ನಿಸ್ವನ - ಅಗೋ ಅಲ್ಲಿ ದೂರದಲ್ಲಿ
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ ಗಾಯನ: ವಾರಿಜಾಶ್ರೀ ರಾಗಸಂಯೋಜನೆ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ ರಿದಮ್ ಪ್ಯಾಡ್: ವರದರಾಜ್ ಕೀಬೋರ್ಡ್: ಟೋನಿ ಮ್ಯಾಥ್ಯೂ ಕೀಬೋರ್ಡ್ /ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಗಣರಾಜ್ಯೊತ್ಸವದ ಶುಭಾಶಯಗಳೊಂದಿಗೆ, ವಾರಿಜಾಶ್ರೀ ಯವರ ಮಧುರಕಂಠದಲ್ಲಿ ಅಂಬಿಕಾತನಯದತ್ತ ರ " ಅಗೋ ಅಲ್ಲಿ ದೂರದಲ್ಲಿ " (ಅವರ " ನಾದಲೀಲೆ " ಸಂಕಲನದಲ್ಲಿದೆ). ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಾಂಡ್ ರಾಗದಲ್ಲಿರುವ ಈ ಹಾಡಿನ ಹಿನ್ನೆಲೆಯಲ್ಲಿ ಗಿಟಾರ್, ಸಂತೂರ್ (ಕೀಬೋರ್ಡಿನಲ್ಲಿ ಹೇಮಂತ್ ಕುಮಾರ್ ಅವರು ನುಡಿಸಿರುವುದು)-ಗಳು ಶ್ರಾವಣದ ಮಳೆ ಹನಿಗಳಂತೆ ಎಡೆಬಿಡದೆ ಸುರಿಯುತ್ತವೆ. ಇಡೀ ಕವನ ಹೀಗಿದೆ. ಅಗೋ ಅಲ್ಲಿ ದೂರದಲ್ಲಿ ೧ ಅಗೋ ಅಲ್ಲಿ ದೂರದಲ್ಲಿ ನೆಲದ ಮುಗಿಲ ಮಗ್ಗುಲಲ್ಲಿ ಹಸಿರಿನ ಹಸುಗೂಸದೊಂದು ಆಗ ಈಗ ಹೊರಳುತಿಹುದು ಏನೋ ಎಂತೊ ಒರಲುತಿಹುದು ಆಽ ಹಸಿರ ಒಳಗೆ ಹೊರಗೆ ನೀರ ಬೆಳಕ ತುಣುಕು ಮಿಣುಕು, ಅಲ್ಲಿನಿಂದ ಬಂದೆಯಾ! ಕುಣಿವ ಮಣಿವ ಹೆಡೆಯ ಹಾವು- ಗಳನು ಹಿಡಿದು ತಂದೆಯಾ? ೨ ಏಕೆ ಬಂದೆ? ಏನು ತಂದೆ? ಹೇಳೊ ಹೇಳು ಶ್ರಾವಣಾ ನೀ