ನಿಸ್ವನ - ಹೃದಯದಾಕಾಶ

ನಿಸ್ವನದ ಭಾಗವಾಗಿ...

ಅಮೃತ ಸೋಮೇಶ್ವರರ "ಹೃದಯದಾಕಾಶ" ಎಂಬ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ major scale (ಅಥವಾ ionian mode) (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ತುಸುವಾಗಿ mixolydian mode (ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ ರಾಗದ ಸ್ವರಗಳು) ಕಾಣಬಹುದು.

ಇಡೀ ಕವನ ಹೀಗಿದೆ.

ಹೃದಯದಾಕಾಶ

ಹೃದಯದಾಕಾಶದೊಳು ಉದಿಸಿ ಬಾ ಹೊಂಬೆಳಕೇ,

ಸದಯದಲಿ ಮುನ್ನಡೆಸು ಅರಿವು ಬೆಳಕೇ.

ಮಧುರವಾಗಲಿ ಬದುಕು, ಹಿಂಗಿ ಹೋಗಲಿ ಅಳುಕು,

ಮುದವರಳಿ ಬರಲೆಂದೇ ಎದೆಯ ಬಯಕೆ.

ಎದೆಯುಳುದಿಸಿದ ಬೆಳಕು ವದನದಲಿ ಬೆಳಗಿರಲಿ

ಹದವಾಗಿ ಹಸನಿರಲಿ ಜೀವಲತೆಯು.

ಸದಮಲ ವಿವೇಕಸುಮ ಮಘಮಘಿಸಿ ಆನಂದ-

ಸುಧೆಯ ಸುಮನಸರಾಗಲೆಲ್ಲ ನರರು.

ಸತ್ಯಚೇತನವಾಗಿ, ಸತ್ಯದೀಪವಾಗಿ,

ಕತ್ತಲೆಯ ಕೊತ್ತಳವ ಕಳೆದೊಗೆಯ ಬಾ.

ಬಿತ್ತರದ ಬಾಳಪಥವನು ತೋರು ಕೃಪೆ ಬೀರು.

ಉತ್ತಮಿಕೆಯನು ಹರಸು ಮುಂದೆ ನಡೆಸು.

ಎಲ್ಲ ಮತಿ ಮತ ಮೀರ್ದ, ನನ್ನಿ ಬೇರುಂಟೆಂಬ

ಸೊಲ್ಲ ಮಿನುಗಿಸು ಎಮ್ಮ ಮತಿಗಳೊಳಗೆ.

ಎಲ್ಲವನು ತುಂಬಿ ಮತ್ತೆಲ್ಲವನು ಮೀರ್ದುದಕೆ

ಸಲ್ಲಲೆಮ್ಮಯ ನಮನ ದಿವ್ಯಶುಭಕೆ.

- ಅಮೃತ ಸೋಮೇಶ್ವರ

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ