Posts

Showing posts from February, 2022

ನಿಸ್ವನ - ಬೆಳಗು

Image
   ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾಂಭೋಜಿ ರಾಗ ಅಧಾರವಾಗಿದೆ. ಇಡೀ ಕವನ ಹೀಗಿದೆ. ಬೆಳಗು ೧ ಮೂಡಲ ಮನೆಯಾ ಮುತ್ತಿನ ನೀರಿನ ಎರಕಽವ ಹೊಯ್ದಾ ನುಣ್ಣ-ನ್ನೆರಕಽವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ. ಹೋಯ್ತೋ-ಜಗವೆಲ್ಲಾತೊಯ್ದಾ ೨ ರತ್ನದರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು. ೩ ಎಲೆಗಳ ಮೇಲೇ ಹೂಗಳ ಒಳಗೇ ಅಮೃತಽದ ಬಿಂದು ಕಂಡವು-ಅಮೃತಽದ ಬಿಂದು ಯಾರಿರಿಸಿರುವರು ಮುಗಿಲಽಮೇಲಿಂ- ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು. ೪ ತಂಗಾಳೀಯಾ ಕೈಯೊಳಗಿರಿಸೀ ಎಸಳೀನಾ ಚವರಿ ಹೂವಿನ-ಎಸಳೀನಾ ಚವರಿ ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ-ಮೈಯೆಲ್ಲಾ ಸವರಿ. ೫ ಗಿಡಗಂಟೆಯಾ ಕೊರಳೊಳಗಿಂದ ಹಕ್ಕೀಗಳ ಹಾಡು ಹೊರಟಿತು-ಹಕ್ಕೀಗಳ ಹಾಡು. ಗಂಧರ್ವರಾ ಸೀಮೆಯಾಯಿತು ಕಾಡಿನಾ ನಾಡು ಕ್ಷಣದೊಳು-ಕಾಡಿನಾ ನಾಡು. ೬ ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದೀತೀ ದೇಹ ಸ್ಪರ್ಶಾ-ಪಡೆದೀತೀ ದೇಹ. ಕೇಳಿತು ಕಿವಿಯು

ನಿಸ್ವನ - ಜೊಂಪಿಸಿತ್ತು ಮಣ್ಣು

Image
  ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್ ಬಾನ್ಸುರೀ: ಆನಂದ ಪ್ರಸನ್ನ ಪಟ್ಟನಾಯಕ್ ( ಫ಼್ಲೂಟ್ ಬುಟ್ಟೋ ) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್: ಟೋನಿ ಮ್ಯಾಥ್ಯೂ ಸಿತಾರ್: ಸುಬ್ರಹ್ಮಣ್ಯ ಹೆಗಡೆ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಈ ಹಾಡಿನ ಪಲ್ಲವಿ ಹಾಗೂ ಮೊದಲ ಚರಣಕ್ಕೆ ಕರ್ನಾಟಕ ಸಂಗೀತದ ಮೋಹನ ಕಲ್ಯಾಣಿ ರಾಗದ ಹಾಗೂ ಕೊನೆಯ ಚರಣಕ್ಕೆ  ಕೇದಾರಗೌಳ ರಾಗದ ಆಧಾರವಿದೆ. ಕೊನೆಯ ಚರಣದಲ್ಲಿ ಕೇದಾರಗೌಳವನ್ನು, ಮೋಹನಕಲ್ಯಾಣಿಯ ರಿಷಭವನ್ನು ಷಡ್ಜವಾಗಿಸಿ, ಗ್ರಹಭೇದದೊಂದಿಗೆ ಬಳಸಲಾಗಿದೆ. ಇಡೀ ಕವನ ಹೀಗಿದೆ. ಜೊಂಪಿಸಿತ್ತು ಮಣ್ಣು ೧ ಜೊಂಪಿಸಿತ್ತು ಮಣ್ಣು ಮಣ್ಣು ಎವೆ ತೆರೆಯದ ಕೂಸು-ಕಣ್ಣು ಮೊಳಕೆ ಬರದೆ ಗಣಿಕೆಗಣ್ಣು ಎಲ್ಲೊ ಇತ್ತು ಚಿಗುರುಬಣ್ಣ ಹೂಹೂವಿನ ಚಿತ್ರವರ್ಣ ೨ ನಿದ್ರಿಸುತಿದೆ ಕಂಪಕಂಪ ಅಡಗಿದೆ ಎಲೆ ಪಸರ ಜೊಂಪ ಸವಿ ನುಂಗಿದೆ ತನ್ನ ಹಂಪ ಬಸಿರು ಬಯಲು ಪೊಳ್ಳುಗುಂಭ ೩ ಬಂಜೆಗಾಳಿ ಅದರ ತುಂಬ ಜಪಿಸುತಿರೋ ಶಪಿಸದಿರು ಕುಪಿಸದಿರೋ ತಪಿಸುತಿರು ಉಸಿರು ಮಸೆದ ಉರಿಯು ಆಗ ಬೇಗೆ ಹತ್ತಿದಂತೆ ಬೇಗ. ೪ ತಲೆಮೊಳೆವುದು ಬಿದ್ದ ಬಿತ್ತು; ಸಿಂಪಿ ತೆರೆದು ಬಹುದು ಮುತ್ತು. ಅಲ್ಲಿವರೆಗು ಮೌನ ಗುರು. ಅದರ ಶಿಷ್ಯ ನೀನಾಗಿರು. - ಅಂಬಿಕಾತನಯದತ್ತ ಹೃದಯ ಸಮುದ್ರ: 5

ನಿಸ್ವನ - ನಸುಕು ಬಂತು ನಸುಕು ೧

Image
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ:  ಆನಂದ ಪ್ರಸನ್ನ ಪಟ್ಟನಾಯಕ್ ( Flute Butto ) ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ  ಈಗಾಗಲೇ ಹಾಡಿದ್ದೇನೆ. ಅಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ನಂದ್ ಕಲ್ಯಾಣ್ ರಾಗವಾದರೆ, ಇಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ  ರಾಗ ಆಧಾರವಾಗಿದ್ದು,  ಕೇವಲ Jazz ಶೈಲಿಯಿಂದ ಪ್ರೇರಿತವಾದ ಗಿಟಾರಿನ ಹಿನ್ನೆಲೆಯಿದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂರ ಇದಕ್ಕೆ ಹತ್ತಿರವಾದ ರಾಗ.  ಇಡೀ ಕವನ ಹೀಗಿದೆ. ನಸುಕು ಬಂತು ನಸುಕು ೧ ಬೆಳಗು ಗಾಳಿ ತಾಕಿ ಚಳಿತು ಇರುಳ ಮರವು ಒಡೆದು ತಳಿತು ಅರುಣ ಗಂಧ ಹರುಹಿ ಒಳಿತು ನಸುಕು ಬಂತು ೨ ಬೆಳಕು ಬಳ್ಳಿ ಬಿಟ್ಟು ಕುಡಿ ಬಯಲಲೆತ್ತಿ ಹಗಲಗುಡಿ ಅಡಗಿಸಿಟ್ಟು ರವಿಯ ಮಿಡಿ ನಸುಕು ಬಂತು. ೩ ಬೆಳಗು ಸೂಸುತಿರಲು ಸುಸಿಲು ಅದನು ಮೂಸುತಿರಲು ಉಸಿಲು ಬೆಳಕು ಹೂತು ಆತು ಬಿಸಿಲು ನಸುಕು ಬಂತು. - ಅಂಬಿಕಾತನಯದತ್ತ ಗಂಗಾವತರಣ: 40 ಪ್ರಕಾಶನ: 1951 ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0 Internati