ನಿಸ್ವನ - ಮತ್ತೆ ನೆನಪಾಗುತಿದೆ
- ಕವನ: ಪಿ ಕೆ ಪರಮೇಶ್ವರ ಭಟ್
- ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ನಳಿನಕಾಂತಿಯಲ್ಲಿದೆ. ಇಲ್ಲಿ ವೀಣೆ ಹಾಗೂ ಗಿಟಾರ್-ಗಳು ಹದವಾದ ನೆನಪಿನ ಲೋಕದ ಚಿತ್ರ ಬರೆಯುತ್ತವೆ.
ಇಡೀ ಕವನ ಹೀಗಿದೆ.
ಮತ್ತೆ ನೆನಪಾಗುತಿದೆ
೧
ಕಣ್ಣೀರ ಬಟ್ಟಲಲಿ ಹೊಳೆವ ಮುತ್ತಿನ ಮಾಲೆ,
ಬಣ್ಣಗಳ ಮಿಂಚು, ಬೆಳಕು!
ಪನ್ನೀರ ಪರಿಮಳದ ಹವಳ ಹಲ್ಲಿನ ಸಾಲು,
ಮೊಗದಗಲ ನಗೆಯ ಥಳಕು!
೨
ಬರಡು ಬದುಕಿನ ಬಯಲಲೆತ್ತರದ ನುಡಿಬೆಟ್ಟ,
ಬಿತ್ತರದ ಹನಿನೀರ ಕೊಳವು.
ಹರಿವ ಕಣ್ಣೋಟದಾ ಸೀಮೆಯಿಲ್ಲದ ತೋಟ
ಹತ್ತಿರದ ಸುಮನಸರ ಸುಳಿವು.
೩
ಮತ್ತೆ ನೆನಪಾಗುತಿದೆ, ಮೆತ್ತಗಿನ ಮನದಲ್ಲಿ,
ಕೃತ್ತಿಕೆಯ ಮಾಲೆಯಂತೆ.
ನಿಂತ ಗಡಿಯಾರದಾ ಹಳೆಯ ಮುಳ್ಳುಗಳಂತೆ
ಮಲೆನಾಡ ಮಾವಿನಂತೆ…
- ಪಿ ಕೆ ಪರಮೇಶ್ವರ ಭಟ್
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment