮಘಮಘಿಸಿ ಆನಂದ- ಸುಧೆಯ ಸುಮನಸರಾಗಲೆಲ್ಲ ನರರ...

ನಿಸ್ವನ - ಜೋ-ಅರಿವು

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ಗಾಯನ: ಉಸ್ತಾದ್ ಫ಼ಯಾಜ಼್ ಖಾನ್ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕನ್ನಡ ರಾಜ್ಯೋತ್ಸವದಂದು  ಉಸ್ತಾದ್ ಫ಼ಯಾಜ಼್ ಖಾನ ರ ದನಿಯಲ್ಲಿ  ಅಂಬಿಕಾತನಯದತ್ತ ರ "ಜೋ-ಅರಿವು" ಕನ್ನಡಿಗರಿಗೂ, ಸಂಗೀತಾಸಕ್ತರಿಗೂ ಸಮರ್ಪಿತ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ  ಭಟಿಯಾರ್ ಹಾಗೂ ಮಧ್ಯಮಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ವಸಂತಿ (ಇದು ಷಡ್ಜಶ್ರುತಿಯಲ್ಲಿ ವಿಠ್ಠಲಪ್ರಿಯಾ ಅಥವಾ ಗುಣಾವತಿ ಹಾಗೂ ಹಿಂದೂಸ್ಥಾನಿಯ ಮಂಗಲ್ ಭೈರವ್ ರಾಗಗಳಂತಾಗುತ್ತದೆ), ಇವುಗಳಿಗೆ Jass-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಿದೆ. ಇಡೀ ಕವನ ಹೀಗಿದೆ. ಜೋ-ಅರಿವು ೧ ಮಾಟ, ಮಾಟ, ಇದು ಯಾವ ಆಟ ಈ ಬಟಾ ಬಯಲಿನಲ್ಲಿ. ಅಚ್ಚ ಅರಿವು ಬರಿ ಬಚ್ಚ ಅರಿವು ಹೊಸ ಹೊಚ್ಚ ಅರಿವಿನಲ್...

ನಿಸ್ವನ - ಎಲ್ಲ ಮಲಗಿರುವಾಗ

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ "ಎಲ್ಲ ಮಲಗಿರುವಾಗ" ಎಂಬ ಈ ಕವನ, ಅವರ "ನವಿಲ ದನಿ" ಸಂಕಲನದಲ್ಲಿದೆ. ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ , ಹಂಸಧ್ವನಿ , ಸುರನಂದಿನಿ , ತುಸುವಾಗಿ  ಯಮನ್ ಕಲ್ಯಾಣಿ , ಮೋಹನ ಕಲ್ಯಾಣಿ  ರಾಗಗಳು ಹಾಸುಹೊಕ್ಕಾಗಿವೆ. ಇಡೀ ಕವನ ಹೀಗಿದೆ. ಎಲ್ಲ ಮಲಗಿರುವಾಗ ೧ ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ, ಕಣ್ತುಂಬ ಹೊಂಗನಸು ಬೆಳಗಿನಲ್ಲಿ; ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ. ೨ ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ ಸತ್ತ ಹೂಗಳ ರಾಶಿ ಲತೆಯ ಕೆಳಗೆ; ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ ನಾ ಕಂಡೆ ಹರುಷ...

ನಿಸ್ವನ - ಮನದ ಮಲ್ಲಿಗೆ

Image
ನಿಸ್ವನದ ಭಾಗವಾಗಿ... ಕವನ: ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನ, ಅವರ "ಮನದ ಮಲ್ಲಿಗೆ" ಕವನಸಂಕಲನಕ್ಕೆ ಶೀರ್ಷಿಕೆಯನ್ನೊದಗಿಸಿದೆ.  ಈ ಹಾಡು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ Aeolian mode ಅಥವಾ natural minor scale ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದಲ್ಲಿದೆ. ಇಡೀ ಕವನ ಹೀಗಿದೆ. ಮನದ ಮಲ್ಲಿಗೆ ೧ ಬದುಕು ಸಂಪದ ಮಮತೆ ಮೈಸಿರಿ      ನಾಳಿನಾಸೆಯ ಸಂಪುಟ! ಜಾರುನೆಲವಿದು ಏಳುಬೀಳುಗಳೆಲ್ಲ      ಕಾಣದ ಸಂಕಟ ೨ ಒಲವು ಒಗೆತನ ಸಿರಿಯು ಬಡತನ      ಕನಸಿನರಮನೆ ಬಾವುಟ! ಮನದ ಮಲ್ಲಿಗೆ ಬಾಡದಂತಿರೆ      ನೆಲದ ಸಂಪದದಾವುಟ! ೩ ಒಲಿದ ಮನಗಳ ಕುಸಿದ ಗೋಪುರ      ಹರಕು ಭೂಪಟರೇಖೆಯೋ? ಬಿರಿದ ಒಮ್ಮತವಿರದ ಬಳಗದ      ಕಳೆದ ದುಗುಡದ ಛಾ...