ನಿಸ್ವನ - ಬೆಳಗುಜಾವ
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮುಖಾರಿ, ಹುಸೇನಿ ರಾಗಗಳನ್ನೂ, ಭೈರವಿ ರಾಗದ ಛಾಯೆಯನ್ನೂ, Jazz ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಿನ್ನೆಲೆಯಲ್ಲಿ ಕಾಣಬಹುದು.
ಇಡೀ ಕವನ ಹೀಗಿದೆ.
ಬೆಳಗುಜಾವ
೧
ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ,
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಂ ಎಂದು ಬಿಟ್ಟ ಮಾರ.
ಗುಡಿಗೋಪುರಕ್ಕು ಬಲೆ ಬೀಸಿ ಬಂದ ಅಗೊ ಬೆಳಕು-ಬೇಟೆಗಾರ.
೨
ನಿಶೆಯಳಿದ ಉಷೆಯ ಎಳನಗೆಯ ಬಗೆಗೆ ಸೋತಿರಲು ಜಗವು ಸವಿಗೆ
ಕಣ್ಣಿದಿರು ಒಂದು ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ;
ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು.
ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು.
೩
ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ.
ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ.
ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ
ಹೋದವರು ತಿರುಗಿ ಬಂದಾರೆ? ಅವರು ಬರಲಿಕ್ಕು ಇಲ್ಲ ಮರಳಿ.
೪
ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ?
ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರೆಯಕ್ಕೆ ಬೇರೆ ಹೊತ್ತೆ?
- ಅಂಬಿಕಾತನಯದತ್ತ
ಮುಕ್ತಕಂಠ: 5
ಪ್ರಕಾಶನ: 1956
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment