ನಿಸ್ವನ - ಹೃದಯ ಸಮುದ್ರ
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಕೀಬೋರ್ಡ್: ಟೋನಿ ಮ್ಯಾಥ್ಯೂ ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಇಡೀ ಕವನ ಹೀಗಿದೆ. ಹೃದಯ ಸಮುದ್ರ ೧ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ ಮಿಂಚುಬಳಗ ತೆರೆತೆರೆಗಳಾಗಿ ಅಲೆೆಯುವದು ಪುಟ್ಟಪೂರಾ, ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ. ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರಾ. ೨ ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ. ಹರಿತಽದ ಭಾವ, ಬೆರಿತಽದ ಜೀವ, ಅದರೊಳಗೆ ಒಳಗೆ ಒಳಗೆ. ಇದೆ ಸಮಯವಣ್ಣ, ಇದೆ ಸಮಯ ತಮ್ಮ, ನಮ್-ನಿಮ್ಮ ಆತ್ಮಗಳಿಗೆ. ಅಂಬಿಗನು ಬಂದ ನಂಬಿಗನು ಬಂದ ಬಂದಽದ ದಿವ್ಯಗಳಿಗೆ. ೩ ಇದು ಉಪ್ಪುನೀರ ಕಡಲಲ್ಲೊ: ನಮ್ಮ ಒಡಲಲ್ಲು ಇದರ ನೆಲೆಯು. ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದಽದ ಇದರ ಬೆಲೆಯು. ಸಿಕ್ಕಲ್ಲಿ ಅಲ್ಲ, ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು, ಕಣ್ಣರಳಿದಾಗ, ಕಣ್-ಹೊರಳಿದಾಗ, ಹೊಳೆಯುವದು ಇದರ ಕಳೆಯು, ೪ ಬಂದವರ ಬಳಿಗೆ ಬಂದಽದ ಮತ್ತು ನಿಂದವರ ನೆರೆಗು ಬಂದಽದೋ ಬಂದಽದ, ನವಮನುವು ಬಂದ, ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದಽದೋ ಅಂದಽದ. -