ನಿಸ್ವನ - ಅವ್ವಾ! ನಾನು ಎಲ್ಲಿಂದ ಬಂದೆ?
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್ ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ಸಿತಾರ್: ಅರ್ಜುನ್ ಆನಂದ್ ಕೀಬೋರ್ಡ್: ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಇಡೀ ಕವನ ಹೀಗಿದೆ. ಅವ್ವಾ! ನಾನು ಎಲ್ಲಿಂದ ಬಂದೆ? ೧ ಅವ್ವಾ! ನಾನು ಎಲ್ಲಿಂದ ಬಂದೆ? ಅವ್ವಾ! ನನ್ನ ಎಲ್ಲಿಂದ ತಂದೆ? ೨ ನೀ ನನ್ನ ಆಟದಾ ಗೊಂಬಿಯಾಗಿದ್ದೀ-ಕಂದಾ ಮೂರ್ತಿ ಮಾಡಿದೆ ನಿನ್ನ ಅರಲು ಮಿದ್ದಿಽ|| ೩ ಮನೆ ದೇವರ ಬೇಡಿ ಮಾಡಿದೆ ನಿದ್ದಿಽ-ಕಂದಾ ನನ್ನಾ ಉಡಿಯಲ್ಲಿ ನೀ ಬಂದು ಬಿದ್ದೀ|| ೪ ನನ್ನಜ್ಜಿಯಾ ಗೆಜ್ಜಿವಸ್ತ್ರವಾಗಿದ್ದಿಽ-ಕಂದಾ ಕುಲದೇವಿಯಾ ಕೈಯಾ ಶಸ್ತ್ರವಾಗಿದ್ದಿ!|| ೫ ದೊಡ್ಡವಳು ನಾನಾದೆ ನೀನಾದೆ ಸಿದ್ಧಿಽ-ಕಂದಾ ಎದೆಹಾಲು ತೊರೆಸುತ್ತ ತೊಡೆಗೆ ಬಂದಿದ್ದಿಽ|| ೬ ಮಿಂಚಿನೊಲು ನೀ ಬಂದಿ ಸಂಚಿತದೊಳಿದ್ದಿ-ಕಂದಾ ಹೋದಿ-ಗೀದೀ ಎಂದು ಹೌಹಾರಿ ಬುದ್ಧಿ|| ೭ ಎದೆಗೆದೆಯನವಿಚುತ್ತ ಮಾಡುವೆನು ಮುದ್ದಿ-ಕಂದಾ ನಿನ್ನ ಹೃದಯಕೆ ವೇದ್ಯ ಹೃದಯದೀ ಸುದ್ದಿ!|| - ಅಂಬಿಕಾತನಯದತ್ತ ಶತಮಾನ: ...