ನಿಸ್ವನ - ಅವ್ವಾ! ನಾನು ಎಲ್ಲಿಂದ ಬಂದೆ?

ನಿಸ್ವನದ ಭಾಗವಾಗಿ...

  • ಕವನ: ಅಂಬಿಕಾತನಯದತ್ತ
  • ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
  • ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
  • ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
  • ಸಿತಾರ್: ಅರ್ಜುನ್ ಆನಂದ್
  • ಕೀಬೋರ್ಡ್: ಟೋನಿ ಮ್ಯಾಥ್ಯೂ
  • ರಿದಮ್ ಪ್ಯಾಡ್: ವರದರಾಜ್
  • ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್

ಇಡೀ ಕವನ ಹೀಗಿದೆ.

ಅವ್ವಾ! ನಾನು ಎಲ್ಲಿಂದ ಬಂದೆ?

ಅವ್ವಾ! ನಾನು ಎಲ್ಲಿಂದ ಬಂದೆ?

ಅವ್ವಾ! ನನ್ನ ಎಲ್ಲಿಂದ ತಂದೆ?

ನೀ ನನ್ನ ಆಟದಾ ಗೊಂಬಿಯಾಗಿದ್ದೀ-ಕಂದಾ

ಮೂರ್ತಿ ಮಾಡಿದೆ ನಿನ್ನ ಅರಲು ಮಿದ್ದಿಽ||

ಮನೆ ದೇವರ ಬೇಡಿ ಮಾಡಿದೆ ನಿದ್ದಿಽ-ಕಂದಾ

ನನ್ನಾ ಉಡಿಯಲ್ಲಿ ನೀ ಬಂದು ಬಿದ್ದೀ||

ನನ್ನಜ್ಜಿಯಾ ಗೆಜ್ಜಿವಸ್ತ್ರವಾಗಿದ್ದಿಽ-ಕಂದಾ

ಕುಲದೇವಿಯಾ ಕೈಯಾ ಶಸ್ತ್ರವಾಗಿದ್ದಿ!||

ದೊಡ್ಡವಳು ನಾನಾದೆ ನೀನಾದೆ ಸಿದ್ಧಿಽ-ಕಂದಾ

ಎದೆಹಾಲು ತೊರೆಸುತ್ತ ತೊಡೆಗೆ ಬಂದಿದ್ದಿಽ||

ಮಿಂಚಿನೊಲು ನೀ ಬಂದಿ ಸಂಚಿತದೊಳಿದ್ದಿ-ಕಂದಾ

ಹೋದಿ-ಗೀದೀ ಎಂದು ಹೌಹಾರಿ ಬುದ್ಧಿ||

ಎದೆಗೆದೆಯನವಿಚುತ್ತ ಮಾಡುವೆನು ಮುದ್ದಿ-ಕಂದಾ

ನಿನ್ನ ಹೃದಯಕೆ ವೇದ್ಯ ಹೃದಯದೀ ಸುದ್ದಿ!||


- ಅಂಬಿಕಾತನಯದತ್ತ

ಶತಮಾನ: ಅಪ್ರಕಟಿತ

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ