Posts

Showing posts with the label ತಾತ್ಪರ್ಯ

ಅವತಾರದ ತಾತ್ಪರ್ಯ

Image
ಕ್ಷಮೆ ಕೇಳುತ್ತಾ... ಅಂಶಗಣ ಛಂದಸ್ಸುಗಳ ಮೇಲಿನ ನನ್ನ ಪ್ರೀತಿಯ ಬಗ್ಗೇ ಈಗಾಗಲೇ ಸ್ವಲ್ಪ ಹೇಳಿದ್ದೇನೆ. ಆದರೆ ಈ ಕವನದ ಬಂಧವಾದ ಅಂಶಗಣಗಳ ತ್ರಿಪದಿ ಯ ಪರಿಚಯ ಮಾಡಬೇಕೆನ್ನಿಸುತ್ತದೆ. ಛಂದೋವತಂಸ ದಂತೆ ವಿರಳವಲ್ಲದೆ, ಬಹಳ ಜನಪ್ರಿಯವೂ, ಜಾನಪದವೂ ಆದ ತ್ರಿಪದಿಗೆ ಅಪರಿಚಿತರಲ್ಲದ ಓದುಗರು ಈ ಕಿರುಪರಿಚಯವನ್ನು ಬಿಟ್ಟು ಮುನ್ನಡೆಯಬಹುದು. ತ್ರಿಪದಿಯ ಲಕ್ಷಣಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ, ತ್ರಿಪದಿಯನ್ನು ಓದುವ/ವಾಚಿಸುವ ಬಗ್ಗೆ ಮಾತ್ರ ಒಂದೆರಡು ಮಾತು. ತ್ರಿಪದಿಯಲ್ಲಿ ಮೂರೇ ಪಾದಗಳಿದ್ದರೂ, ಎರಡನೇ ಪಾದವನ್ನು ಪುನರಾವರ್ತಿಸಿ ನಾಲ್ಕು ಪಾದಗಳಾಗಿ ಓದಬೇಕು. ಆದರೆ, ಎರಡನೇ ಪಾದವನ್ನು ಮೊದಲ ಬಾರಿ ಓದುವಾಗ, ಪಾದದ ಕೊನೆಯ ಗಣವನ್ನು ಓದದೆ (ಇದನ್ನು "||" ಚಿಹ್ನೆಯಿಂದ ಗುರುತಿಸುವುದು ರೂಢಿ), ಅದರ ಹಿಂದಿನ ಗಣ(ಅಂದರೆ, ಎರಡನೇ ಪಾದದ ಮೂರನೇ ಗಣ)ವನ್ನು ಹಿಗ್ಗಿಸಿ ವಿರಮಿಸಬೇಕು.  ಹೀಗೆ ಹಿಗ್ಗಿಸುವಾಗ, ಎರಡನೇ ಪಾದದ ಮೂರನೇ ಗಣದ ಕೊನೆಯ ಅಕ್ಷರವನ್ನು ಬಿಟ್ಟು ಉಳಿದವನ್ನು ಇಡೀ ಗಣದಷ್ಟು ಹಿಗ್ಗಿಸಿ, ಕೊನೆಯ ಅಕ್ಷರವನ್ನು ಮುಡಿ/ಪದ್ಮಗಣದಂತೆ (ಅಪೂರ್ಣ ಗಣ ಎನ್ನಬಹುದು) ಓದುವ ರೀತಿ, ಕವನದ ಜಾನಪದ ಶೈಲಿಯನ್ನು ಇನ್ನೂ ಹೆಚ್ಚಿಸುತ್ತದೆ. ಎರಡನೇ ಪಾದದ ಪುನರಾವರ್ತನೆಯಲ್ಲಿ ಕೊನೆಯ ಗಣವನ್ನೂ ಸೇರಿಸಿ ಓದಬೇಕು. ಆಮೇಲೆ ಮೂರನೇ ಪಾದ. ಉದಾಹರಣೆಗೆ, ಈ ಕವನದ ಪಲ್ಲವಿಯನ್ನು ಹೀಗೆ ಓದಬಹುದು. ಇಳೆ ತಾನೇ|ಉರುಳುರುಳಿ-|ಋತುಗ-ಳೂ|...

ಸರಸ್ವತೀ ತಾತ್ಪರ್ಯ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕ್ಷಮೆ ಬೇಡುತ್ತಾ... ಕವನ ದ ಮೊದಲು ಅದರ ಛಂದಸ್ಸ ನ್ನು ಸ್ವಲ್ಪ ವಿವರಿಸಬೇಕೆನ್ನಿಸುತ್ತದೆ. ಅಕ್ಷರಗಣ ಗಳ ವರ್ಣವತ್ತಗಳು ಮತ್ತು  ಮಾತ್ರಾಗಣ  ಛಂದಸ್ಸುಗಳು ಸಂಸ್ಕೃತ, ಪ್ರಾಕೃತಗಳಿಂದ ಬಂದು ಕನ್ನಡದವೇ ಆದವು. ಅಂಶಗಣ ಛಂದಸ್ಸುಗಳು ಮೊದಲಿನಿಂದಲೂ ಕನ್ನಡದವೇ. ಯಾಕೋ ಅಂಶಗಣ ಛಂದಸ್ಸುಗಳ ಬಳಕೆ ಸಮಕಾಲೀನ ಕವನಗಳಲ್ಲಿ ಕಡಿಮೆಯಾಗಿದೆ, ಆಗುತ್ತಿದೆ ಅಂತ ನನ್ನ ಅನಿಸಿಕೆ. ಸ್ವಲ್ಪ ಜಾನಪದವೆನ್ನಬಹುದಾದ ಶೈಲಿಯನ್ನು ಬಿಂಬಿಸುವ ಕಾರಣವೋ ಏನೋ. ಅದು ನನ್ನ ಸೀಮಿತ ಓದಿನ ತಪ್ಪು ಅಭಿಪ್ರಾಯವೂ ಇರಬಹುದು. ಏನೇ ಇರಲಿ, ನಾನಂತೂ ಅಂಶಗಣಗಳ ಸರಳ ಸೌಂದರ್ಯಕ್ಕೆ ಮಾರುಹೋಗಿದ್ದೇನೆ. ಅಂಶಗಣಗಳೊಳಗಿನ ಹದವಾದ ಎಳೆಯಾಟ ಕನ್ನಡಕ್ಕೆ ವಿಶೇಷ ಲಾಲಿತ್ಯವನ್ನು ಕೊಟ್ಟಿದೆ. ಇಲ್ಲಿ ಬಳಸಿರುವ ಅಂಶಗಣ ಛಂದಸ್ಸು ಛಂದೋವತಂಸ .  ನಾಗವರ್ಮ ಹೇಳಿದಂತೆ, ಇದಕ್ಕೆ ಅಂಶಗಣಗಳ ನಾಲ್ಕು ಪಾದಗಳು. ಪ್ರತಿಯೊಂದು ಪಾದದಲ್ಲಿ 3 ವಿಷ್ಣುಗಣಗಳಾದಮೇಲೆ ಕಡೆಗೊಂದು ಬ್ರಹ್ಮಗಣ. ಆದರೆ ಪಾದಾಂತ್ಯದಲ್ಲಿ ಬ್ರಹ್ಮಗಣಗಳ ಏಕತಾನತೆ ತಪ್ಪಿಸಲಿಕ್ಕಾಗಿ, ಮೂರನೇ ಪಾದಾಂತ್ಯಕ್ಕೆ ವಿಷ್ಣುಗಣಾದೇಶಮಾಡಿ, ಪಾದವನ್ನು ಎರಡು ಭಾಗ ಮಾಡಿ, ಈ ಭಾಗಗಳು ಸರಿಯಾಗಿ ಕಾಣಿಸಲು ಬೇರೊಂದು ಅಂತ್ಯಪ್ರಾಸವನ್ನೂ ಅಳವಡಿಸಿದ್ದೇನೆ. ಹೀಗಾಗಿ ಇದು 5 ಪಾದಗಳ ಇಂಗ್ಲಿಷಿನ limerick ...

ಶಬ್ದವೇದಿಯ ತಾತ್ಪರ್ಯ

Image
ಈ ಲೇಖನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕ್ಷಮೆ ಬೇಡುತ್ತಾ... ಶಬ್ದವೇಧಿ ಎಂದಾಗ ಕೆಲವು ಕಥೆಗಳು ನೆನಪಿಗೆ ಬರುತ್ತವೆ. ಏಕಲವ್ಯ ನ ಕಥೆಯಂತೂ ಪ್ರಸಿದ್ಧ. ಶ್ರವಣಕುಮಾರ ನ ಕಥೆಯೂ ಇದೆ. ಇಲ್ಲಿ ಶಬ್ದವೇಧಿ ಎಂದರೆ ಶಬ್ದಮಾತ್ರದಿಂದ ದಿಕ್ಕನ್ನು ಗ್ರಹಿಸಿ ಗುರಿಯಿಟ್ಟು ಬಾಣ ಹೊಡೆಯುವ ಕಲೆ. ಇಲ್ಲೆಲ್ಲಾ ಶಬ್ದವೇಧಿ ಎಂದರೆ ಅವಿವೇಕದ ಪ್ರತೀಕವೇ. ವಿದ್ಯೆಯೇನೋ ಚಮತ್ಕಾರಿಯೇ ಆದರೂ, ಅದನ್ನು ಪ್ರಯೋಗಿಸಿದವನ ಉದ್ದೇಶ ಸರಿಯೇ ಇದ್ದರೂ,  ಈ ಕಥೆಗಳಲ್ಲಿ ಅದರ ಪರಿಣಾಮ ಮಾತ್ರ ವಿದ್ಯೆ, ಉದ್ದೇಶಗಳೆಲ್ಲವನ್ನೂ ಮೀರಿ ವಿಪರೀತವಾಗುತ್ತದೆ. ಶಬ್ದ ಎಂದರೆ ಕನ್ನಡದಲ್ಲಿ ಮಾತೂ ಹೌದು. ಮಾತು ಎಂದರೆ ಕನ್ನಡದಲ್ಲಿ ಪ್ರತಿಜ್ಞೆ , ವಾಗ್ದಾನ ಎಂದೂ ಆಗುತ್ತದೆ. ಹೀಗೆ, ಯುದ್ಧದಲ್ಲಿ ರಥದ ಚಕ್ರಕ್ಕೆ ಬೆರಳು ಕೊಟ್ಟು ಜೀವ ಉಳಿಸಿದ ಕೈಕೇಯಿಗೆ ದಶರಥ ಕೊಟ್ಟ ವಾಗ್ದಾನ, ಏಕಲವ್ಯನ ಕಥೆಯಲ್ಲಿ ದ್ರೋಣ ಅರ್ಜುನನಿಗೆ ಕೊಟ್ಟ ವಾಗ್ದಾನ, ಇವೂ ಬಂದು ಸೇರುತ್ತವೆ. ಇಲ್ಲೂ, ಮಾತು ಕೊಟ್ಟವರು (ಮಾತಿನ ಬಾಣ ಬಿಟ್ಟವರು) ದುರಂತನಾಯಕರೇ . ಶಬ್ದವೇಧಿಗಳೇ. ಅವರ ಪ್ರತಿಜ್ಞಾಪಾಲನೆಯ ಪರಿಣಾಮ ವಿಪರೀತವೇ. ಸ್ವಲ್ಪ ಸ್ವಾತಂತ್ರ್ಯವಹಿಸಿದರೆ, ಕಾಮದಹನ ದ ಕಥೆಯೂ ಇಲ್ಲಿ ಪ್ರಸ್ತುತ. ಹಾಗೆಯೇ, ಶಬ್ದವನ್ನು ಆಯುಧವೆಂದು ತಿಳಿದವರೂ ಶಬ್ದವೇಧಿಗಳೇ. ಇಂಥವರಿಗೂ ಹೆಚ್ಚು ಹುಡುಕಬೇಕಾಗಿಲ್ಲ. ನಮ್ಮ ಸುತ್ತಲೂ ತುಂಬ...