Posts

ಕನ್ನಡದ ಭಕ್ತಿ - ದ್ರಾವಿಡಭಾಷೆಗಳ ವಿಶೇಷಸ್ವರಗಳು

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಭಾರತೀಯ ಭಾಷೆಗಳ ವರ್ಣಮಾಲೆಗಳಲ್ಲಿ ಬಹಳಷ್ಟು ಸಮಾನಾಂಶಗಳು ಕಾಣುತ್ತವೆ. ಸ್ವರ ಗಳು (vowels), ಯೋಗವಾಹ ಗಳು, ವರ್ಗೀಯ ವ್ಯಂಜನ ಗಳು, ಅವರ್ಗೀಯ ವ್ಯಂಜನ ಗಳೆಂದೇ ಹೆಚ್ಚಿನ ಭಾಷೆಗಳ ವರ್ಣಮಾಲೆಗಳು ಸಂಯೋಜಿತವಾಗಿವೆ. ಸಂಸ್ಕೃತವ್ಯಾಕರಣಶಾಸ್ತ್ರದ ಪ್ರಭಾವ ಇತರ ಭಾಷೆಗಳ ಮೇಲೆ ಸಾಕಷ್ಟು ಆಗಿರುವುದೇ ಇದಕ್ಕೆ ಕಾರಣವೆನ್ನಬಹುದು. ಅಷ್ಟಲ್ಲದೆ, ಈ ಎಲ್ಲ ಭಾಷೆಗಳ ವರ್ಣಮಾಲೆಗಳಲ್ಲಿ ಹಲವು ವರ್ಣಗಳೂ ಸಮಾನವಾಗಿಯೇ ಇವೆ. ಭಾರತೀಯ ಲಿಪಿಗಳ ವರ್ಣಗಳು ಅಕ್ಷರೋಚ್ಚಾರಣೆಗೆ ಹತ್ತಿರವಾಗಿರಲು ( phonetic ) ಪ್ರಯತ್ನಿಸುತ್ತವಷ್ಟೇ. ಆದರೆ ಯಾವ ಲಿಪಿಯೂ ಅಕ್ಷರೋಚ್ಚಾರಣೆಯನ್ನು ಪೂರ್ತಿಯಾಗಿ ಬಿಂಬಿಸುವುದು ದುಃಸಾಧ್ಯ . ಹಾಗಿದ್ದರೂ, ಭಾರತೀಯಭಾಷೆಗಳ ಅಕ್ಷರೋಚ್ಚಾರಣೆಯಲ್ಲೂ ಬಹಳ ಸಾಮ್ಯವಿರುವುದನ್ನು ಅಲ್ಲಗಳೆಯಲಾಗದು. ಸ್ಥೂಲವಾಗಿ ಹೀಗೆನ್ನಬಹುದು. ಅ, ಆ, ಇ, ಈ, ಉ, ಊ, ಏ, ಐ, ಓ, ಔ - ಸಾಮಾನ್ಯ ಸ್ವರಗಳು ಅಂ - ಸಾಮಾನ್ಯ ಅನುಸ್ವಾರ ಕ, ಗ, ಙ, ಚ, ಜ, ಞ, ಟ, ಡ, ಣ, ತ, ದ, ನ, ಪ, ಬ, ಮ - ಸಾಮಾನ್ಯ ವರ್ಗೀಯ ವ್ಯಂಜನಗಳು ಯ, ರ, ಲ, ವ, ಸ, ಳ - ಸಾಮಾನ್ಯ ಅವರ್ಗೀಯ ವ್ಯಂಜನಗಳು ಬೇರೆ ಬೇರೆ ಭಾಷೆಗಳಲ್ಲಿ ಇವಕ್ಕೂ ಹೆಚ್ಚಿನ ಇತರ ವರ್ಣಗಳೂ, ಅಕ್ಷರಗಳೂ ಇರಬಹುದು. ಉದಾಹರಣೆಗೆ, ಸಂಸ್ಕೃತದಲ್ಲಿ ऋ, ऋ, ऌ...

ಕನ್ನಡದ ಭಕ್ತಿ - ವಕಾರದ ವಿಭಕ್ತಿ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಕನ್ನಡದಲ್ಲಿ ಕಾಣುವ ದ್ವಿತ್ವಸಂಧಿಗೂ, ಕನ್ನಡದ ವಿಭಕ್ತಿರೂಪಗಳಲ್ಲಿ ಹಲವೆಡೆ ಕಾಣುವ ವಕಾರಕ್ಕೂ, ಅಚ್ಚಗನ್ನಡಛಂದಸ್ಸಿನ ಅಂಶಗಣಗಳ ಆದಿಯ ವಿನ್ಯಾಸಕ್ಕೂ ಹತ್ತಿರದ ಸಂಬಂಧವಿರುವ ಬಗೆಗೆ  ಅನುಸ್ವಾರದ ಅನುಸಾರ ದಲ್ಲೇ ಹೇಳಿರುವುದನ್ನು ನೋಡಬಹುದು. ಆದರೆ (ಅರ್ಧ)ಅನುಸ್ವಾರದ ವಿವಿಧರೂಪಗಳೇ ಆ ಲೇಖನದ ಮುಖ್ಯವಿಷಯವಾಗಿದ್ದು, ವಕಾರದ ವಿಚಾರವು ಅದರಲ್ಲಿ ಚದುರಿಹೋಗಿರುವುದರಿಂದ, ದ್ವಿತ್ವಸಂಧಿ, ವಕಾರ ಹಾಗೂ ಅಂಶಗಣಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಅಲ್ಲಿಂದ ಹೆಕ್ಕಿ ತೆಗೆದು, ಸ್ವಲ್ಪ ವಿಸ್ತರಿಸಿ, ಸ್ವತಂತ್ರವಾದ ಹೊಸ ಲೇಖನವಾಗಿ ಮಾಡಬೇಕಾಯಿತು. ಸ್ಪಷ್ಟತೆಗೋಸ್ಕರ ಮಾಡಿರುವ  ಈ ಅನಿವಾರ್ಯ ಪುನರಾವರ್ತನೆಗೆ ಓದುಗರ ಕ್ಷಮೆಯಿರಲಿ. ಈ ಲೇಖನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ,  ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಕೆಳಗಿರುವ "comment" ವಿಭಾಗದಲ್ಲಿ ಬರೆದು ತಿಳಿಸಿ. This work is licensed under a  Creative Commons Attribution-NonCommercial-NoDer...

ಕನ್ನಡದ ಭಕ್ತಿ - ಅನುಸ್ವಾರದ ಅನುಸಾರ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಹಳಗನ್ನಡದಲ್ಲಿ ಪ್ರಥಮಾ ವಿಭಕ್ತಿಪ್ರತ್ಯಯವಾಗಿ ಕಾಣಿಸುವ ಹಾಗೂ ದ್ವಿತೀಯಾ, ತೃತೀಯಾ, ಪಂಚಮೀ ವಿಭಕ್ತಿಪ್ರತ್ಯಯಗಳ ಅಂತ್ಯದಲ್ಲಿ ಕಾಣಿಸುವ ಅನುಸ್ವಾರವನ್ನು ಹೇಗೆ ಉಚ್ಚರಿಸಬೇಕು ಎನ್ನುವುದರ ಬಗ್ಗೆ ಪ್ರಾಚೀನ ಹಾಗೂ ಆಧುನಿಕ ವೈಯಾಕರಣರಲ್ಲಿ ಭಿನ್ನಮತಗಳಿವೆ. ಈ ಅನುಸ್ವಾರದ ನಿಜರೂಪವನ್ನರಸುತ್ತಾ ಪ್ರಾಚೀನರ ಹಾಗೂ ಆಧುನಿಕರ ಮತಗಳನ್ನು ಒಂದು ರೀತಿಯಲ್ಲಿ ಖಂಡಿಸುತ್ತಾ, ಇನ್ನೊಂದು ರೀತಿಯಲ್ಲಿ ಸಮನ್ವಯಿಸುವ ಪ್ರಯತ್ನ ಇಲ್ಲಿದೆ. ಲೇಖನವು ತುಸು ದೀರ್ಘವೂ, ಅದರಲ್ಲಿ ವಿಷಯಗಳು ತುಸು ಸಂಕೀರ್ಣವೂ ಆಗಿರುವುದರಿಂದ, ಓದುಗರ ತಾಳ್ಮೆ, ಏಕಾಗ್ರತೆಗಳನ್ನು ಕೋರುತ್ತೇನೆ. ಸೂಚನೆ ಈ ಲೇಖನದಲ್ಲಿ ಕೊಟ್ಟಿರುವ ಉದಾಹರಣೆಗಳಲ್ಲಿ, ಅರ್ಧಾನುಸ್ವಾರಕ್ಕೆ ದೇವನಾಗರೀಲಿಪಿಯ ಚಂದ್ರಬಿಂದುವನ್ನು (ಁ) ಬಳಸಿದ್ದೇನೆ. ಅದು ಸರಿಯಾಗಿ ಕಾಣಿಸದಿದ್ದರೆ, ದಯವಿಟ್ಟು ದೇವನಾಗರೀ ಅಥವಾ ಹಿಂದೀ font ಅನ್ನೂ ಹಾಕಿಕೊಳ್ಳಿ. ಆಗ ಎಲ್ಲ ಉದಾಹರಣೆಗಳೂ ಸರಿಯಾಗಿ ಕಂಡಾವು. ಈ ಲೇಖನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ,  ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉ...