ನಿಸ್ವನ - ಎಲ್ಲ ಮಲಗಿರುವಾಗ
ನಿಸ್ವನದ ಭಾಗವಾಗಿ... ಕವನ: ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ: ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್, ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ಕೀಬೋರ್ಡ್: ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ "ಎಲ್ಲ ಮಲಗಿರುವಾಗ" ಎಂಬ ಈ ಕವನ, ಅವರ "ನವಿಲ ದನಿ" ಸಂಕಲನದಲ್ಲಿದೆ. ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ , ಹಂಸಧ್ವನಿ , ಸುರನಂದಿನಿ , ತುಸುವಾಗಿ ಯಮನ್ ಕಲ್ಯಾಣಿ , ಮೋಹನ ಕಲ್ಯಾಣಿ ರಾಗಗಳು ಹಾಸುಹೊಕ್ಕಾಗಿವೆ. ಇಡೀ ಕವನ ಹೀಗಿದೆ. ಎಲ್ಲ ಮಲಗಿರುವಾಗ ೧ ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ, ಕಣ್ತುಂಬ ಹೊಂಗನಸು ಬೆಳಗಿನಲ್ಲಿ; ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ. ೨ ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ ಸತ್ತ ಹೂಗಳ ರಾಶಿ ಲತೆಯ ಕೆಳಗೆ; ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ ನಾ ಕಂಡೆ ಹರುಷವನು ಮುಗಿಲ ಕೆಳಗೆ. ೩ ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ, ಬೀಸುತ್