ನಿಸ್ವನ - ಮನದ ಮಲ್ಲಿಗೆ

ನಿಸ್ವನದ ಭಾಗವಾಗಿ...

  • ಕವನ: ಪಿ ಕೆ ಪರಮೇಶ್ವರ ಭಟ್
  • ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ
  • ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
  • ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
  • ಕೀಬೋರ್ಡ್: ಟೋನಿ ಮ್ಯಾಥ್ಯೂ
  • ರಿದಮ್ ಪ್ಯಾಡ್: ವರದರಾಜ್
  • ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಪಿ ಕೆ ಪರಮೇಶ್ವರ ಭಟ್ಟರ ಈ ಕವನ, ಅವರ "ಮನದ ಮಲ್ಲಿಗೆ" ಕವನಸಂಕಲನಕ್ಕೆ ಶೀರ್ಷಿಕೆಯನ್ನೊದಗಿಸಿದೆ. 
ಈ ಹಾಡು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ Aeolian mode ಅಥವಾ natural minor scale ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದಲ್ಲಿದೆ.

ಇಡೀ ಕವನ ಹೀಗಿದೆ.

ಮನದ ಮಲ್ಲಿಗೆ

ಬದುಕು ಸಂಪದ ಮಮತೆ ಮೈಸಿರಿ

    ನಾಳಿನಾಸೆಯ ಸಂಪುಟ!

ಜಾರುನೆಲವಿದು ಏಳುಬೀಳುಗಳೆಲ್ಲ

    ಕಾಣದ ಸಂಕಟ

ಒಲವು ಒಗೆತನ ಸಿರಿಯು ಬಡತನ

    ಕನಸಿನರಮನೆ ಬಾವುಟ!

ಮನದ ಮಲ್ಲಿಗೆ ಬಾಡದಂತಿರೆ

    ನೆಲದ ಸಂಪದದಾವುಟ!

ಒಲಿದ ಮನಗಳ ಕುಸಿದ ಗೋಪುರ

    ಹರಕು ಭೂಪಟರೇಖೆಯೋ?

ಬಿರಿದ ಒಮ್ಮತವಿರದ ಬಳಗದ

    ಕಳೆದ ದುಗುಡದ ಛಾಯೆಯೋ?

ನುಡಿದ ಮಾತಿನ ಸೊಲ್ಲು ಸರಿಗಮ,

    ಎಲ್ಲೊ ಕೇಳಿದ ಗಾಯನ!

ಆತ್ಮಚೇತನ-ಸೇವೆ-ಹಿರಿತನ,

    ಸ್ವಾರ್ಥಲೇಪದ ಚಿಂತನ!

ನೊಂದ ನೋವಿನ, ಮರೆದ ಮುಗಿಲಿನ

    ಪ್ರೇಮದೊರತೆಯೆ ಜೀವನ!

ಮನದ ಮಲ್ಲಿಗೆ ಅರಳುವಂತಿರೆ

    ಕಂಪನೆರೆಯುತ ಹೂವಿನ!

- ಪಿ ಕೆ ಪರಮೇಶ್ವರ ಭಟ್

ಮನದ ಮಲ್ಲಿಗೆ, ಪುಟ 10

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ