Posts

Showing posts with the label ಸಂಧ್ಯಾವಂದನೆ

ನಿಸ್ವನ - ಸಂಧ್ಯಾವಂದನೆ

Image
ನಿಸ್ವನದ ಭಾಗವಾಗಿ... ಕವನ/ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ/ಕೀಬೋರ್ಡ್:  ಬಾಲಕೃಷ್ಣ ರಾವ್ "ನಿಸ್ವನ"ದ ಕಲ್ಪನೆ , ನನ್ನದೇ ಕವನವಾದ "ಸಂಧ್ಯಾವಂದನೆ"ಯೊಂದಿಗೆ ಸದ್ಯಕ್ಕೆ ಕೊನೆಗೊಳ್ಳುತ್ತದೆ. ಇದು ಹಲವು ಸಂಗೀತಶೈಲಿಗಳ (ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಹಾಗೂ Jazz), ಜ್ಞಾನಮೀಮಾಂಸೆಯ ಹಲವು ಮುಖಗಳ, ಅವೆಲ್ಲಕ್ಕೂ ಮಿಗಿಲಾಗಿ, ತೆರೆಯ, ಮರೆಯ, ಕೊನೆಯಿರದ ಸಂಜೆಯ ಧ್ಯಾನ. ಇಲ್ಲಿ, ಗ್ರಹಭೇದ ದಿಂದ ಪ್ರೇರಿತವಾಗಿ, ಷಡ್ಜ ಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹೈಮವತಿ , ರಿಷಭಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಸಂತ್ ಮುಖಾರಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ವಕುಳಾಭರಣ ಹಾಗೂ ಪಂಚಮಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ natural minor scale ( aeolean mode  in G or G minor ) ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗ...