ಅವತಾರ
ಈ ಕವನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಇಳೆ ತಾನೇ ಉರುಳುರುಳಿ ಋತುಗಳೂ ಮರಮರಳಿ ತಿಳಿಯಾದ ಮಂಜು ಸುಳಿಸುರುಳಿ || ಸುತ್ತಿದೆ ಇಳಿಯದ ನಂಜು ಏರುತ್ತಿದೆ! ಚಕ್ರವೇ ಉರುಳಲ್ಲ, ಮಣ್ಣಲ್ಲೇ ಹುರುಳಿಲ್ಲ ಶುಕ್ರನ ದೆಸೆಯೂ ಸರಿಯಿಲ್ಲ||ವೆಂದರೆ ವಕ್ರದೃಷ್ಟಿಯೆ ಬೇರೆ ಕಾಣಿಸಿದೆ! ಕರೆಕರೆದು ಬಂದದ್ದು, ಕಡೆಕಡೆದು ಬಿಟ್ಟದ್ದು, ಅರೆದರೆದು ಉಜ್ಜಿ ಬೆರೆಸುತ್ತಾ || ಇಟ್ಟದ್ದು, ಉರಿಸಿಟ್ಟ ಒಲೆಮೇಲೆ ಕಾಯುತ್ತಿದೆ. ತೆರೆಯದ ಅಂಗಳ ಪೊರೆಯದ ಕಂಗಳ ಹೊರೆಯದೆ ತಿಂಗಳೇ ಮೀರಿ||ಹೋಗಿದೆ ಬರೆಸುಟ್ಟ ಕಲೆಯೂ ಮಾಯುತ್ತಿದೆ. ಕಾಣಿಕೆ ಒಂದಲ್ಲ ಹಲವಾರು ಕೊಟ್ಟದ್ದು ಪೋಣಿಸಿದಂತೆಯೇ ಇತ್ತಲಿದೆ || ಹೂಡಿದ ಬಾಣದ ಕಣ್ಣಲ್ಲಿ ಕತ್ತಲಿದೆ. ನಾಕಾರು ಕನಸಲ್ಲಿ ಮೂಕವಾಗಿದೆ ಮನ ಏಕಾಗ್ರವಾದೀತೇ ಬತ್ತಳಿಕೆ? ಗುಡಿಯಲ್ಲಿ ಸಾಕಾರವಾದೀತೇ ಮೆರವಣಿಗೆ? ಮೋಡದ ಸೆರೆಯಿಂದ ಮಳೆಬಿಲ್ಲಿನೊಂದಿಗೆ ಹಾಡಿದ ತುಂತುರು ಗಾನ! ಕೇಳಿದರೆ ನೋಡದ ಕಡಲಿನ ಪಾನ! ಛಂದಸ್ಸು: (ಅಂಶಗಣಗಳ) ತ್ರಿಪದಿ. 6 ಮಾತ್ರೆಯ ಜಾನಪದ ಗತಿ. 2ನೇ ಪಾದಕ್ಕೆ ಪುನರಾವರ್ತನೆ. ಈ ಕವನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 In