ನಿಸ್ವನ - ಮತ್ತೆ ನೆನಪಾಗುತಿದೆ
ನಿಸ್ವನದ ಭಾಗವಾಗಿ... ಕವನ: ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್: ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ನಳಿನಕಾಂತಿ ಯಲ್ಲಿದೆ. ಇಲ್ಲಿ ವೀಣೆ ಹಾಗೂ ಗಿಟಾರ್-ಗಳು ಹದವಾದ ನೆನಪಿನ ಲೋಕದ ಚಿತ್ರ ಬರೆಯುತ್ತವೆ. ಇಡೀ ಕವನ ಹೀಗಿದೆ. ಮತ್ತೆ ನೆನಪಾಗುತಿದೆ ೧ ಕಣ್ಣೀರ ಬಟ್ಟಲಲಿ ಹೊಳೆವ ಮುತ್ತಿನ ಮಾಲೆ, ಬಣ್ಣಗಳ ಮಿಂಚು, ಬೆಳಕು! ಪನ್ನೀರ ಪರಿಮಳದ ಹವಳ ಹಲ್ಲಿನ ಸಾಲು, ಮೊಗದಗಲ ನಗೆಯ ಥಳಕು! ೨ ಬರಡು ಬದುಕಿನ ಬಯಲಲೆತ್ತರದ ನುಡಿಬೆಟ್ಟ, ಬಿತ್ತರದ ಹನಿನೀರ ಕೊಳವು. ಹರಿವ ಕಣ್ಣೋಟದಾ ಸೀಮೆಯಿಲ್ಲದ ತೋಟ ಹತ್ತಿರದ ಸುಮನಸರ ಸುಳಿವು. ೩ ಮತ್ತೆ ನೆನಪಾಗುತಿದೆ, ಮೆತ್ತಗಿನ ಮನದಲ್ಲಿ, ಕೃತ್ತಿಕೆಯ ಮಾಲೆಯಂತೆ. ನಿಂತ ಗಡಿಯಾರದಾ ಹಳೆಯ ಮುಳ್ಳುಗಳಂತೆ ಮಲೆನಾಡ ಮಾವಿನಂತೆ… - ಪಿ ಕೆ ಪರಮೇಶ್ವರ ಭಟ್ ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0...