ನಿಸ್ವನ - ನನ್ನ ನಿನ್ನ ನಡುವೆ
- ಕವನ: ಎಂ ಗೋಪಾಲಕೃಷ್ಣ ಅಡಿಗ
- ಕವನದ ಕಾಪೀರೈಟ್ ಕೃಪೆ: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಗೋಪಾಲಕೃಷ್ಣ ಅಡಿಗರ "ನನ್ನ ನಿನ್ನ ನಡುವೆ" ಎಂಬ ಈ ಕವನ, ಅವರ "ನಡೆದು ಬಂದ ದಾರಿ" ಸಂಕಲನದಲ್ಲಿದೆ.
ಮನಮುಟ್ಟುವ ಗಿಟಾರ್ ಹಾಗೂ ವಯೊಲಿನ್-ಗಳಿಂದ ಕೂಡಿದ ಈ ಹಾಡಿನ ಪಲ್ಲವಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ C major scale (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಚಾರುಕೇಶಿ ರಾಗಗಳು ಒಂದರ ಹಿಂದೆ ಇನ್ನೊಂದರಂತೆ, ಮತ್ತೆ ಮತ್ತೆ ಬಂದರೆ, ಚರಣದಲ್ಲಿ C major-ಇನ relative minor, A minor-ಅನ್ನು (ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ಹಾಗೂ ಕೀರವಾಣಿ ರಾಗಗಳ ಸ್ವರಗಳು) ಕಾಣಬಹುದು. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು.
ಇಡೀ ಕವನ ಹೀಗಿದೆ.
ನನ್ನ ನಿನ್ನ ನಡುವೆ
೧
ಇಲ್ಲಿ ನನ್ನ ನಿನ್ನ ನಡುವೆ ಎಂಥ ಕಡಲು ನಿಂತಿದೆ,
ಅದೆಂಥ ಕಡಲು ನಿಂತಿದೆ;
ಅಂತವಿಲ್ಲ ಪಾರವಿಲ್ಲದಂತೆ ನಿಡಿದು ನಿಂತಿದೆ,
ಅಯ್ಯೋ, ನಿಡಿದು ನಿಂತಿದೆ!
ಅದನು ದಾಟಿ ಬರಲು ಬಂದ ಬಾಳು ಸಾಲದಂತಿದೆ,
ಅಯ್ಯೋ, ಸಾಲದಂತಿದೆ!
೨
ನನ್ನದಿಲ್ಲಿ ಈ ತೀರ, ನಿನ್ನದದೋ ಆ ತೀರ;
ಅದರ ನಡುವೆ ಮೊರೆವ ತೆರೆಗಳೋಳಿ ಎನಿತು ಘೋರ ಘೋರ
ಭೋರೆಂದು ಕೂಗಿ ರೇಗಿ ಕಿವಿಯ ಕೊರೆಯುವೀ ಸಮೀರ
ನನ್ನ ಕೂಗು ನಿನ್ನ ಕಿವಿಗೆ ಬೀಳದಂತೆ ಮಾಡಿದೆ -
೩
ಅಯ್ಯೋ, ನನ್ನ ನಿನ್ನ ನಡುವೆ ಎಂಥ ಕಡಲು ಮೂಡಿದೆ,
ಅದೆಂಥ ಕಡಲು ಮೂಡಿದೆ!
- ಎಂ ಗೋಪಾಲಕೃಷ್ಣ ಅಡಿಗ
ನಡೆದು ಬಂದ ದಾರಿ: 185
ಪ್ರಕಾಶನ: 1952
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment