Posts

Showing posts from July, 2022

ಕನ್ನಡದ ಭಕ್ತಿ - ದ್ರಾವಿಡಭಾಷೆಗಳ ವಿಶೇಷಸ್ವರಗಳು

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಭಾರತೀಯ ಭಾಷೆಗಳ ವರ್ಣಮಾಲೆಗಳಲ್ಲಿ ಬಹಳಷ್ಟು ಸಮಾನಾಂಶಗಳು ಕಾಣುತ್ತವೆ. ಸ್ವರ ಗಳು (vowels), ಯೋಗವಾಹ ಗಳು, ವರ್ಗೀಯ ವ್ಯಂಜನ ಗಳು, ಅವರ್ಗೀಯ ವ್ಯಂಜನ ಗಳೆಂದೇ ಹೆಚ್ಚಿನ ಭಾಷೆಗಳ ವರ್ಣಮಾಲೆಗಳು ಸಂಯೋಜಿತವಾಗಿವೆ. ಸಂಸ್ಕೃತವ್ಯಾಕರಣಶಾಸ್ತ್ರದ ಪ್ರಭಾವ ಇತರ ಭಾಷೆಗಳ ಮೇಲೆ ಸಾಕಷ್ಟು ಆಗಿರುವುದೇ ಇದಕ್ಕೆ ಕಾರಣವೆನ್ನಬಹುದು. ಅಷ್ಟಲ್ಲದೆ, ಈ ಎಲ್ಲ ಭಾಷೆಗಳ ವರ್ಣಮಾಲೆಗಳಲ್ಲಿ ಹಲವು ವರ್ಣಗಳೂ ಸಮಾನವಾಗಿಯೇ ಇವೆ. ಭಾರತೀಯ ಲಿಪಿಗಳ ವರ್ಣಗಳು ಅಕ್ಷರೋಚ್ಚಾರಣೆಗೆ ಹತ್ತಿರವಾಗಿರಲು ( phonetic ) ಪ್ರಯತ್ನಿಸುತ್ತವಷ್ಟೇ. ಆದರೆ ಯಾವ ಲಿಪಿಯೂ ಅಕ್ಷರೋಚ್ಚಾರಣೆಯನ್ನು ಪೂರ್ತಿಯಾಗಿ ಬಿಂಬಿಸುವುದು ದುಃಸಾಧ್ಯ . ಹಾಗಿದ್ದರೂ, ಭಾರತೀಯಭಾಷೆಗಳ ಅಕ್ಷರೋಚ್ಚಾರಣೆಯಲ್ಲೂ ಬಹಳ ಸಾಮ್ಯವಿರುವುದನ್ನು ಅಲ್ಲಗಳೆಯಲಾಗದು. ಸ್ಥೂಲವಾಗಿ ಹೀಗೆನ್ನಬಹುದು. ಅ, ಆ, ಇ, ಈ, ಉ, ಊ, ಏ, ಐ, ಓ, ಔ - ಸಾಮಾನ್ಯ ಸ್ವರಗಳು ಅಂ - ಸಾಮಾನ್ಯ ಅನುಸ್ವಾರ ಕ, ಗ, ಙ, ಚ, ಜ, ಞ, ಟ, ಡ, ಣ, ತ, ದ, ನ, ಪ, ಬ, ಮ - ಸಾಮಾನ್ಯ ವರ್ಗೀಯ ವ್ಯಂಜನಗಳು ಯ, ರ, ಲ, ವ, ಸ, ಳ - ಸಾಮಾನ್ಯ ಅವರ್ಗೀಯ ವ್ಯಂಜನಗಳು ಬೇರೆ ಬೇರೆ ಭಾಷೆಗಳಲ್ಲಿ ಇವಕ್ಕೂ ಹೆಚ್ಚಿನ ಇತರ ವರ್ಣಗಳೂ, ಅಕ್ಷರಗಳೂ ಇರಬಹುದು. ಉದಾಹರಣೆಗೆ, ಸಂಸ್ಕೃತದಲ್ಲಿ ऋ, ऋ, ऌ