ನಿಸ್ವನ - ಮನದ ಮಲ್ಲಿಗೆ
ನಿಸ್ವನದ ಭಾಗವಾಗಿ... ಕವನ: ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ಕೀಬೋರ್ಡ್: ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನ, ಅವರ "ಮನದ ಮಲ್ಲಿಗೆ" ಕವನಸಂಕಲನಕ್ಕೆ ಶೀರ್ಷಿಕೆಯನ್ನೊದಗಿಸಿದೆ. ಈ ಹಾಡು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ Aeolian mode ಅಥವಾ natural minor scale ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದಲ್ಲಿದೆ. ಇಡೀ ಕವನ ಹೀಗಿದೆ. ಮನದ ಮಲ್ಲಿಗೆ ೧ ಬದುಕು ಸಂಪದ ಮಮತೆ ಮೈಸಿರಿ ನಾಳಿನಾಸೆಯ ಸಂಪುಟ! ಜಾರುನೆಲವಿದು ಏಳುಬೀಳುಗಳೆಲ್ಲ ಕಾಣದ ಸಂಕಟ ೨ ಒಲವು ಒಗೆತನ ಸಿರಿಯು ಬಡತನ ಕನಸಿನರಮನೆ ಬಾವುಟ! ಮನದ ಮಲ್ಲಿಗೆ ಬಾಡದಂತಿರೆ ನೆಲದ ಸಂಪದದಾವುಟ! ೩ ಒಲಿದ ಮನಗಳ ಕುಸಿದ ಗೋಪುರ ಹರಕು ಭೂಪಟರೇಖೆಯೋ? ಬಿರಿದ ಒಮ್ಮತವಿರದ ಬಳಗದ ಕಳೆದ ದುಗುಡದ ಛಾಯೆಯೋ? ೪ ನುಡಿದ ಮಾತಿನ ಸೊಲ್ಲು ಸರಿಗಮ, ಎಲ್ಲೊ ಕೇಳಿದ ಗಾಯನ! ಆತ್ಮಚೇತನ-ಸೇವೆ-ಹಿರಿತನ, ಸ್ವಾರ್ಥಲೇಪದ ಚಿಂತನ! ೫ ನೊಂದ ನೋವಿನ, ಮರೆದ ಮುಗಿಲಿನ