ನಿಸ್ವನ - ಮೋಡಗಳು ನಾವು
- ಕವನ: ಚನ್ನವೀರ ಕಣವಿ
- ಕವನದ ಕಾಪೀರೈಟ್: ಪ್ರಿಯದರ್ಶಿ ಕಣವಿ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗೆ ಒಗ್ಗುವಂಥ, ಕರ್ನಾಟಕ ಶಾಸ್ತ್ರೀಯ ಸಂಗೀತದ ಗರುಡಧ್ವನಿ ರಾಗವನ್ನು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ ಕೊಳಲು, ವಯೊಲಿನ್/ಚೆಲ್ಲೋ ಹಿನ್ನೆಲೆಯಲ್ಲಿ ಕಾಣಬಹುದು.
ಇಡೀ ಕವನ ಹೀಗಿದೆ.
ಮೋಡಗಳು ನಾವು
೧
ಬಾನು ತನ್ನನವರತ ನೀಲಿಮೆಯ ದಿಟ್ಟಿಸುತ
ಕನಸುಗಳ ಕಾಣುತಿಹುದು;
ಮೋಡಗಳು ನಾವದರ ವಿಪರೀತ ಹುಚ್ಚುಗಳು
ನಮಗಿಲ್ಲ ಮನೆಯಾವುದೂ.
೨
ನಿತ್ಯತೆಯ ಮುಕುಟದಲಿ ನಕ್ಷತ್ರ ಹೊಳೆಯುತಿವೆ
ಸ್ಥಿರ ಲಿಖಿತ ರೂಪವಿಹುದು;
ನಮ್ಮದೋ ಬರಿ ಸೀಸಕಡ್ಡಿ ಬರೆದಂತಿಹುದು-
ಮರು ಚಣದಿ ಅಳಿಸಬಹುದು.
೩
ವಾಯುರಂಗದಿ ಬಂದು ಮದ್ದಲೆಯ ಬಡಿಯುವದು
ನಗೆ ಮಿಂಚನೆಸೆವ ಪಾತ್ರ,
ಅಲ್ಲದೆಯೆ ನಮ್ಮ ನಗೆ ಮಳೆ ಸುರಿಸುವದು ಸತ್ಯ
ಹುಡುಗಾಟವಲ್ಲ ಗುಡುಗು.
೪
ಈಗಲೂ ಪ್ರತಿಫಲಕೆ ಕಾಲಪುರುಷನ ಕೂಡ
ಹಕ್ಕು ಸಾಧಿಸುತಿಲ್ಲ ನಾವು.
ಜೀವ ತುಂಬಿದ ಉಸಿರೆ ಊದಿಬಿಡುವದು ದೂರ
ಹೆಸರೊಂದನೀವ ಮೊದಲು.
- ಚನ್ನವೀರ ಕಣವಿ
ಕಣವಿ ಸಮಗ್ರ ಕಾವ್ಯ: ಪುಟ 275
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment