ನಿಸ್ವನ - ಮಳೆ
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ ರಾಗಸಂಯೋಜನೆ: ಅಂಶುಮಾನ್ ಕೆ ಆರ್ ಗಾಯನ: ಅಂಶುಮಾನ್ ಕೆ ಆರ್, ಮಾನಸ ಹೊಳ್ಳ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ಸಿತಾರ್: ಅರ್ಜುನ್ ಆನಂದ್ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್: ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಧ್ಯಮಾವತಿ ರಾಗವನ್ನು ತುಸು ಜಾನಪದ ಶೈಲಿಯಲ್ಲಿ, vocal harmonyಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಮಳೆ ೧ ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ ನೋಡೋಣ. ೨ ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ೩ ಕೋಲ್ಮಿಂಚು ಇಣುಕಿಣುಕಿ ಕಣ್ಕುಣಿಸಿ ಕೆಣಕೆಣಕಿ ಬಾ ಗೆಣೆಯ ಹೊರಗೆ ಎನುವಾಗ ಒಳಸೇರಿ ಹರೆ ಮೀರಿದ್ಹಾಂಗ ಕುಳಿತೇವೊ - ಅಂಬಿಕಾತನಯದತ್ತ ಉಯ್ಯಾಲೆ: 66 ಪ್ರಕಾಶನ: 1938 ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ