ನಿಸ್ವನ - ಎದೆಯು ಮರಳಿ ತೊಳಲುತಿದೆ
- ಕವನ: ಎಂ ಗೋಪಾಲಕೃಷ್ಣ ಅಡಿಗ
- ಕವನದ ಕಾಪೀರೈಟ್: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಸಿತಾರ್: ಅರ್ಜುನ್ ಆನಂದ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಗೋಪಾಲಕೃಷ್ಣ ಅಡಿಗರ "ಎದೆಯು ಮರಳಿ ತೊಳಲುತಿದೆ" ಎಂಬ ಈ ಕವನ, ಅವರ "ಕಟ್ಟುವೆವು ನಾವು" ಸಂಕಲನದಲ್ಲಿದೆ.
ಈ ಹಾಡಿನಲ್ಲಿ ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ G major scale, ಗಾಂಧಾರಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಿಂಧುಭೈರವಿ ರಾಗ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಭೈರವಿ ರಾಗ ಅಥವಾ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ phrygian mode in B ಹಾಗೂ ಪಂಚಮಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಿಶ್ರ ಕಲಾವತಿ ರಾಗಗಳನ್ನು Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು.
ಇಡೀ ಕವನ ಹೀಗಿದೆ.
ಎದೆಯು ಮರಳಿ ತೊಳಲುತಿದೆ
೧
ಎದೆಯು ಮರಳಿ ತೊಳಲುತಿದೆ,
ದೊರೆಯದುದನೆ ಹುಡುಕುತಿದೆ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿಬಾಳು ಚಾಚುತಿದೆ
ತನ್ನ ಕುಡಿಯನು.
೨
ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು.
೩
ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿವೆ ಮನದಲಿ!
೪
ನೀರದಗಳ ದೂರತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯಭಾರ
ತಾಳಲೆಂತು ನಾ?
೫
ಯಾವ ಬಲವು ಯಾವ ಒಲವು
ಕಾಯಬೇಕೊ ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ?
- ಎಂ ಗೋಪಾಲಕೃಷ್ಣ ಅಡಿಗ
ಕಟ್ಟುವೆವು ನಾವು: 100
ಪ್ರಕಾಶನ: 1948
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment