ನಿಸ್ವನ - ಹಾಡು
- ಕವನ: ಚನ್ನವೀರ ಕಣವಿ
- ಕವನದ ಕಾಪೀರೈಟ್ ಕೃಪೆ: ಪ್ರಿಯದರ್ಶಿ ಕಣವಿ
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ರಿದಮ್ ಪ್ಯಾಡ್: ವರದರಾಜ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಚನ್ನವೀರ ಕಣವಿಯವರ ಈ "ಹಾಡಿ"ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಜಂಜೂಟಿ (ಹಾಗೂ ತುಸುವಾಗಿ ಗಾವತಿ) ರಾಗಗಳನ್ನು ಕಾಣಬಹುದು.
ಇಡೀ ಕವನ ಹೀಗಿದೆ.
ಹಾಡು
೧
ಮುಗಿಲ ಬಸಿರ ಬಯಲಿನಿಂದ
ಹಗಲಿರುಳಿನ ಕೊಯಿಲಿನಿಂದ
ಹೊಸಗಾಳಿಯ ಸುಯ್ಲಿನಿಂದ
ದಶ ದಿಸೆಗಳು ಮೊರೆದಿವೆ.
೨
ಎಲೆಎಲೆಗಳ ನಲುಗಿನಲ್ಲಿ
ಬದುಕಿನ ಕೂರಲಗಿನಲ್ಲಿ
ಹೊಂಗಿರಣದ ಗಲಗಿನಲ್ಲಿ
ಸುಖ-ದುಃಖವ ಬರೆದಿವೆ.
೩
ಒಳಬಾಳಿನ ತೆರೆಗಳಲ್ಲಿ
ಎದೆಯಾಳದ ಕರೆಗಳಲ್ಲಿ
ದುಡಿವೆಯ ಹಿರಿ ಹೊರೆಗಳಲ್ಲಿ
ಸಂಕಲ್ಪದ ಹದವಿದೆ.
೪
ಮನಮನಗಳ ಅರುಹಿನಲ್ಲಿ
ಮಾಂಗಲ್ಯದ ಕುರುಹಿನಲ್ಲಿ
ಕರುಣೆಯ ಕಂದೆರವಿನಲ್ಲಿ
ಜೀವದ ಸಂಮುದವಿದೆ.
- ಚನ್ನವೀರ ಕಣವಿ
ಕಣವಿ ಸಮಗ್ರ ಕಾವ್ಯ: ಪುಟ 397
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment