ನಿಸ್ವನ - ಕನಸುಗಳ ಮುಗಿಲೇರಿ
- ಕವನ: ಪಿ ಕೆ ಪರಮೇಶ್ವರ ಭಟ್
- ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಸಿತಾರ್: ಅರ್ಜುನ್ ಆನಂದ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ದೇಶ್ ರಾಗವನ್ನು ಸಿತಾರ್, ಬಾನ್ಸುರೀ, ವಯೊಲಿನ್ ಹಾಗೂ ಶಾಸ್ತ್ರೀಯ ಲಯಗಾರಿಕೆಯೊಂದಿಗೆ ಕಾಣಬಹುದು.
ಇಡೀ ಕವನ ಹೀಗಿದೆ.
ಕನಸುಗಳ ಮುಗಿಲೇರಿ
೧
ಕನಸುಗಳ ಮುಗಿಲೇರಿ, ಸಂಚರಿಸಿ ಬಾನಗಲ,
ಸವಿಬುತ್ತಿ ಮೆಲ್ಲುವೆಳೆವಕ್ಕಿಗಳಿರಾ,
ಕಟ್ಟಿ ಕೆಡವಿದ ರುಚಿರಗೋಪುರಗಳೆನಿತಿಹವೊ,
ಮತ್ತೆ ಕಟ್ಟುವ ತವಕವೆನಿತು ಮಧುರ!
೨
ನಿಮ್ಮ ಕಾಣ್ಕೆಗಳೆಲ್ಲ ಸ್ವಚ್ಛಂದಗತಿವಡೆದು
ಪೆರರೇರದೆತ್ತರಕೆ ಏರಿ ನಿಲಲಿ.
ಕನಸು ತಾ ಸಾಕಾರವಾಗಿ ಭುವನಾಕಾರ
ಪಡೆದು ತಮ್ಮನು ತಾವೆ ಕಟ್ಟಿಕೊಳಲಿ
೩
ಸ್ವಪ್ನಲೋಕದ ಕನಕಪಕ್ಷಿಸಂಪುಟದಿಂದ
ಮೆಲ್ಲುಲಿಯ ಸವಿಗಾನ ಹೊಮ್ಮಿ ಬರಲಿ.
ಪಕ್ಷವಿಕ್ಷೇಪದಲಿ ವಿಶ್ವಚೇತನವಿರಲಿ
ಸತ್ವಯುತ ಸವಿಬಾಳ ತವಕವಿರಲಿ.
- ಪಿ ಕೆ ಪರಮೇಶ್ವರ ಭಟ್
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment