ಕನ್ನಡದ ಭಕ್ತಿ - ಅನುಸ್ವಾರದ ಅನುಸಾರ
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಹಳಗನ್ನಡದಲ್ಲಿ ಪ್ರಥಮಾ ವಿಭಕ್ತಿಪ್ರತ್ಯಯವಾಗಿ ಕಾಣಿಸುವ ಹಾಗೂ ದ್ವಿತೀಯಾ, ತೃತೀಯಾ, ಪಂಚಮೀ ವಿಭಕ್ತಿಪ್ರತ್ಯಯಗಳ ಅಂತ್ಯದಲ್ಲಿ ಕಾಣಿಸುವ ಅನುಸ್ವಾರವನ್ನು ಹೇಗೆ ಉಚ್ಚರಿಸಬೇಕು ಎನ್ನುವುದರ ಬಗ್ಗೆ ಪ್ರಾಚೀನ ಹಾಗೂ ಆಧುನಿಕ ವೈಯಾಕರಣರಲ್ಲಿ ಭಿನ್ನಮತಗಳಿವೆ. ಈ ಅನುಸ್ವಾರದ ನಿಜರೂಪವನ್ನರಸುತ್ತಾ ಪ್ರಾಚೀನರ ಹಾಗೂ ಆಧುನಿಕರ ಮತಗಳನ್ನು ಒಂದು ರೀತಿಯಲ್ಲಿ ಖಂಡಿಸುತ್ತಾ, ಇನ್ನೊಂದು ರೀತಿಯಲ್ಲಿ ಸಮನ್ವಯಿಸುವ ಪ್ರಯತ್ನ ಇಲ್ಲಿದೆ. ಲೇಖನವು ತುಸು ದೀರ್ಘವೂ, ಅದರಲ್ಲಿ ವಿಷಯಗಳು ತುಸು ಸಂಕೀರ್ಣವೂ ಆಗಿರುವುದರಿಂದ, ಓದುಗರ ತಾಳ್ಮೆ, ಏಕಾಗ್ರತೆಗಳನ್ನು ಕೋರುತ್ತೇನೆ. ಸೂಚನೆ ಈ ಲೇಖನದಲ್ಲಿ ಕೊಟ್ಟಿರುವ ಉದಾಹರಣೆಗಳಲ್ಲಿ, ಅರ್ಧಾನುಸ್ವಾರಕ್ಕೆ ದೇವನಾಗರೀಲಿಪಿಯ ಚಂದ್ರಬಿಂದುವನ್ನು (ಁ) ಬಳಸಿದ್ದೇನೆ. ಅದು ಸರಿಯಾಗಿ ಕಾಣಿಸದಿದ್ದರೆ, ದಯವಿಟ್ಟು ದೇವನಾಗರೀ ಅಥವಾ ಹಿಂದೀ font ಅನ್ನೂ ಹಾಕಿಕೊಳ್ಳಿ. ಆಗ ಎಲ್ಲ ಉದಾಹರಣೆಗಳೂ ಸರಿಯಾಗಿ ಕಂಡಾವು. ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ, ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉ...