ಶಬ್ದವೇದಿಯ ತಾತ್ಪರ್ಯ
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕ್ಷಮೆ ಬೇಡುತ್ತಾ... ಶಬ್ದವೇಧಿ ಎಂದಾಗ ಕೆಲವು ಕಥೆಗಳು ನೆನಪಿಗೆ ಬರುತ್ತವೆ. ಏಕಲವ್ಯ ನ ಕಥೆಯಂತೂ ಪ್ರಸಿದ್ಧ. ಶ್ರವಣಕುಮಾರ ನ ಕಥೆಯೂ ಇದೆ. ಇಲ್ಲಿ ಶಬ್ದವೇಧಿ ಎಂದರೆ ಶಬ್ದಮಾತ್ರದಿಂದ ದಿಕ್ಕನ್ನು ಗ್ರಹಿಸಿ ಗುರಿಯಿಟ್ಟು ಬಾಣ ಹೊಡೆಯುವ ಕಲೆ. ಇಲ್ಲೆಲ್ಲಾ ಶಬ್ದವೇಧಿ ಎಂದರೆ ಅವಿವೇಕದ ಪ್ರತೀಕವೇ. ವಿದ್ಯೆಯೇನೋ ಚಮತ್ಕಾರಿಯೇ ಆದರೂ, ಅದನ್ನು ಪ್ರಯೋಗಿಸಿದವನ ಉದ್ದೇಶ ಸರಿಯೇ ಇದ್ದರೂ, ಈ ಕಥೆಗಳಲ್ಲಿ ಅದರ ಪರಿಣಾಮ ಮಾತ್ರ ವಿದ್ಯೆ, ಉದ್ದೇಶಗಳೆಲ್ಲವನ್ನೂ ಮೀರಿ ವಿಪರೀತವಾಗುತ್ತದೆ. ಶಬ್ದ ಎಂದರೆ ಕನ್ನಡದಲ್ಲಿ ಮಾತೂ ಹೌದು. ಮಾತು ಎಂದರೆ ಕನ್ನಡದಲ್ಲಿ ಪ್ರತಿಜ್ಞೆ , ವಾಗ್ದಾನ ಎಂದೂ ಆಗುತ್ತದೆ. ಹೀಗೆ, ಯುದ್ಧದಲ್ಲಿ ರಥದ ಚಕ್ರಕ್ಕೆ ಬೆರಳು ಕೊಟ್ಟು ಜೀವ ಉಳಿಸಿದ ಕೈಕೇಯಿಗೆ ದಶರಥ ಕೊಟ್ಟ ವಾಗ್ದಾನ, ಏಕಲವ್ಯನ ಕಥೆಯಲ್ಲಿ ದ್ರೋಣ ಅರ್ಜುನನಿಗೆ ಕೊಟ್ಟ ವಾಗ್ದಾನ, ಇವೂ ಬಂದು ಸೇರುತ್ತವೆ. ಇಲ್ಲೂ, ಮಾತು ಕೊಟ್ಟವರು (ಮಾತಿನ ಬಾಣ ಬಿಟ್ಟವರು) ದುರಂತನಾಯಕರೇ . ಶಬ್ದವೇಧಿಗಳೇ. ಅವರ ಪ್ರತಿಜ್ಞಾಪಾಲನೆಯ ಪರಿಣಾಮ ವಿಪರೀತವೇ. ಸ್ವಲ್ಪ ಸ್ವಾತಂತ್ರ್ಯವಹಿಸಿದರೆ, ಕಾಮದಹನ ದ ಕಥೆಯೂ ಇಲ್ಲಿ ಪ್ರಸ್ತುತ. ಹಾಗೆಯೇ, ಶಬ್ದವನ್ನು ಆಯುಧವೆಂದು ತಿಳಿದವರೂ ಶಬ್ದವೇಧಿಗಳೇ. ಇಂಥವರಿಗೂ ಹೆಚ್ಚು ಹುಡುಕಬೇಕಾಗಿಲ್ಲ. ನಮ್ಮ ಸುತ್ತಲೂ ತುಂಬ...