ನಿಸ್ವನ - ಮುಗಿದಿತ್ತು ಬೀದಿಮಾತು
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಅಂಬಿಕಾತನಯದತ್ತರ "ಮುಗಿದಿತ್ತು ಬೀದಿಮಾತು" ಎಂಬ ಈ ಕವನ, ಅವರ "ಹೃದಯ ಸಮುದ್ರ" ಸಂಕಲನದಲ್ಲಿದೆ.
ಈ ಹಾಡಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಹಾಗೂ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಹೇಮಂತ್ ರಾಗಗಳಿಂದ ಪ್ರೇರಿತವಾದ ರಾಗಸಂಯೋಜನೆಗೆ, ಹಿತವಾದ ಗಿಟಾರ್ ಹಾಗೂ ತಾಳವಾದ್ಯಗಳ ಹಿನ್ನೆಲೆಯಿದೆ.
ಇಡೀ ಕವನ ಹೀಗಿದೆ.
ಮುಗಿದಿತ್ತು ಬೀದಿಮಾತು
೧
ನೆಲ ಹೊರಳುತಿತ್ತು
ನೀರುರುಳುತಿತ್ತು
ಬೆಳಕರಳುತಿತ್ತು ಆಗ.
೨
ಬಿರುಗಾಳಿ ಧೂಳಿ
ಆಕಾಶ ಕಾಳಿ
ಎತ್ತಿತ್ತು ಅಷ್ಟರಾಗ.
೩
ಅಬ್ಬಬ್ಬ ಚುಕ್ಕೆ
ಏನೊಂದು ದಿಕ್ಕೆ
ಬಾನೆಲ್ಲ ತೂತು ತೂತು.
೪
ಬೆಂಕೆಲ್ಲ ಹೂತು
ಮೌನಕ್ಕೆ ಸೋತು
ಮುಗಿದಿತ್ತು ಬೀದಿಮಾತು.
- ಅಂಬಿಕಾತನಯದತ್ತ
ಹೃದಯ ಸಮುದ್ರ: 54
ಪ್ರಕಾಶನ: 1956
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment