Posts

Showing posts from May, 2020

ಸರಸ್ವತೀ ತಾತ್ಪರ್ಯ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕ್ಷಮೆ ಬೇಡುತ್ತಾ... ಕವನ ದ ಮೊದಲು ಅದರ ಛಂದಸ್ಸ ನ್ನು ಸ್ವಲ್ಪ ವಿವರಿಸಬೇಕೆನ್ನಿಸುತ್ತದೆ. ಅಕ್ಷರಗಣ ಗಳ ವರ್ಣವತ್ತಗಳು ಮತ್ತು  ಮಾತ್ರಾಗಣ  ಛಂದಸ್ಸುಗಳು ಸಂಸ್ಕೃತ, ಪ್ರಾಕೃತಗಳಿಂದ ಬಂದು ಕನ್ನಡದವೇ ಆದವು. ಅಂಶಗಣ ಛಂದಸ್ಸುಗಳು ಮೊದಲಿನಿಂದಲೂ ಕನ್ನಡದವೇ. ಯಾಕೋ ಅಂಶಗಣ ಛಂದಸ್ಸುಗಳ ಬಳಕೆ ಸಮಕಾಲೀನ ಕವನಗಳಲ್ಲಿ ಕಡಿಮೆಯಾಗಿದೆ, ಆಗುತ್ತಿದೆ ಅಂತ ನನ್ನ ಅನಿಸಿಕೆ. ಸ್ವಲ್ಪ ಜಾನಪದವೆನ್ನಬಹುದಾದ ಶೈಲಿಯನ್ನು ಬಿಂಬಿಸುವ ಕಾರಣವೋ ಏನೋ. ಅದು ನನ್ನ ಸೀಮಿತ ಓದಿನ ತಪ್ಪು ಅಭಿಪ್ರಾಯವೂ ಇರಬಹುದು. ಏನೇ ಇರಲಿ, ನಾನಂತೂ ಅಂಶಗಣಗಳ ಸರಳ ಸೌಂದರ್ಯಕ್ಕೆ ಮಾರುಹೋಗಿದ್ದೇನೆ. ಅಂಶಗಣಗಳೊಳಗಿನ ಹದವಾದ ಎಳೆಯಾಟ ಕನ್ನಡಕ್ಕೆ ವಿಶೇಷ ಲಾಲಿತ್ಯವನ್ನು ಕೊಟ್ಟಿದೆ. ಇಲ್ಲಿ ಬಳಸಿರುವ ಅಂಶಗಣ ಛಂದಸ್ಸು ಛಂದೋವತಂಸ .  ನಾಗವರ್ಮ ಹೇಳಿದಂತೆ, ಇದಕ್ಕೆ ಅಂಶಗಣಗಳ ನಾಲ್ಕು ಪಾದಗಳು. ಪ್ರತಿಯೊಂದು ಪಾದದಲ್ಲಿ 3 ವಿಷ್ಣುಗಣಗಳಾದಮೇಲೆ ಕಡೆಗೊಂದು ಬ್ರಹ್ಮಗಣ. ಆದರೆ ಪಾದಾಂತ್ಯದಲ್ಲಿ ಬ್ರಹ್ಮಗಣಗಳ ಏಕತಾನತೆ ತಪ್ಪಿಸಲಿಕ್ಕಾಗಿ, ಮೂರನೇ ಪಾದಾಂತ್ಯಕ್ಕೆ ವಿಷ್ಣುಗಣಾದೇಶಮಾಡಿ, ಪಾದವನ್ನು ಎರಡು ಭಾಗ ಮಾಡಿ, ಈ ಭಾಗಗಳು ಸರಿಯಾಗಿ ಕಾಣಿಸಲು ಬೇರೊಂದು ಅಂತ್ಯಪ್ರಾಸವನ್ನೂ ಅಳವಡಿಸಿದ್ದೇನೆ. ಹೀಗಾಗಿ ಇದು 5 ಪಾದಗಳ ಇಂಗ್ಲಿಷಿನ limerick ...