ನಿಸ್ವನ - ಹೃದಯ ಸಮುದ್ರ

ನಿಸ್ವನದ ಭಾಗವಾಗಿ...


  • ಕವನ: ಅಂಬಿಕಾತನಯದತ್ತ
  • ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
  • ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
  • ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
  • ಕೀಬೋರ್ಡ್: ಟೋನಿ ಮ್ಯಾಥ್ಯೂ
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್

ಇಡೀ ಕವನ ಹೀಗಿದೆ.

ಹೃದಯ ಸಮುದ್ರ

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ

ಮಿಂಚುಬಳಗ ತೆರೆತೆರೆಗಳಾಗಿ ಅಲೆೆಯುವದು ಪುಟ್ಟಪೂರಾ,

ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ.

ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ.

ಹರಿತಽ‌ದ ಭಾವ, ಬೆರಿತಽ‌ದ ಜೀವ, ಅದರೊಳಗೆ ಒಳಗೆ ಒಳಗೆ.

ಇದೆ ಸಮಯವಣ್ಣ, ಇದೆ ಸಮಯ ತಮ್ಮ, ನಮ್-ನಿಮ್ಮ ಆತ್ಮಗಳಿಗೆ.

ಅಂಬಿಗನು ಬಂದ ನಂಬಿಗನು ಬಂದ ಬಂದಽ‌ದ ದಿವ್ಯಗಳಿಗೆ.

ಇದು ಉಪ್ಪುನೀರ ಕಡಲಲ್ಲೊ: ನಮ್ಮ ಒಡಲಲ್ಲು ಇದರ ನೆಲೆಯು.

ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದಽ‌ದ ಇದರ ಬೆಲೆಯು.

ಸಿಕ್ಕಲ್ಲಿ ಅಲ್ಲ, ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು,

ಕಣ್ಣರಳಿದಾಗ, ಕಣ್-ಹೊರಳಿದಾಗ, ಹೊಳೆಯುವದು ಇದರ ಕಳೆಯು,

ಬಂದವರ ಬಳಿಗೆ ಬಂದಽ‌ದ ಮತ್ತು ನಿಂದವರ ನೆರೆಗು ಬಂದಽ‌ದೋ ಬಂದಽ‌ದ,

ನವಮನುವು ಬಂದ, ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದಽ‌ದೋ ಅಂದಽ‌ದ.

- ಅಂಬಿಕಾತನಯದತ್ತ

ಹೃದಯ ಸಮುದ್ರ: 1

ಪ್ರಕಾಶನ: 1956


Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License

These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Post a Comment

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ